About Us Advertise with us Be a Reporter E-Paper

Breaking Newsದೇಶಪ್ರಚಲಿತ

ಮಜೆರ್‌‌ಹಾಥ್‌ ಸೇತುವೆ ನೆಲಸಮ, ಒಂದು ವರ್ಷದಲ್ಲಿ ಹೊಸ ಸೇತುವೆ ನಿರ್ಮಾಣ: ಬ್ಯಾನರ್ಜಿ

ಕೊಲ್ಕತ್ತ: ಮೂರು ಜೀವಗಳನ್ನು ಬಲಿ ತೆಗೆದುಕೊಂಡ ಮಜೆರ್‌‌ಹಾಥ್‌ ಸೇತುವೆಯನ್ನು ಸಂಪೂರ್ಣ ನೆಲಸಮ ಮಾಡುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಘೋಷಿಸಿದ್ದಾರೆ.

ದಕ್ಷಿಣ ಕೊಲ್ಕತ್ತದ ಅಪರೂಪದ ಡೈಮಂಡ್‌ ಹಾರ್ಬರ್‌‌ ರಸ್ತೆಯ 50 ವರ್ಷ ಹಳೆಯ ಸೇತುವೆಯು ಸೆಪ್ಟೆಂಬರ್‌ 4  ರಂದು  ಕುಸಿದು ಮೂರು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಇದಾದ ಹತ್ತು ದಿನಗಳ ಬಳಿಕ ಸರಕಾರ ಅದನ್ನು ನೆಲಸಮ ಮಾಡುವಂತೆ ಆದೇಶ ಹೊರಡಿಸಿದೆ.

ಮಾಧ್ಯದ ಜತೆ ಮಾತನಾಡಿದ ಮಮತಾ ಬ್ಯಾನರ್ಜಿ ಅವರು ಈ ಘಟನೆಗೆ ಸಂಬಂಧಿಸಿದಂತೆ ಪಿಎಂಡಿ ಹಾಗೂ ಪಿಡಬ್ಲ್ಯೂಡಿ ಇಲಾಖೆಯ ನಿರ್ಲಕ್ಷದಿಂದ ಹೀಗಾಗಿದೆ ಎಂದು ಅವರನ್ನು ದೂರಿದರು. ಸೇತುವೆ ಕೆಡವಿದ ಒಂದು ವರ್ಷದಲ್ಲೇ ಹೊಸ ಸೇತುವೆಯನ್ನು ನಿರ್ಮಿಸುವುದಾಗಿ ಬರವಸೆ ನೀಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close