About Us Advertise with us Be a Reporter E-Paper

ರಾಜ್ಯ

ಸಾಲಬಾಧೆ: ನೇಣಿಗೆ ಶರಣಾದ ರೈತ

ಕೋಲಾರ: ರೇಷ್ಮೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲೂಕಿನ ಮಟ್ನಹಳ್ಳಿಯ ರೈತ ವೆಂಕಟಪ್ಪ ನೇಣಿಗೆ ಶರಣಾದವರು. ಕಳೆದ ಮೂರು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ರೇಷ್ಮೆ ಮಾರಿಕೊಂಡು ಬಂದಿದ್ದ. 280 ರಿಂದ 300 ರು. ವರೆಗೆ ಕಡಿಮೆ ಬೆಲೆ ಪಡೆದುಕೊಂಡು ಹತಾಶರಾಗಿದ್ದರು. 4 ಎಕರೆ ಜಮೀನು ಹೊಂದಿದ್ದ ವೆಂಕಟಪ್ಪ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಾಲ ಸೇರಿದಂತೆ ಸುಮಾರು 20 ಲಕ್ಷ ರು. ಸಾಲ ಮಾಡಿದ್ದರು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರು ಮೃತನ ಮನೆಗೆ ಭೇಟಿ ನೀಡಿ ಅಂತಿಮ ಗೌರವ ಸಲ್ಲಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close