About Us Advertise with us Be a Reporter E-Paper

ಸಿನಿಮಾಸ್

ಬಿಡುಗಡೆ ತಯಾರಿಯಲ್ಲಿ ‘ಮಹಿರಾ’

ಟೈಟಲ್ ಮೂಲಕವೇ ಕನ್ನಡಿಗರ ಗಮನ ಸೆಳೆಯುತ್ತಿರುವ ಸಿನಿಮಾ ‘ಮಹಿರಾ’. ‘ಒಂದು ಮೊಟ್ಟೆಯ ಕಥೆ’ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಪ್ರತಿಭಾವಂತ ಕಲಾವಿದ ರಾಜ್ ಬಿ. ಶೆಟ್ಟಿ, ಮೊಟ್ಟ ಮೊದಲ ಬಾರಿಗೆ ರಗಡ್ ಲುಕ್‌ನಲ್ಲಿ, ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ರಿವಾಲ್ವರ್ ಹಿಡಿದಿರುವ ರಾಜ್ ಶೆಟ್ಟಿ, ‘ದೈಹಿಕ ಸಾಮರ್ಥ್ಯಕ್ಕಿಂತ ಮೆಂಟಲ್ ಸ್ಟ್ರೆಂಥ್ ಮುಖ್ಯ’ ಅನ್ನೋ ಪಂಚಿಂಗ್ ಡೈಲಾಗ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಸಜ್ಜಾಗಿರುವ ‘ಮಹಿರಾ’ ಚಿತ್ರದ ಪ್ರಚಾರ ಕಾರ್ಯ ಈಗತಾನೆ ಆರಂಭವಾಗಿದೆ.

‘ಮಹಿರಾ’ ಎಂದರೆ ಸಂಸ್ಕೃತದಲ್ಲಿ ದಿಟ್ಟ ಮಹಿಳೆ ಎಂಬ ಅರ್ಥವಿದೆ. ಇದೊಂದು ಅಮ್ಮ ಮಗಳ ಸಂಬಂಧದ ಸುತ್ತ ಹೆಣೆದ ಕಥೆಯಾಗಿದೆ. ವರ್ಜೀನೀಯ ರೊಡ್ರಿಗೆಸ್ ತಾಯಿ ಪಾತ್ರದಲ್ಲಿ, ಚೈತ್ರಾ ಆಚಾರ್ ಮಗಳ ಪಾತ್ರದಲ್ಲಿ ನ್ಯಾಚುರಲ್ ಆಗಿ ನಟಿಸಿರುವುದು ಕಥೆಗೆ ಪ್ಲಸ್ ಪಾಯಿಂಟ್. ಚಿತ್ರದ ಸಲುವಾಗಿ ವರ್ಜೀನಿಯ ರೋಡಿಗ್ರೆಸ್ ಎರಡು ತಿಂಗಳು ಕುಸ್ತಿ ಕಲಿತುಕೊಂಡು, ಭರ್ಜರಿ ಆ್ಯಕ್ಷನ್ ಮಾಡಿದ್ದಾರೆ. ಲಂಡನ್ ಫಿಲ್‌ಮ್ ಅಕಾಡೆಮಿಯಲ್ಲಿ, ಅಭ್ಯಾಸ ಮಾಡಿರುವ ಮಹೇಶ್ ಗೌಡ ಈ ಚಿತ್ರದ ಮೂಲಕ ಕನ್ನಡದಲ್ಲಿ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ.

‘ಮಹಿರಾ’ ಚಿತ್ರವು ಸಸ್ಪೆನ್‌ಸ್ ಮತ್ತು ಥ್ರಿಲ್ಲರ್ ಹಿನ್ನೆಲೆಯನ್ನು ಹೊಂದಿದೆ. ನಿರ್ದೇಶಕ ಮಹೇಶ್ ಗೌಡ ಸ್ನೇಹಿತರಾದ ವಿವೇಕ್ ಕೊಡಪ್ಪ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ನೀಲಿಮಾ ಮತ್ತು ರಾಕೇಶ್ ಯು.ಪಿ ಸಂಗೀತ ಸಂಯೋಜನೆ, ಕೀರ್ತನಾ ಪೂಜಾರಿ ಛಾಯಾಗ್ರಹಣ ಚಿತ್ರಕ್ಕಿದೆ. ‘ಚಮಕ್’ ಹಾಗೂ ‘ಅಯೋಗ್ಯ’ ಸಿನಿಮಾ ನಿರ್ಮಾಣ ಮಾಡಿದ್ದ ಚಂದ್ರಶೇಖರ್ ‘ಮಹಿರಾ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಅಥವಾ ಜನವರಿಯಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

Tags

Related Articles

Leave a Reply

Your email address will not be published. Required fields are marked *

Language
Close