About Us Advertise with us Be a Reporter E-Paper

ವಿವಾಹ್

ಪ್ರೀತಿ ಭಯದ ಗಾಳಿ ಅಲ್ಲ, ಅನುರಾಗದ ಸೆಲೆ…..

* ಸ್ವಾತಿ ಬಿ, ಪ್ರಾಧ್ಯಾಪಕಿ, ಎಸ್.ಡಿ.ಎಂ ಕಾಲೇಜು ಉಜಿರೆ

ಪ್ರೀತಿ ಅನ್ನುವುದು ಹೃದಯಗಳಿಗೆ ಬಿಟ್ಟ ವಿಷಯ. ಯಾವ ಮನಸ್ಸಿನ ತಾಳಕ್ಕೆ ನಿನ್ನ ಮನಸ್ಸು ಹೆಜ್ಜೆ ಹಾಕುತ್ತೋ, ಅವರೊಂದಿಗೆ ನಿನ್ನ ಬಾಳ ಬಂಡಿಯನ್ನು ನಡೆಸು ಎಂಬ ಸೂಚನೆಯನ್ನು ಇತ್ತು ಎರಡು ಜೀವಗಳನ್ನು ಒಂದು ಮಾಡುವ ಸೂತ್ರ.

ಆದ್ರೆ ಇಂದು ಸೂತ್ರವೇ ದಾರಿ ತಪ್ಪಿ, ಪ್ರೇಮ ಎಂದರೆ ನಡುಕ ಹುಟ್ಟಿಸುವ ವಾತವರಣವನ್ನು ಸೃಷ್ಟಿ ಮಾಡಿದೆ. ಹಲವಾರು ಮಂದಿ ತಾನು ಪ್ರೀತಿ ಮಾಡುತ್ತಿದ್ದೇನೆ ಅಂತ ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಅಪ್ಪ-ಅಮ್ಮನಿಗೆ ಗೊತ್ತಾದ್ದರೆ ಎಲ್ಲಿ ನಮ್ಮನ್ನು ದೂರ ಮಾಡುತ್ತಾರೆ ಎಂದು ಭಯಪಡುತ್ತಾರೆ. ಆದರೆ ಇಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟವರು ನಾವೇ.

ಸಣ್ಣ-ಪುಟ್ಟ ವಿಷಯಗಳನ್ನು ಅರ್ಥಮಾಡಿಕೊಳ್ಳೋದೆ ಜೀವಕ್ಕೆ ಜೀವ ಆಗಿ ಇರುತ್ತೀನಿ ಅಂದು ಬರ್ಥ್ ಡೇಗೋ, ಮತ್ಯಾವ ದಿನಕೋ ವಿಶ್ ಮಾಡಿಲಿಲ್ಲ ಅಂತ ಆ ಸಂಬಂಧವನ್ನೇ ಮುಂದಾಗುತ್ತೇವಲ್ಲ ಈ ನಡತೆಯೇ ಹೆತ್ತವರಲ್ಲಿ ಪ್ರೀತಿ ಎಂದರೆ ಕೆಟ್ಟದು ಎಂಬ ಭಾವನೆ ಮೂಡಿಸೋದು. ಕ್ಷಣಿಕ ಆಸೆ-ಆಕಾಂಕ್ಷೆಗಳಿಗೆ ಪ್ರಾಮುಖ್ಯತೆ ಕೊಡದೇ, ಕಂಡ ಕನಸುಗಳನ್ನು ನನಸಾಗಿಸುವತ್ತ ಜೊತೆಯಲ್ಲಿ ಸಾಗುವುದೇ ನಿಜವಾದ ಪ್ರೀತಿ.

ಇಲ್ಲಿ ಕಾಳಜಿ ಮನೆ ಮಾಡಿರಬೇಕು, ಹೊಂದಾಣಿಕೆ ನೆರಳಾಗಿರಬೇಕು, ಸುಖ-ದುಖಗಳು ಪಾಲಾಗಿರಬೇಕು. ಎಂತದೇ ಸಮಯ ಬಂದರೂ ನಿನ್ನ ಹಿಂದೆ ನಾ ನಿಲ್ಲುತ್ತೇನೆ ಎಂಬ ಭಾವನೆ ಇರಬೇಕು ಆಗ ಮಾತ್ರ ಪ್ರೀತಿ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ಹೆತ್ತವರಲ್ಲಿದ್ದ ಭೀತಿಯನ್ನು ದೂರ ಮಾಡುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close