About Us Advertise with us Be a Reporter E-Paper

Breaking Newsರಾಜ್ಯ

ಅಧಿಕಾರಿಗಳ ದಾಳಿ : ನಿಷೇಧಿತ 85 ಕೆಜಿ ಪ್ಲಾಸ್ಟಿಕ್ ವಶ

ಕೊಪ್ಪಳ: ಕೊಪ್ಪಳ ನಗರಸಭೆ ವತಿಯಿಂದ ನಗರದ ಜೆ.ಪಿ. ಮಾರ್ಕೆಟ್ ಬಳಿಯ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿ, ಸುಮಾರು 85 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶಕ್ಕೆೆ ಪಡೆದುಕೊಂಡಿದ್ದಾರೆ.

ಈಗಾಗಲೆ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ನಗರಸಭೆ ವತಿಯಿಂದ ನಿಷೇಧಿತ ಪ್ಲಾಸ್ಟಿಕ್ ಅನ್ನು ಬಳಸದಂತೆ ಹಾಗೂ ಮಾರಾಟ ಮಾಡದಂತೆ ಸಾಕಷ್ಟು ಜನ ಜಾಗೃತಿ ಮೂಡಿಸಲಾಗುತ್ತಿದೆ. ಆದಾಗ್ಯೂ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದ್ದು, ಹೀಗಾಗಿ ನಗರಸಭೆ ವತಿಯಿಂದ ನಗರದ ಜೆಪಿ ಮಾರ್ಕೆಟ್ ಬಳಿಯ ವಾಣಿಜ್ಯ ಮಳಿಗೆಗಳಿಗೆ ದಾಳಿ ನಡೆಸಲಾಯಿತು.

ಆರ್.ಆರ್.ಜನರಲ್ ಸ್ಟೋರ್ಸ್ ನಿಂದ 85 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಶಕ್ಕೆೆ ಪಡೆಯಲಾಯಿತು. ನಗರಸಭೆ ಪೌರಾಯುಕ್ತ ಸುನೀಲ್ ಪಾಟೀಲ್, ಪರಿಸರ ಅಭಿಯಂತರ ಅಶೋಕ್‌ಕುಮಾರ್, ನಗರಸಭೆ ವ್ಯವಸ್ಥಾಪಕ ಮಂಜುನಾಥ ಬೆಲ್ಲದ, ರಾಘವೇಂದ್ರ ದಾಳಿಯಲ್ಲಿ ಪಾಲ್ಗೊಂಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close