ವಿಶ್ವವಾಣಿ

ಮಹೀಂದ್ರಾ ಮೋಡಿ, ಏನಿರಬಹುದು ಕಾದುನೋಡಿ..!

ಮಹೀಂದ್ರಾದ ಎಕ್‌ಸ್ಯುವಿ 500 ಎಸ್‌ಯುವಿಯು ಸಕ್ಸೆಸ್ ಆಗಿದ್ದೇ ಆಗಿದ್ದು, ಇದೇ ರೀತಿಯ ಶ್ರೇಣಿಯಲ್ಲಿ ಕಾರ್‌ಗಳನ್ನು ಲಾಂಚ್ ಮಾಡತೊಡಗಿತು. ಎಕ್‌ಸ್ಯುವಿ500 ನಂತರ ಟಿಯುವಿ300, ಇತ್ತೀಚೆಗೆ ಮಾರುಕಟ್ಟೆಗೆ ಬಂದ ಟಿಯುವಿ 300ಪ್ಲಸ್ ಹಾಗೂ ಹ್ಯಾಚ್‌ಬ್ಯಾಕ್ ಶ್ರೇಣಿಯಲ್ಲಿ ಕೆಯುವಿ100 ಅನ್ನು ಲಾಂಚ್ ಮಾಡಿತು.

ಇದೀಗ ಎಕ್‌ಸ್ಯುವಿ500 ಗಿಂತ ಮೇಲಿನ ಶ್ರೇಣಿಯ ಕಾರ್ ಅನ್ನು ಮಾರುಕಟ್ಟೆಗೆ ಬಿಡುವ ಯೋಜನೆ ಹಾಗೂ ಯೋಚನೆಯಲ್ಲಿದೆ ಮಹೀಂದ್ರಾ. ಎಕ್‌ಸ್ಯುವಿ700 ಎಂದು ಇದನ್ನು ಕರೆಯಲಿರುವ ಮಹೀಂದ್ರಾ ಇದೀಗ ಅದರ ರೋಡ್  ಮಾಡುತ್ತಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಆದರೆ ಈ ಎಸ್‌ಯುವಿ ಮಾತ್ರ ಈ ಹಿಂದಿನ ಕಾರ್‌ಗಳಿಗಿಂತ ಬೆಲೆಯಲ್ಲಿ ಅತಿ ಹೆಚ್ಚಿನದಾಗಿರುವುದಲ್ಲದೇ, ಸಿಕೆಡಿ (ಕಂಪ್ಲೀಟ್ಲೀ ನಾಕ್‌ಡ್ ಡೌನ್) ವಿಧಾನದಲ್ಲಿ, ಅಂದರೆ ವಿದೇಶದಲ್ಲಿ ಸಂಪೂರ್ಣ ತಯಾರಾಗಿ ಅದನ್ನು ಭಾರತದಲ್ಲಿ ಎಸೆಂಬ್ಲಿ ಮಾತ್ರ ಮಾಡುವ ರೂಪದಲ್ಲಿ ಮಾರುಕಟ್ಟೆಗೆ ತರುವ ಯೋಜನೆಯನ್ನು ಹೊಂದಿದೆ.

ಅಸಲಿಗೆ ಈ ಎಕ್‌ಸ್ಯುವಿ700 ಅಂದರೆ ಸಾಂಗ್ಯಾಂಗ್ ಜಿ4 ರೆಕ್‌ಸ್ಟನ್ ಲಕ್ಷುರಿ ಎಸ್‌ಯುವಿಯೇ ಆಗಿದ್ದು ಆ ಕಂಪೆನಿಯನ್ನು ಖರೀದಿಸಿರುವ ಮಹೀಂದ್ರಾಗೆ ಅದನ್ನು ಭಾರತದಲ್ಲಿ  ಆಗಿ ಲಾಂಚ್ ಮಾಡುವ ಯೋಚನೆಯಿದೆ.

ಇನ್ನೊಂದು ಸಾಂಗ್ಯಾಂಗ್ ಟೆಕ್ನಾಲಜಿ ಹೊಂದಿರುವ ಕಾರ್ ಕೂಡ ಟೆಸ್ಟಿಂಗ್‌ನಲ್ಲಿದ್ದು ಮಹೀಂದ್ರಾ ಯು321 ಅನ್ನುವ ಕೋಡ್‌ನೇಮ್ ಹೊಂದಿರುವ ಈ ಕಾರ್ ಈ ವರ್ಷದ ಅಂತ್ಯದೊಳಗೆ ಲಾಂಚ್ ಆಗುವ ಸಾಧ್ಯತೆ ದಟ್ಟವಾಗಿದೆ. 1.6 ಲೀ ಡೀಸಲ್ ಎಮ್‌ಫಾಲ್ಕನ್  ಎಂಜಿನ್ ಮತ್ತು 1.5 ಪೆಟ್ರೋಲ್  ಎಂಜಿನ್ ಹೊಂದಿರುವ ಯು321 ಅನ್ನು ಮಹೀಂದ್ರಾ ಸ್ಕಾರ್ಪಿಯೋ ಮತ್ತು ಎಕ್‌ಸ್ಯುವಿ500 ನಡುವಿನ ವಿಭಾಗದಲ್ಲಿ ಬಿಡುಗಡೆ ಮಾಡಲಿಚ್ಛಿಸಿದೆ ಮಹೀಂದ್ರಾ. ಹಾಗೂ ಇದನ್ನು ಖಾಸಗಿ  ಹಾಗೂ ಬಾಡಿಗೆ ವಾಹನಕ್ಕಾಗಿ ಬಳಸುವವರನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗುತ್ತಿದೆಯಂತೆ.

ಎಕ್‌ಸ್ಯುವಿ700ನ ಬೆಲೆ ಸುಮಾರು 22 ಲಕ್ಷದಿಂದ ಆರಂಭವಾಗಲಿದೆ. ಆದರೆ ಕೊರಿಯಾದಲ್ಲಿರುವ ಕಂಪೆನಿಯ ಫ್ಯಾಕ್ಟರಿಯಲ್ಲಿದರ ಬಿಡಿಭಾಗಗಳು ತಯಾರಾಗಿ ಭಾರತಕ್ಕೆ ಬರಲಿರುವುದರಿಂದ ಇದರ ಬೆಲೆ ಸ್ವಲ್ಪ ಹೆಚ್ಚೇ ಇರಲಿದೆ. ಆದರೆ, ಯು321 ಅಂತೂ ಹೊಸದಾಗಿ ಲಾಂಚ್ ಆಗಲಿರುವ ಮಾರುತಿ ಎರ್ಟಿಗಾದಷ್ಟೇ ಬೆಲೆಯದ್ದಾಗಿರಲಿದ್ದು ಈಗಷ್ಟೇ ನಿಲ್ಲಿಸಲ್ಪಟ್ಟಿರುವ ಮಹೀಂದ್ರಾ ಕ್ಸೈಲೋಗಿಂತ ಪ್ರೀಮಿಯಂ ಆಗಿರಲಿದೆಯಂತೆ. ಈ ಕಾರ್ ಮಹೀಂದ್ರಾ ಉತ್ತರ ಅಮೆರಿಕಾದ ಟ್ರಾಯ್ ಮಿಶಿಗನ್‌ನಲ್ಲಿರುವ ತನ್ನ ಅಭಿವೃದ್ಧಿ  ಅಭಿವೃದ್ಧಿಗೊಳಿ ಸಲಾಗಿರುವ ಮೊತ್ತಮೊದಲ ಕಾರ್ ಆಗಲಿದೆ.