ವಿಶ್ವವಾಣಿ

ಕೆಲಸಕ್ಕೆ ಸೇರುತ್ತಿದ್ದೀರಾ… ? ಹಾಗಾದರೆ ಇದನ್ನೊಮ್ಮೆ ಓದಿದರೆ ಒಳಿತು

ಕೆಲಸ ಯಾರಿಗೆ ಬೇಡ ಹೇಳಿ. ಎಲ್ಲರಿಗೂ ಕೆಲಸ ಬೇಕೇ ಬೇಕು. ಎಲ್ಲರೂ ಒಂದಲ್ಲಾ ಒಂದೆಡೆ ಕೆಲಸ ಮಾಡುತ್ತಲೇ ಇರುತ್ತಾರೆ. ನೀವು ಕೆಲಸಕ್ಕೆ ಹೋಗುವ ಮುನ್ನ ಕೆಲ ಸಂಗತಿಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಹೆಚ್ಚಿದೆ. ಅದಕ್ಕೂ ಮುನ್ನಾ ನೀವು ಕೆಲಸ ಮಾಡಲು ಹೋಗುವ ಕಂಪನಿ ಬಗ್ಗೆ ಸಂಗತಿಗಳನ್ನು ತಿಳಿದುಕೊಳ್ಳುವು ಅವಶ್ಯಕ.

1. ಕೆಲಸ ನಿರ್ವಹಿಸುವ ಸ್ಥಳ ಫ್ರೆಂಡ್ಲಿಯಾಗಿರಬೇಕು.
ಕೆಲಸ ಹುಡುಕುವ ಬರದಲ್ಲಿ ಎಷ್ಟೋ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಕೆಲಸಕ್ಕೆ ಸೇರಿದ ನಂತರ ಯಾಕಪ್ಪ ಸೇರಿದೆ ಎಂದುಕೊಳ್ಳುವ ಮುನ್ನ ಕಂಪನಿ ಅಥವಾ ನೀವು ಕೆಲಸ ಮಾಡುವ ಸ್ಥಳದ ಕುರಿತು ಸ್ವಲ್ಪವಾದರೂ ತಿಳಿದುಕೊಳ್ಳುವ ಅವಶ್ಯಕತೆ ತುಂಬಾ ಇದೆ.  ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಕೆಲಸದ ವಾತವರಣ ಅನುಕೂಲಕರವಾಗಿರ ಬೇಕು. ಸಹೊದ್ಯೋಗಿಗಳ ಜತೆಗೆ ಉತ್ತಮ ಸಂಭಂದ, ಕುಟುಂಬ ಹಾಗೂ ಆಫೀಸ್‌ ಎರಡು  ಕಡೆ ಕಾರ್ಯ ನಿರ್ವಹಿಸಲು ಒತ್ತಡವಿಲ್ಲದ ಆರೋಗ್ಯಕರ ವಾತಾರಣವಿರಬೇಕು. ಇದನ್ನು ಗಮನಿಸಿ ಕೆಲಸಕ್ಕೆ ಸೇರಿಕೊಳ್ಳುವುದು ಸೂಕ್ತ.

2. ಕುಟುಂಬದ ಆರೋಗ್ಯ ಭದ್ರತೆ
ಭಾರತದಲ್ಲಿ ಹಲವು ಕಂಪನಿಗಳು ಅನೇಕ ಯೋಜನೆಗಳ ಅಡಿಯಲ್ಲಿ ಆರೋಗ್ಯ ಭಧ್ರತೆ ನೀಡುತ್ತಿದೆ. ಆದರೆ ಕೆಲಸಕ್ಕೆ ಸೇರುವ ಮುನ್ನ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಕಂಪನಿಯ ಎಚ್‌ಆರ್ ಜತೆಗೆ ಮಾತನಾಡುವುದು ಉತ್ತಮ. ಮನೆಯಲ್ಲಿ ವಯಸ್ಸಾದವರು ಇದ್ದರೆ ಅವಶ್ಯಕವಾಗಿ ಬೇಕಾದ ಸೌಲಭ್ಯ ಇದಾಗಿದೆ.

3. ಕೆಲಸದ ಸಮಯ ಅನುಕೂಲಕವಾಗಿರಬೇಕು
ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಶಿಫ್ಟ್‌ಗಳ ಅವಕಾಶವಿದೆ. ಅದಲ್ಲಿ ನಿಮ್ಮ ಮನೆಯ ವಾತಾವರಣಕ್ಕೆ ಸರಿ ಹೊಂದುವ ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ತಂದೆ-ತಾಯಿ, ಮಕ್ಕಳು, ಸಂಸಾರ ವಿಚಾರ, ಸಂಪ್ರದಾಯ ವಿಚಾರಗಳು ಗಮನದಲ್ಲಿಟ್ಟುಕೊಂಡು ಕೆಲಸದ ಪಾಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

4. ಒಬ್ಬರಿಗೊಬ್ಬರು ಗೌರವಿಸುವ ವಾತಾವರಣ
ಸಹೊದ್ಯೋಗಿಗಳೊಂದಿಗೆ ಹೀಗೆ ಇರಬೇಕು ಎಂಬ ನಿಯಮ ಇಲ್ಲದಿದ್ದರೂ ಅದನ್ನು ನಾವೆ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಒಬ್ಬರಿಗೊಬ್ಬರು ಗೌರವಿಸುವುದು ಅಗತ್ಯ. ಏಕೆಂದರೆ ಇದರಿಂದಾಗಿ ಪರಸ್ಪರ ಆತ್ಮವಿಶ್ವಾಸ ಹೆಚ್ಚುತ್ತದೆ. ಆದರಿಂದ ಅಂಥ ಸಂದರ್ಭವನ್ನು ನಾವೇ ಸೃಷ್ಟಿಸಿಕೊಳ್ಳಬೇಕು.

5. ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡುಹೋಗುವಂತಿರಬೇಕು.
ಚಿಕ್ಕ ಮಕ್ಕಳಿದ್ದರೆ ಅವರನ್ನು ಮನೆಯಲ್ಲಿ ಬಿಟ್ಟು ಬರಲು ಸಾಧ್ಯವಾಗುವುದಿಲ್ಲ , ಕೆಲಸ ನಿರ್ವಹಿಸುವ ಸ್ಥಳದಲ್ಲಿಯೆ ಮಕ್ಕಳ ಪಾಲನೆಗೆ ಸೌಲಭ್ಯ ಇದ್ದರೆ ನಿರಾಳವಾಗಿ ಕಾರ್ಯ ನಿರ್ವಹಿಸಬಹುದು. ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಮಕ್ಕಳನ್ನು ಜತೆಗೆ ಕರೆದುಕೋಡು ಬರಬೇಕಾಗಿತ್ತದೆ. ಅಂತಹ ಸಂದರ್ಭದಲ್ಲಿ ಮಗುವನ್ನು ನೋಡಿಕೊಳ್ಳಲು ಅನುಕೂಲಕರವಾದ ಸ್ಥಳವನ್ನು ಆಯ್ಕೆಮಾಡಿಕೊಳ್ಳುವುದು ಸೂಕ್ತ.