About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಸ್ಥಳೀಯ ಸಂಸ್ಥೆ ಚುನಾವಣೆ: 846 ಕೈ, 788 ಕಮಲ ಹಾಗೂ 307ರಲ್ಲಿ ದಳಕ್ಕೆ ಗೆಲುವು

ಬೆಂಗಳೂರು: ರಾಜ್ಯ ಸ್ಥಳೀಯ ಸಂಸ್ಥೆ ಚುನಾವಣಾ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆ ಕಾಂಗ್ರೆಸ್  846, ಬಿಜೆಪಿ 788 ಹಾಗೂ ಜೆಡಿಎಸ್ 307 ಸ್ಥಾನಗಳಲ್ಲಿ ಜಯ ಗಳಿಸಿದೆ.

ಒಟ್ಟಾರೇ, 2664 ಸ್ಥಾನಗಳಲ್ಲಿ ಇದುವರೆಗೂ ಬಂದಿರುವ ಫಲಿತಾಂಶದಂತೆ ಕಾಂಗ್ರೆಸ್  846 ಸ್ಥಾನಗಳಲ್ಲಿ ಗೆಲುವು ದಾಖಲಿಸುವುದರೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 788 ಹಾಗೂ ಜೆಡಿಎಸ್ 307 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ ಉಳಿದ  ಸ್ಥಾನಗಳಲ್ಲಿ ಸ್ವತಂತ್ರ  ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

ರಾಜ್ಯದ ಮೂರು ನಗರ ಪಾಲಿಕೆಯ 135 ವಾರ್ಡ್, 29 ನಗರ, 53  ಪುರಸಭೆ ಹಾಗೂ 23 ಪಟ್ಟಣ ಪಂಚಾಯಿತಿಯ ಒಟ್ಟು 2, 529 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಈ ಹಿಂದೆ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಿಸಲಾಗಿತ್ತು.  ಪ್ರವಾಹದಿಂದಾಗಿ ಕೊಡಗು ಜಿಲ್ಲೆಯ  ಮೂರು ಕಡೆಗಳಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.
Tags

Related Articles

Leave a Reply

Your email address will not be published. Required fields are marked *

Language
Close