About Us Advertise with us Be a Reporter E-Paper

Breaking Newsದೇಶ
Trending

ಮಾಲ್ಡೀವ್ಸ್​ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮೋದಿ ಭಾಗಿ

ದೆಹಲಿ: ಮಾಲ್ಡೀವ್ಸ್​ ಅಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ಇಬ್ರಾಹಿಂ ಮಹಮ್ಮದ್​ ಸೋಲಿಹ್​ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿಯವರು ಇದೇ ಮೊದಲ ಬಾರಿಗೆ ಮಾಲ್ಡೀವ್ಸ್​ಗೆ ಭೇಟಿ ನೀಡುತ್ತಿದ್ದು, ಈಗಾಗಲೇ ಟ್ವೀಟ್​ ಮೂಲಕ ನೂತನ ಅಧ್ಯಕ್ಷ ಸೋಲಿಹ್​ ಅವರಿಗೆ ಶುಭ ಕೋರಿದ್ದಾರೆ. “ಮಾಲ್ಡೀವ್ಸ್​ನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಇಬ್ರಾಹಿಂ ಮಹಮ್ಮದ್​ ಸೋಲಿಹ್​ ಅವರಿಗೆ ನಾನು ಶುಭ ಹಾರೈಸುತ್ತೇನೆ. ಅಭಿವೃದ್ಧಿ ಕೆಲಸಗಳ ಸಾಕ್ಷಾತ್ಕಾರಕ್ಕೆ ಅದರಲ್ಲೂ ಮೂಲಸೌಕರ್ಯಗಳು, ಆರೋಗ್ಯ, ಸಂಪರ್ಕ, ಮಾನವಸಂಪನ್ಮೂಲಗಳ ಅಭಿವೃದ್ಧಿ ಮಾಲ್ಡೀವ್ಸ್​ ಸರ್ಕಾರದ ಪ್ರಮುಖ ಗುರಿಯಾಗಲಿ. ಪ್ರಗತಿ ಕಾರ್ಯಗಳಲ್ಲಿ ಭಾರತ ಸರ್ಕಾರ ಜತೆಯಾಗುತ್ತದೆ” ಎಂದು ಟ್ವೀಟ್​ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close