About Us Advertise with us Be a Reporter E-Paper

Breaking Newsದೇಶಪ್ರಚಲಿತ

ಹುತಾತ್ಮ ಔರಂಗಜೇಬ್‌ಗೆ ಶೌರ್ಯ ಚಕ್ರ ಪ್ರಶಸ್ತಿ

ದೆಹಲಿ: ಉಗ್ರಾಮಿಗಳು ಅಪಹರಿಸಿ ಹತ್ಯೆಗೈದಿದ್ದ ವೀರ  ಯೋಧ ರೈಫಲ್‌ ಮ್ಯಾನ್‌ ಔರಂಗಝೇಬ್‌ (ಮರಣೋತ್ತರ) ಹಾಗೂ ಮೇಜರ್‌ ಆದಿತ್ಯ ಕುಮಾರ್‌ಗೆ ಭಾರತ ಸರ್ಕಾರ ಶೌರ್ಯಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಕಾಶ್ಮೀರ ಗಡಿಯಲ್ಲಿ ಶೌರ್ಯ ಪ್ರದರ್ಶಿಸಿರುವುದಕ್ಕೆ ಪ್ರಶಸ್ತಿ ನೀಡಲಾಗಿದೆ.

10  ಗರ್‌ವಾಹಲ್‌ ತುಕಡಿಯ ಸದಸ್ಯರಾಗಿದ್ದ ಮನೋಜ್‌ ಕುಮಾರ್‌, ಜನವರಿ  27 ರಂದು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ನಡೆದ ಕಲ್ಲು ತೂರಾಟದ ವೇಳೆ ಸಾಹಸ ಮೆರೆದಿದ್ದರು. ಈ ಘಟನೆಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದರು.

ಜಮ್ಮು ಕಾಶ್ಮೀರದ 44 ರಾಷ್ಟ್ರೀಯ ರೈಫಲ್ಸ್ ನ ಸದಸ್ಯರಾಗಿದ್ದ ಔರಂಗಜೇಬ್‌, ಕರ್ತವ್ಯ ಮುಗಿಸಿಕೊಂಡು ಮನೆಗೆ ಮರಳುವಾಗ ಉಗ್ರರು ಪಿಸ್ತೂಲು ತೋರಿಸಿ ಬೆದರಿಸಿ ಅಪಹರಣ ಮಾಡಿದ್ದರು. ಬಳಿಕ ಜಮ್ಮುವಿನ ಪುಲ್ವಾಮ ಜಿಲ್ಲೆಯ ಕಾಲಂಪೋರದ ಗುಸ್ಸು ಎಂಬ ಗ್ರಾಮದಲ್ಲಿ ಅವರ ಮೃತ ದೇಹ ಪತ್ತೆಯಾಗಿತ್ತು. ಇಬ್ಬರು ವೀರ ಯೋಧರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡುವ ಮೂಲಕ ಸರಕಾರ ಗೌರವಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close