About Us Advertise with us Be a Reporter E-Paper

Breaking Newsರಾಜ್ಯ
Trending

ಲಾಕರ್ ಸಹಿತ 750ಗ್ರಾಂ ಚಿನ್ನಾಭರಣ ಕದ್ದೊಯ್ದ ಖತರ್ನಾಕ್ ಕಳ್ಳರು

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಕಳ್ಳರು ಕೈಚಳಕ ತೋರಿದ್ದು, ರಾಜರಾಜೇಶ್ವರಿನಗರ ಬಳಿಯ ಬಿಎಚ್‍ಇಎಲ್ ಲೇಔಟ್ ಮನೆಯೊಂದರಲ್ಲಿ ಲಾಕರ್ ಸಹಿತ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

ಬಿಎಚ್‍ಇಎಲ್ ನಿವೃತ್ತ ನೌಕರ ಚಿಕ್ಕಣ್ಣ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಚಿಕ್ಕಣ್ಣ ಹಾಗೂ ಕುಟುಂಬಸ್ಥರು ಕಾರ್ಯಕ್ರಮ ನಿಮಿತ್ತ ಅರಸಿಕೆರೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿರುವ ಕಳ್ಳರು ಈ ಕೃತ್ಯವೆಸಗಿದ್ದಾರೆ.

ಕಾರ್ಯಕ್ರಮ ಮುಗಿಸಿಕೊಂಡು ಬಂದ ಕುಟುಂಬಸ್ಥರಿಗೆ ಇತ್ತ ಶಾಕ್ ಕಾದಿತ್ತು. ಖದೀಮರು ಕಳ್ಳತನವೆಸಗಿರುವುದು ಬೆಳಕಿಗೆ ಬಂದಿದೆ. 750ಗ್ರಾಂ ಕ್ಕಿಂತಲೂ ಹೆಚ್ಚು ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಕುರಿತು ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close