About Us Advertise with us Be a Reporter E-Paper

ಅಂಕಣಗಳು

ಲೋಕಪಾಲ ಏಕೀ ತಂಚಾವಂಚಲು

ಸರಕಾರ ಮತ್ತು ನಾಗರಿಕ ಸೇವೆಗಳಲ್ಲಿ ಭ್ರಷ್ಟಾಚಾರ ಕೊನೆಗಾಣಿಸುವ ಉದ್ದೇಶದಿಂದ ಸಾಕಷ್ಟು ಹೋರಾಟದ ನಂತರ ರಚಿತವಾಗಿರುವ ಲೋಕಪಾಲ ವ್ಯವಸ್ಥೆ ಜಾರಿಗೆ ಕೇಂದ್ರ ಸರಕಾರ ಇಲ್ಲದ ಗೊಂದಲ ಸೃಷ್ಟಿಸುತ್ತಿರುವುದು ನಾನಾ ಅನುಮಾನಗಳಿಗೆ ಆಸ್ಪದ ನೀಡಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದು, ಅದೂ ಭ್ರಷ್ಟಾಚಾರ ವಿರುದ್ಧದ ಹೋರಾಟದ ಪಣದೊಂದಿಗೆ, ನಾಲ್ಕು ವರ್ಷ ಕಳೆದಿದ್ದರೂ ಈವರೆಗೆ ಲೋಕಪಾಲರನ್ನು ನೇಮಕ  ಅಕ್ಷಮ್ಯ. ಕಾನೂನಿನ ಓರೆಕೋರೆಗಳ ನೆಪವೊಡ್ಡಿ ಸರಕಾರ ಲೋಕಪಾಲರ ನೇಮಕವನ್ನು ಮುಂದೂಡುತ್ತಲೇ ಬಂದಿರುವುದರ ಹಿಂದಿನ ಉದ್ದೇಶವೇ ಪ್ರಶ್ನಾರ್ಹವಾಗಿದೆ. ಸರಕಾರದ ಈ ನಿಲುವಿಗೆ ಸುಪ್ರೀಂ ಕೋರ್ಟು ಸಹ ತೀವ್ರ ಅಸಮಾಧಾನ, ಆಕ್ಷೇಪ ವ್ಯಕ್ತಪಡಿಸಿದೆ. ಲೋಕಪಾಲರ ಆಯ್ಕೆಗೆ ತಾಂತ್ರಿಕ ನೆಪಗಳನ್ನು ನೀಡುವುದನ್ನು ಬಿಟ್ಟು ಒಂದು ತಿಂಗಳೊಳಗೆ ಸ್ಪಷ್ಟ ನಿಲುವು ಪ್ರಕಟಿಸದಿದ್ದರೆ ತಾನೇ ಲೋಕಪಾಲರನ್ನು ನೇಮಕ ಮಾಡುವುದಾಗಿ ಸುಪ್ರೀಂ ಕೋರ್ಟು ಚಾಟಿ ಬೀಸಿದೆ. ಯುಪಿಎ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ  ದೇಶವ್ಯಾಪಿ ಹೋರಾಟ ನಡೆಸಿದ ನಂತರ ಲೋಕಪಾಲ ರಚನೆ ಕುರಿತಾದ ಕಾನೂನು ರೂಪುಗೊಂಡಿತ್ತಾದರೂ, ಲೋಕಪಾಲರ ನೇಮಕ ಮಾಡುವ ಹೊಣೆ ನಾಲ್ಕು ವರ್ಷದ ಹಿಂದೆ ಪ್ರಧಾನಿ ಹುದ್ದೆಗೇರಿದ ನರೇಂದ್ರ ಮೋದಿ ಅವರ ಹೆಗಲಿಗೆ ಬಿತ್ತು. ಜನರನ್ನು ಕಾಡುವ ಅನೇಕ ಸಮಸ್ಯೆಗಳ ನಿವಾರಣೆಗೆ ತೋರಿದ ಬದ್ಧತೆಯನ್ನು ಲೋಕಪಾಲರ ನೇಮಕ ವಿಚಾರವಾಗಿ ಮೋದಿ ಸರಕಾರ ತೋರದಿರುವುದೇ ವಿಪರ್ಯಾಸ. ಪ್ರತಿಪಕ್ಷ ನಾಯಕನಿಲ್ಲ ಎಂಬ ಒಂದೇ ನೆಪ ಮಾಡಿಕೊಂಡು ಸರಕಾರ ಲೋಕಪಾಲರ ನೇಮಕ ಮುಂದೂಡುತ್ತ ಬಂದಿದೆ. ಇನ್ನಾದರೂ  ಸರಕಾರ ಈ ಕುರಿತಾದ ತನ್ನ ಗೊಂದಲಕಾರಿ ನಿಲುವನ್ನು ಬದಿಗಿರಿಸಿ ದೇಶಕ್ಕೆ ಬಲಿಷ್ಠ ಲೋಕಪಾಲರನ್ನು ನೇಮಕ ಮಾಡಲು ಮುಂದಾಗಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close