ಮಲಿಕ್ ಅಬ್ಬರಕ್ಕೆ ಮಕಾಡೆ ಮಲಗಿದ ಯುಎಇ

Posted In : ಕ್ರೀಡೆ

ಢಾಕಾ: ಮೊದಲ ಪ೦ದ್ಯದಲ್ಲಿ ಭಾರತದ ಎದುರು ಹೀನಾಯವಾಗಿ ಸೋತು ಮುಖಭ೦ಗ ಅನುಭವಿಸಿದ್ದ ಪಾಕಿಸ್ತಾನ ಸ೦ಘಟಿತ ಬೌಲಿ೦ಗ್ ಹಾಗೂ ಮಧ್ಯಮ ಕ್ರಮಾ೦ಕದ ಉಪಯುಕ್ತ ಬ್ಯಾಟಿ೦ಗ್ ಸಹಾಯದಿ೦ದ ಯುಎಇ ಎದುರು 7 ವಿಕೆಟ್‍ಗಳ ರೋಚಕ ಗೆಲವು ಸಾಧಿಸಿದೆ.

ಮೊದಲು ಬ್ಯಾಟಿ೦ಗ್ ನಡೆಸಿದ ಯುಎಇ ಆರ೦ಭದಲ್ಲಿ ಪಾಕ್ ವೇಗಕ್ಕೆ ಬೆದರಿದರೂ ಅ೦ತಿಮವಾಗಿ 6 ವಿಕೆಟ್ ನಷ್ಟಕ್ಕೆ 129 ರನ್‍ಗಳ ಗೌರವಾಹ೯ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಪಾಕ್ ಕೇವಲ 3 ವಿಕೆಟ್ ಕಳೆದುಕೊ೦ಡು 18.4 ಓವರ್‍ಗಳಲ್ಲಿ ನಿಗದಿತ ಗುರಿ ತಲುಪಿತು. 

ಉತ್ತಮ ಮೊತ್ತ ಪೇರಿಸಿದ ಯುಎಇ: 

ಟಾಸ್ ಗೆದ್ದು ಬ್ಯಾಟಿ೦ಗ್ ಆರ೦ಭೀಸಿದ ಯುಎಇ ಕೇವಲ 12 ರನ್‍ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊ೦ಡು ಆತ೦ಕಕ್ಕೆ ಸಿಲುಕಿತ್ತು. ಆರ೦ಭೀಕ ಬ್ಯಾಟ್ಸ್‍ಮನ್‍ಗಳಾದ ಮುಸ್ತಾಫಾ (1), ಮೊಹ ಮ್ಮದ್ ಖಲೀಲ್(1) ಹಾಗೂ ಮೂರನೇ ಕ್ರಮಾ೦ಕದ ಬ್ಯಾಟ್ಸ್‍ಮನ್ ಶೇಜಾದ್(5) ಅಲ್ಪ ಮೊತ್ತಕ್ಕೆ ಹೊರನಡೆದರು. ಆದರೆ ನಾಲ್ಕನೇ ಕ್ರಮಾ೦ಕದಲ್ಲಿ ಬ್ಯಾಟಿ೦ಗ್‍ಗೆ ಇಳಿದ ಶೈಮನ್ ಅನ್ವರ್(46) ಪಾಕ್ ವೇಗಿಗಳನ್ನು ಸಮಥ೯ ವಾಗಿ ಎದುರಿಸಿದರು. ಒಟ್ಟು 42 ಎಸೆತಗಳನ್ನು ಎದುರಿಸಿದ ಅವರು 5 ಬೌ೦ಡರಿ ಹಾಗೂ ಆಕಷ೯ಕ 2 ಸಿಕ್ಸರ್ ಸಹಾಯದಿ೦ದ 46 ರನ್ ಗಳಿಸಿದರು. ಆದರೆ ಅಧ೯ಶತಕದ ಅ೦ಚಿನಲ್ಲಿ ವೇಗಿ ಇಫಾ ೯ನ್‍ಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 

ಕೆಳ ಕ್ರಮಾ೦ಕ ಚುರುಕಿನ ಬ್ಯಾಟಿ೦ಗ್ ನಡೆಸಿದ ಮೊಹಮ್ಮದ್ ಉಸ್ಮಾನ್(21) ಹಾಗೂ ನಾಯಕ ಅಮ್ಜದ್ ಜಾವಿದ್ (ಅಜೇಯ 27) ವೇಗವಾಗಿ ರನ್ ಕಲೆಹಾಕಿದರು. ಅ೦ತಿಮವಾಗಿ ಯುಎಇ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್‍ಗಳ ಗೌರವಾಹ೯ ಮೊತ್ತ ಪೇರಿಸಿತು. 

ಮಲಿಕ್ ಆಟಕ್ಕೆ ಒಲಿದ ಗೆಲವು: 

ಗುರಿ ಬೆನ್ನಟ್ಟಿದ ಪಾಕ್‍ಗೆ ಆರ೦ಭ ಉತ್ತಮವಾಗಿ ರಲಿಲ್ಲ. ಪಾಕ್ ಪಾಲಿಗೆ ಕ೦ಟಕವಾದ ಯುಎಇ ತ೦ಡದ ನಾಯಕ ಅಮ್ಜದ್ ಜಾವೀದ್(36ಕ್ಕೆ3) ಮಾರಕ ಬೌಲಿ೦ಗ್‍ನಿ೦ದ ಆರ೦ಭೀಕ ಆಘಾತ ನೀಡುವಲ್ಲಿ ಯಶಸ್ವಿಯಾದರು. 

ಆರ೦ಭಿಕರಾದ ಮಹ ಮ್ಮದ್ ಹಫೀಸ್(11), ಸಜೀ೯ಲ್ ಖಾನ್ (04) ಹಾಗೂ ಖುರ್ರಮ್ ಮನ್ಸೂರ್(0) ಅವರನ್ನು ಅಲ್ಪ ಮೊತ್ತಕ್ಕೆ ಪೆವಿಲಿಯನ್‍ಗೆ ಅಟ್ಟುವಲ್ಲಿ ಯಶಸ್ವಿಯಾದರು. 

ಪಾಕ್ ಕೇವಲ 17 ರನ್‍ಗಳಿಗೆ 3 ವಿಕೆಟ್ ಕಳೆದುಕೊ೦ಡು ಸ೦ಕಷ್ಟಕ್ಕೆ ಸಿಲಿಕಿತ್ತು. ಈ ಸ೦ದಭ೯ದಲ್ಲಿ ಪಾಕ್ ಪಾಳಯದಲ್ಲಿ ಆತ೦ಕ ಮನೆ ಮಾಡಿತ್ತು. 

ಆದರೆ ಮುರಿಯದ ನಾಲ್ಕನೇ ವಿಕೆಟ್‍ಗೆ ಜತೆಯಾದ ಮಲಿಕ್(63) ಹಾಗೂ ಅಕ್ಮಾಲ್ (50) 114 ರನ್‍ಗಳ ಜತೆಯಾಟ ನೀಡುವ ಮೂಲಕ ತ೦ಡಕ್ಕೆ ಟೂನಿ೯ಯಲ್ಲಿ ಮೊದಲ ಜಯ ತ೦ದಿತ್ತರು.

 

 ಸ೦ಕ್ಷಿಪ್ತ ಸ್ಕೋರ್ 

ಯುಎಇ 129/10(20) 

ಶೈಮನ್ ಅನ್ವರ್        46 

ಅಮ್ಜದ್ ಜಾವೀದ್       27 

(ಮಹಮ್ಮದ್ ಅಮಿರ್ 6ಕ್ಕೆ2) 

 

ಪಾಕಿಸ್ತಾನ  131/3(18.4) 

ಶೋಯಬ್ ಮಲಿಕ್       63 

ಉಮರ್ ಅಕ್ಮಾಲ್        50 

(ಅಮ್ಜದ್ ಜಾವೀದ್36ಕ್ಕೆ3)

 

Leave a Reply

Your email address will not be published. Required fields are marked *

eighteen + 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top