ವಿಶ್ವವಾಣಿ

(ವಿಡಿಯೋ) ಮಲ್ಯ ಅವರೇ ನೀವು ಭಾರತಕ್ಕೆ ಯಾವಾಗ ಹೋಗ್ತೀರಾ..?

ಲಂಡನ್: ಮದ್ಯದ ದೊರೆ ವಿಜಯ್ ಮಲ್ಯ ಶುಕ್ರವಾರ ಓವೆಲ್ ಕ್ರಿಕೆಟ್ ಮ್ಯಾಚ್ ನೋಡಲು ಬಂದಿದ್ದ ವಿಜಯ ಮಲ್ಯ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಇಂಗ್ಲೆಂಡ್ ಮತ್ತು ಭಾರತದ ನಡುವಿನ ಮೊದಲ ಪಂದ್ಯವನ್ನು ನೋಡಲು ಬಂದಿದ್ದ ಮಲ್ಯರಿಗೆ ಸ್ಥಳೀಯ ವ್ಯಕ್ತಿಯೊಬ್ಬ ನೀವು ಭಾರತಕ್ಕೆ ಹೋಗಿ ಅಂತಾ ಹೇಳಿದ್ದಾರೆ.

ಈ ವೇಳೆ ವ್ಯಕ್ತಿಯ ಪ್ರಶ್ನೆಗೆ ಉತ್ತರಿಸಿದ ಮಲ್ಯ, ನಾನು ಭಾರತಕ್ಕೆ ಹೋಗುವುದನ್ನು ನ್ಯಾಯಾಧೀಶರು ನಿರ್ಧರಿಸುತ್ತಾರೆ ಎಂದು ಉತ್ತರ ನೀಡಿದ್ದಾರೆ. ಆದ್ರೆ ಪ್ರಶ್ನೆ ಕೇಳಿದ ವ್ಯಕ್ತಿ ಸುಮ್ಮನಾಗದೇ ನೀವು ಮರಳಿ ಭಾರತಕ್ಕೆ ಹೋಗಿ ಎಂದು ಆಗ್ರಹಿಸಿದ್ದಾನೆ. ವಿಜಯ್ ಮಲ್ಯ ಮುಗಳ್ನಕ್ಕು ಕಾರ್ ಹತ್ತಿ ಹೊರಟಿದ್ದಾರೆ.