ದೀರ್ಘಾಯಸ್ಸು ವರವಲ್ಲ! ಅದೊಂದು ಶಾಪ!

Posted In : ಕ್ಷಣಹೊತ್ತು ಅಣಿ ಮುತ್ತು

ನಾವೆಲ್ಲಾ ಗಮನಿಸಿದ್ದೇವಲ್ಲವೇ? ನಾವು ಯಾರಾದರು ಹಿರಿಯರಿಗೆ ನಮಸ್ಕರಿಸಿ ದಾಗ ಅವರು ದೀರ್ಘಾಯುಷ್ಮಾನ್ ಭವ ಎಂದು ಆಶೀರ್ವದಿಸುತ್ತಾರಲ್ಲವೇ? ನಾವೂ ಸಂತಸ ಪಡುತ್ತೇವಲ್ಲವೇ? ಆದರೆ ದೀರ್ಘಾಯಸ್ಸು ಒಂದು ವರವಲ್ಲ, ಅದೊಂದು ಶಾಪ ಎಂಬ ಮಾತುಗಳನ್ನು ಕೇಳಿದರೆ ವಿಚಿತ್ರ ಅನಿಸುತ್ತದಲ್ಲವೇ? ಈ ಮಾತುಗಳನ್ನು ನಿಜವೆಂದು ಬಿಂಬಿಸುವ, ನಂಬಿಸುವ, ಗ್ರೀಸ್ ದೇಶದ ಪೌರಾಣಿಕ ಕತೆಯೊಂದು ಇಲ್ಲಿದೆ.

ಅರೋರ ಎಂಬಾಕೆ ಗ್ರೀಸ್ ದೇಶದ ಜನರ ನಂಬಿಕೆಯ ಪ್ರಕಾರ ಅವರ ಮುಂಜಾ ನೆಯ ಒಂದು ಮುಂಜಾನೆ ಆಕೆ ಭೂಲೋಕದಲ್ಲಿ ಸಂಚರಿಸುತ್ತಿದ್ದಳಂತೆ. ಆಗ ಟಿಥೋನಸ್ ಎಂಬ ಮಾನವನನ್ನು ಕಂಡಳಂತೆ. ಆತ ಆಜಾನುಬಾಹು, ತಿದ್ದಿ ಮಾಡಿದಂತಹ ದೇಹದ ಸುಂದರ. ಆಕೆಗೆ ಮೊದಲ ನೋಟದಲ್ಲೇ ಆತನಲ್ಲಿ ಪ್ರೇಮಾಂಕುರ. ಆತನೊಂದಿಗೆ ಬಾಳುವುದಕ್ಕಾಗಿ ಆಕೆ ದೇವಲೋಕವನ್ನೂ ಬಿಟ್ಟು ಬರಲು ಸಿದ್ಧರಾಗಿಬಿಟ್ಟರು. ಆದರೆ ದೇವಲೋಕದವರೆಲ್ಲ ಆಕೆಗೆ ನೀನು ದುಡುಕುತ್ತಿದ್ದೀಯ. ನೀನು ಮರಣವೇ ಇಲ್ಲದ ದೇವತೆ. ಆದರೆ ಆತ ಮುಂದೊಂದು ದಿನ ಸಾಯುವ ಮಾನವ. ನಿಮ್ಮಿಬ್ಬರ ವಿವಾಹ ಹೇಗೆ ಸಾಧ್ಯ? ಎಂದು ಎಚ್ಚರಿಸಿದರು. ಪ್ರೇಮ ಕುರುಡಲ್ಲವೇ? ಭಾರತ ದೇಶವಾದರೇನು? ಗ್ರೀಸ್ ದೇಶವಾ ದರೇನು? ಆಕೆ ಆತನನ್ನೇ ವರಿಸುವ ತೀರ್ಮಾನ ಮಾಡಿಬಿಟ್ಟಿದ್ದಳು.

ಆಯಸ್ಸಿನದ್ದೊಂದೇ ಸಮಸ್ಯೆ ಎಂದು ಪರಿಗಣಿಸಿದ ಆಕೆ ಅವರ ದೇವರಾದ ಜೂಯೆಸ್ ಅವರನ್ನು ಕುರಿತು ಕಠಿಣವಾದ ತಪಸ ನ್ನಾಚರಿಸಿದಳು. ದೇವರು ಪ್ರತ್ಯಕ್ಷವಾದಾಗ ನಾನು ಪ್ರೀತಿಸಿ ಮದುವೆಯಾಗುತ್ತಿರುವ ಟಿಥೋನಸ್ ಮಾನವನಿಗೆ ಮರಣವೇ ಬಾರ ದಂತಹ ವರವನ್ನು ಕೊಡು ಎಂದು ಬೇಡಿಕೊಂಡಳು. ದೇವರು ಕೊಂಚ ಯೋಚಿಸಿ ನೀನು ಕೋರುವ ವರ ಇಷ್ಟೇನಾ? ಮತ್ತೇನು ಇಲ್ಲವೇ? ಯೋಚಿಸಿ ಹೇಳು ಎಂದು ಕೇಳಿದರು. ಖಡಾಖಂಡಿತವಾಗಿ ಅವನೆಂದೂ ಸಾಯದಂತಹ ವರವನ್ನು ಕೊಟ್ಟರೆ ಸಾಕು ಎಂದಳು. ದೇವರು ತಥಾಸ್ತು, ಆತನಿಗಿನ್ನು ಮರಣವೇ ಇಲ್ಲ! ಎಂದು ಹೇಳಿ ಅಂತರ್ದಾನರಾದರು. ಟಿಥೋಟಸ್ ಮತ್ತು ಅರೋರ ಅವರಿಬ್ಬರು ಮದುವೆಯಾದರು. ಸಾಂಸಾರಿಕ ಜೀವನವನ್ನಾರಂಭಿಸಿದರು. ’ನಮ್ಮ ಸಂಸಾರ, ಆನಂದ ಸಾಗರ’ ಎನ್ನು ವಂತಹ ಸಂಸಾರ!

ಆದರೆ ಅವರಿಗೆ ಇಪ್ಪತ್ತು-ಮೂವತ್ತು ವರ್ಷಗಳ ನಂತರ ಸಮಸ್ಯೆ ಎದುರಾಯಿತು. ಅದೇನೆಂದರೆ ಆಕೆ ದೇವತೆ. ಆಕೆಗೆ ಸಾವು ಬರುವಂತಿರಲಿಲ್ಲ. ಹಾಗೆಯೇ ಮುಪ್ಪೂ ಬರುವಂತಿರಲಿಲ್ಲ. ಆದರೆ ಆಕೆಯ ಪತಿ ಮನುಷ್ಯನಾದ್ದರಿಂದ, ಆತನಿಗೆ ಮುಪ್ಪು ಬರತೊಡಗಿತು. ಕಣ್ಣುಗಳು ಮಂಜಾಗತೊಡಗಿದವು. ಕಿವಿ ಕೇಳಿಸುವುದು ಕಡಿಮೆಯಾಯಿತು. ಚರ್ಮ ಸುಕ್ಕಾಗತೊಡಗಿತು. ವೃದ್ಧಾಪ್ಯ-ಸಹಜವಾದ ಕಾಯಿಲೆಗಳು ಬರತೊಡಗಿದವು. ಆಗ ಅರೋರ ಹೌಹಾರಿದಳು. ತನ್ನ ಪತಿಗೆ ಮರಣವೇ ಇಲ್ಲದ ವರವನ್ನು ಕೇಳಿಕೊಂಡಿದ್ದಳು. ಆದರೆ ಆತ ಸದಾ ಯುವಕನಾಗಿರಬೇಕೆಂಬ, ಆರೋಗ್ಯವಂತನಾಗಿರಬೇಕೆಂಬ ವರವನ್ನು ಕೇಳಿ ಕೊಂಡಿರಲಿಲ್ಲ!

ವರ್ಷಗಳು ಕಳೆದಂತೆಲ್ಲ ಟಿಥೋನಸನನ ದೇಹ ಕ್ಷೀಣಿಸತೊಡಗಿತು. ಕಾಯಿಲೆಗಳಿಂದ ನರಳತೊಡಗಿದ. ಸಹಿಸಲಾಗದ ನೋವು ಗಳು. ಆದರೆ ಮರಣ ಬರುವಂತಿಲ್ಲ. ನರಳುವಿಕೆಗೆ ಕೊನೆಯೇ ಇರಲಿಲ್ಲ. ಅವನ ದುರವಸ್ಥೆಯನ್ನು ನೋಡಲಾಗದೆ ಅರೋರ ಮತ್ತೆ ದೇವರನ್ನು ಮಾಡಿಕೊಂಡು, ಆತನಿಗೆ ಮರಣ ಬರಲಿ! ನರಳುವಿಕೆ ಕೊನೆಯಾಗಲಿ ಎಂದು ಕೇಳಿಕೊಂಡಳು. ಆದರೆ ದೇವರು ಆತನಿಗೆ ಮರಣವೇ ಬಾರದಂತಹ ವರವನ್ನು ಕೊಟ್ಟಾಗಿದೆ. ಈಗ ಆತ ಮರಣಕ್ಕೊಳಗಾಗುವಂತೆ ಮಾಡಲು ನನಗೂ ಸಾಧ್ಯವಿಲ್ಲ ಎಂದು ಹೇಳಿ ಅಂತರ್ಧಾನರಾದರಂತೆ. ಈ ಪ್ರಸಂಗ ನಡೆದು ಸಾವಿರಾರು ವರ್ಷಗಳಾದರೂ ಇಂದಿಗೂ ಟಿಥೋನಸ್ ಮರಣ ಹೊಂದಿಲ್ಲವಂತೆ!ಆದರೆ ಆತನ ನರಳುವಿಕೆ ನಿಂತಿಲ್ಲವಂತೆ!

ಮರಣವೇ ಬಾರದ ವರವನ್ನು ಕೇಳುವುದಕ್ಕಿಂತ, ಮರಣ ಬರುವವರೆಗೂ ಆರೋಗ್ಯವಾಗಿರುವಂತೆ ಕೇಳಿಕೊಳ್ಳಬೇಕಲ್ಲವೇ? ಎಷ್ಟೇ ಸಿರಿ-ಸಂಪತ್ತು, ಆಸ್ತಿ-ಅಂತಸ್ತು, ಧನ-ದೌಲತ್ತು ಇದ್ದರೂ, ಅದನ್ನನುಭವಿಸಲು ಇರಬೇಕಲ್ಲವೇ? ಆರೋಗ್ಯ ಇಲ್ಲದಿದ್ದರೆ, ದೀರ್ಘಾ ಯಸ್ಸು ಒಂದು ವರವಲ್ಲ, ಅದೊಂದು ಶಾಪ ಎಂಬುದು ನಿಜ ಅನಿಸುವುದಿಲ್ಲವೇ?

Leave a Reply

Your email address will not be published. Required fields are marked *

one + 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top