About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಮಹದಾಯಿ ವಿವಾದ: ಮತ್ತೆ ಗೋವಾ ಕ್ಯಾತೆ..!

ಬೆಳಗಾವಿ: ನ್ಯಾಯಾಧೀಕರಣದ ತೀರ್ಪು ಬರುವ ಮೊದಲೇ ಮಹದಾಯಿ ವಿವಾದಿತ ಸ್ಥಳಕ್ಕೆ ಗೋವಾ ಅಧಿಕಾರಿಗಳು ಮತ್ತೆ ಭೇಟಿ ನೀಡುವ ಮೂಲಕ ಉದ್ಧಟತನ ತೋರಿದ್ದಾರೆ.

ಗೋವಾ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ದಿನೇಶ್ ಮಹಾಲೆ ಸೇರಿ 8 ಜನರ ತಂಡ ಅನುಮತಿಯಿಲ್ಲದೆ ಕಳಸಾ ಬಂಡೂರಿ ಕಾಮಗಾರಿ ಸ್ಥಳಕ್ಕೆ ಬುಧವಾರ ಆಗಮಿಸಿತ್ತು. ಖಾನಾಪೂರದ ಜಾಂಬೋಟಿ ಔಟ್‍ಪೋಸ್ಟ್ ಬಳಿ ಪೊಲೀಸರು ವಿಚಾರಿಸಿದಾಗ ಮೊದಲಿಗೆ ದೇವಸ್ಥಾನಕ್ಕೆ ಹೋಗ್ತಿದ್ದೇವೆ ಅಂತ ಹೇಳಿದ್ದಾರೆ. ಮತ್ತಷ್ಟು ವಿಚಾರಣೆಗೆ ಮುಂದಾದಾಗ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

ಔಟ್‍ಪೋಸ್ಟ್ ನಲ್ಲಿ ಭೇಟಿ ಬಗ್ಗೆ ಲಿಖಿತ ಹೇಳಿಕೆ ನೀಡುವಾಗ ಗೋವಾ ಸರ್ಕಾರದ ಅಣತಿಯಂತೆ ಬಂದಿರುವುದಾಗಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಅಲ್ಲದೆ, ವಾಪಸ್ ಗೋವಾಗೆ ತೆರಳಿ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಅಂತ ಆರೋಪಿಸಿದ್ದಾರೆ.

ಇತ್ತೀಚೆಗೂ ಕಳಸಾ-ಬಂಡೂರಿ ಕಾಮಗಾರಿಯ ಕಣಕುಂಬಿಗೂ ಗೋವಾ ಅಧಿಕಾರಿಗಳು ಭೇಟಿ ನೀಡಿದ್ದರು. ಬಳಿಕ, ಗೋವಾ ಅಧಿಕಾರಿಗಳು, ನೀರಾವರಿ ಸಚಿವರು ಧಿಮಾಕಿನ ಹೇಳಿಕೆಗಳನ್ನ ನೀಡಿದ್ದರು.

Tags

Related Articles

One Comment

  1. rajya rajyagalige gadirekhegalive; dhesha desgagaligu sagarada gadigalirabeku!! sahabalveya mulaka neerannu balasuvike namma nadeyagirabeku!! indilla nale namage mahatai neeru koduttale yewmba atmavishwasa nammallirali!! sarve janaha sukhino bhavantu yembasnte.. EETANTE>> muru rajyagalannu jodiside.. nurentu janarannu jodiside>> karanataska rajya uttaradahemme andaru addiyilla!! “nasmage nyaya doreyutte annuvalli vishwasavidale beku; kartan idu nyayalayada katakateyali de!~! dhanyavada>>

Leave a Reply

Your email address will not be published. Required fields are marked *

Language
Close