ನಟ ಯೋಗಿ ನಿಶ್ಚಿತಾರ್ಥ ಇಂದು

Posted In : ರಾಜ್ಯ, ಸಿನಿಮಾ ಸಮಾಚಾರ

ಬೆಂಗಳೂರು: ನಟ ಲೂಸ್ ಮಾದ ಯೋಗಿ ಹಾಗೂ ಬಾಲ್ಯದ ಗೆಳತಿ ಸಾಹಿತ್ಯ ಅರಸ್ ಅವರ ನಿಶ್ಚಿತಾರ್ಥ ಭಾನುವಾರ ನಡೆಯಿತು. ಎಡೆಯೂರಿನಲ್ಲಿರುವ ಸಾಹಿತ್ಯ ಅರಸ್ ನಿವಾಸದಲ್ಲಿ ನಿಶ್ಚಿತಾರ್ಥ ಕೆಲಸಗಳು ಭರದಿಂದ ಸಾಗಿವೆ.

ಮುಂದಿನ ನವೆಂಬರ್ 2 ರಂದು ವಿವಾಹ ದಿನಾಂಕ ಅಂತಿಮಗೊಳ್ಳಲಿದೆ. ಅಂದು ಸಾಹಿತ್ಯಳ ಜೊತೆ ಯೋಗಿ ಸಪ್ತಪದಿ ತುಳಿಯಲಿದ್ದಾರೆ. ನಿಶ್ಚಿತಾರ್ಥ ಸಂಭ್ರಮದಲ್ಲಿ ಚಂದನವನದ ಹಲವು ತಾರೆಯರು ಪಾಲ್ಗೊಂಡರು.  ಇಬ್ಬರಿಗೂ ಒಂದೇ ರೀತಿಯ ಚಿನ್ನದ ರಿಂಗ್‌ಗಳನ್ನು ಯೋಗಿಯ ತಾಯಿ ಅಂಬುಜ ಆರಿಸಿದ್ದರು. ಬ್ಲೂ ಶರ್ಟ್ ಮತ್ತು ಗ್ರೇ ಪ್ಯಾಂಟ್ ನಲ್ಲಿ ಯೋಗಿ ಹಾಗೂ ಸ್ಯಾಫ್ರನ್ ರೇಷ್ಮೆ ಸೀರೆಯಲ್ಲಿ ಮದುವಣಗಿತ್ತಿ ಸಾಹಿತ್ಯ ಮಿಂಚುತ್ತಿದ್ದರು.

ಸಾಹಿತ್ಯ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಒಂದರಿಂದ 10ನೇ ತರಗತಿವರೆಗೆ ಒಟ್ಟಿಗೆ ವ್ಯಾಸಂಗ ಮಾಡಿದ್ದ ಯೋಗಿ ಹಾಗೂ ಸಾಹಿತ್ಯ ಅವರ ಸ್ನೇಹ ಪ್ರೀತಿಯಾಗಿ, ಪ್ರೇಮಾಂಕುರಿಸಿ ಈಗ ಮದುವೆಗೆ ಸಜ್ಜಾಗಿದ್ದಾರೆ. ಯೋಗಿ ಸಹೋದರ ನಟ ಮಹೇಶ್, ತಂದೆ ಟಿ.ಪಿ.ಸಿದ್ದರಾಜ್, ತಾಯಿ ಅಂಬುಜ ಸೇರಿದಂತೆ ಗೆಳೆಯರ ಬಳಗ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

sixteen − three =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top