About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

“ಪ್ರಧಾನಿ ಅಭ್ಯರ್ಥಿ ಘೋಷಣೆಗಿಂತ ಮಹಾಘಟಬಂಧನಕ್ಕೆ ಮೋದಿ ಹಾಗು ಅಮಿತ್‌ ಶಾರನ್ನು ಕೆಳಗಿಳಿಸುವುದೇ ಮೂಲ ಗುರಿ”: ಕೇಜ್ರಿವಾಲ್‌

ಕೊಲ್ಕತ್ತಾ: ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ವಿರುದ್ಧ ಸೆಣಸಲು ರಾಜಕೀಯ ಬಣ ನಿರ್ಮಾಣ ಮಾಡಲು ಒಗ್ಗೂಡಿರುವ ವಿಪಕ್ಷಗಳು ಕೋಲ್ಕತ್ತದಲ್ಲಿ ಸಭೆ ಸೇರಿವೆ.

ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಆಯೋಜಿಸಿರುವ ಈ ಸಭೆಯಲ್ಲಿ ಜೆಡಿಎಸ್‌ ಧುರೀಣರಾದ ಎಚ್‌ ಡಿ ದೇವೇಗೌಡ, ಎಚ್‌ ಡಿ ಕುಮಾರಸ್ವಾಮಿ, ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು, ಎಸ್‌ಪಿಯ ಅಖಿಲೇಶ್‌ ಯಾದವ್‌,

ಆಪ್‌ನ ಅರವಿಂದ್‌ ಕೇಜ್ರಿವಾಲ್, ಎನ್‌ಸಿಪಿಯ ಶರದ್‌ ಪವಾರ್‌ ಅಲ್ಲದೇ ತಮ್ಮದೇ ಪಕ್ಷದ ವಿರುದ್ಧ ಸದಾ ಕಿಡಿ ಕಾರುತ್ತಾ ಇರುವ ಶತೃಘ್ನ ಸಿನ್ಹಾ ರ‍್ಯಾಲಿಯಲ್ಲಿ ಹಾಜರಿದ್ದರು.

ಈ ಸಂದರ್ಭ ಮಾತನಾಡಿದ ಕುಮಾರಸ್ವಾಮಿ, “ಕೇಂದ್ರ ಸರಕಾರದ ನೋಟು ನಿಷೇಧದಂತ ವಿವೇಚನಾರಹಿತ ನಿರ್ಧಾರಗಳ ಕಾರಣ ಬಡ ಜನತೆ ಸಾಕಷ್ಟು ಸಮಸ್ಯೆ ಅನುಭವಿಸುವಂತೆ ಆಗಿದೆ. ಜನರೊಂದಿಗೆ ಬೆಸೆದು, ರಾಜ್ಯಗಳ ಹಿತಾಸಕ್ತಿಗಳನ್ನು ಕಾಪಾಡುವ ವಿಚಾರದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ  ಮಹತ್ವದ್ದಾಗಿದೆ” ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇದೇ ಸಂದರ್ಭ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌, “ಮಹಾಘಟಬಂಧನಕ್ಕೆ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವುದಕ್ಕಿಂತಲೂ, ಮೋದಿ ಹಾಗು ಅಮಿತ್‌ ಶಾರನ್ನು ದೆಹಲಿ ಗದ್ದುಗೆಯಿಂದ ಇಳಿಸುವುದೇ ಮೊದಲ ಗುರಿ” ಎಂದಿದ್ದಾರೆ.

ಸಮಾಜವಾದಿ ಪಕ್ಷದ ಧುರೀಣ ಅಖಿಲೇಶ್‌ ಯಾದವ್ ಮಾತನಾಡಿ, “ಬಿಜೆಪಿ ಸರಕಾರ ಬಂದ ಬಳಿಕ ದೇಶದಲ್ಲಿ ದ್ವೇಷಮಯ ವಾತಾವರಣ ಸೃಷ್ಟಿಯಾಗಿದೆ” ಎಂದು ಪ್ರಧಾನಿ ಮೋದಿ ವಿರುದ್ಧ ತಮ್ಮ ಆಕ್ರೋಶ ಕಾರಿಕೊಂಡಿದ್ದಾರೆ.

ಮಮತಾ ಬ್ಯಾನರ್ಜಿ ಮಾತನಾಡಿ, “ಬಳಕೆ ಅವಧಿ ಮುಗಿದ ಔಷಧಂತೆ ಮೋದಿ ಸಮಯವೂ ಮುಗಿದಿದೆ. ಕೇಂದ್ರದಲ್ಲಿ ಹೊಸ ಸರಕಾರ ರಚನೆಯಾಗಲಿದೆ. ರಾಜನಾಥ್‌ ಸಿಂಗ್‌, ಸುಷ್ಮಾ ಸ್ವರಾಜ್‌ ಹಾಗು ನಿತಿನ್‌ ಗಡ್ಕರಿರನ್ನು ಬಿಜೆಪಿ ಕಡೆಗಣಿಸಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಲ್ಲಿ, ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗುವುದು” ಎಂದು ಹೇಳಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close