About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಚುನಾವಣೆಯಲ್ಲಿ ಗೆದ್ದಿದ್ದು ಪತ್ನಿ, ಹಾಲಿನ ಅಭಿಷೇಕ ಮಾಡಿದ್ದು ಪತಿರಾಯನಿಗೆ…!

ಮೈಸೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದು ಪತ್ನಿ. ಆದರೆ, ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದು ಪತಿರಾಯನಿಗೆ. ಹೌದು ನಗರಪಾಲಿಕೆಯಲ್ಲಿ ಮಹಿಳೆಯರು ಅವರ ಪತಿ ಪರೋಕ್ಷವಾಗಿ ಆಡಳಿತ ನಡೆಸುತ್ತಾರೆ ಎಂಬುದಕ್ಕೆ ಇದು ಉದಾಹರಣೆ.

ನಗರಪಾಲಿಕೆಯ ವಾ.ನಂ 36ರಲ್ಲಿ ರುಕ್ಮಿಣಿ ಮಾದೇಗೌಡ ಪಾಲಿಕೆ ಸದಸ್ಯೆಯಾಗಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸಲು ಅಭಿಮಾನಿಗಳು ಯರಗನಹಳ್ಳಿ ವಾರ್ಡ್ ನ ಕೃಷ್ಣದೇವಸ್ಥಾನದ ಬಳಿ ಅವರ ಪತಿ ಮಾದೇಗೌಡರಿಗೆ ಎರಡು ಬಿಂದಿಗೆ ಹಾಲಿನಿಂದ ಅಭಿಷೇಕ ಮಾಡಿದ್ದಾರೆ. ಮಾದೇಗೌಡ ಶ್ರೀರಾಂಪುರ ಜಿಪಂ ಸದಸ್ಯರಾಗಿದ್ದು, ಅಭಿಷೇಕದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೊ ನೋಡಿ ಸಾರ್ವಜನಿಕರು ಆಕ್ರೋಶ ಜನ ಕುಡಿಯುವ ಹಾಲನ್ನು ಅಭಿಷೇಕ ಮಾಡಿಕೊಂಡಿರುವುದು ನಾಚಿಕೆಗೇಡಿನ ವಿಷಯ. ಅಧಿಕಾರ ಸಿಕ್ಕ ತಕ್ಷಣ ಈ ರೀತಿ ಮಾಡುವುದು ಸರಿಯಲ್ಲ. ಅಭಿಮಾನಿಗಳು ಈ ರೀತಿ ಮಾಡುವುದನ್ನು ಅವರು ತಡೆಯಬಹುದು. ಆದರೆ ಅವರು ತಮ್ಮ ಕಾರ್ಯಕರ್ತರಿಗೆ ಬುದ್ಧಿ ಮಾತನ್ನು ಯಾಕೆ ಹೇಳಲಿಲ್ಲ ಎಂದು ಕಿಡಿ ಕಾರಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close