About Us Advertise with us Be a Reporter E-Paper

ಯಾತ್ರಾಯಾತ್ರಾ panel2

ಮಾಮಲ್ಲಪುರ ಸಪ್ತ ಗೋಪುರಗಳ ಸುಪ್ತನಗರಿ

ಸುಧೀರ್ ಸಾಗರ್

ಲ್ಲವರು ಇನ್ನೊಂದಿಷ್ಟು ಕಾಲ ರಾಜ್ಯಭಾರ ಮಾಡಿ ದ್ದಿದ್ರೆ ಬಹುಶಃ ಜಗತ್ತಿನಲ್ಲಿಯೇ ಅತ್ಯುತ್ತಮವಾ ದಂತಹ ವೈಭವಪೂರ್ಣ ಶಿಲ್ಪಕಲೆಯ ನಗರ ವೊಂದು ನಮ್ಮದಾಗಿರೋದು..! ಭಾವನೆ ಕಾಡೋಕೆ ಶುರು ವಾಗೋದು ನಾಲ್ಕು ನೂರಕ್ಕೂ ಹೆಚ್ಚು ಅಪೂರ್ಣ ಗುಹಾ ಸಮುಚ್ಛಯಗಳು,ಏಕ ಶಿಲಾ ದೇವಸ್ಥಾನಗಳು ಹಾಗೂ ಬೃಹತ್ ಬಂಡೆಗಳ ಮೇಲಿನ ಉಬ್ಬು ಕೆತ್ತನೆಗಳನ್ನು ವೀಕ್ಷಿಸೋ ಕ್ಷಣದಲ್ಲಿ.

ಇಂತಹದ್ದೊಂದು ಅಪೂರ್ಣ ಕಲಾಕೃತಿಗಳ ಆಗರ, ಆರನೇ ಶತಮಾನದಲ್ಲಿ ದಕ್ಷಿಣ ಭಾರತವನ್ನಾಳಿದ ಪಲ್ಲವ ಸಾಮ್ರಾಜ್ಯದ ಪ್ರಮುಖ ವಾಣಿಜ್ಯ ನಗರಿ ಹಾಗೂ ಅತೀ ಮುಖ್ಯ ಬಂದರು ಪ್ರದೇಶವಾಗಿದ್ದ, ಸಮುದ್ರ ಕಿನಾರೆಯಲ್ಲಿ ಏಳು ಬೃಹತ್ ಗೋಪುರ ಗಳನ್ನೊಳಗೊಂಡಂತಹ ದೇವಾಲಯ ಸಮುಚ್ಛಯಗಳಿದ್ದ ಕಾರಣ ಕ್ಕಾಗಿ ವಿದೇಶಿಯರಿಂದ ಗೋಪುರಗಳ ನಗರಿ ಎಂದೇ ಕರೆಯಿಸಿ ಕೊಳ್ಳುತ್ತಿದ್ದ ನಗರ ಮಾಮಲ್ಲಪುರ ಅಥವಾ ಮಹಾಬಲಿಪುರ.

ಕಡಲತಡಿಯ ದೇವಸ್ಥಾನ

ಸೀ ಶೋರ್ ಟೆಂಪಲ್

ಏಳನೇ ಶತಮಾನದಲ್ಲಿ ಎರಡನೇ ನರಸಿಂಹರಾಯ ಸಮುದ್ರ ಕಿನಾರೆಗೆ ತಾಗಿಕೊಂಡಂತೆ ನಿರ್ಮಿಸಲಾಗಿದ್ದ ಏಳು ಬೃಹತ್ ದೇವಾ ಲಯಗಳಲ್ಲಿ ಆರು ದೇವಸ್ಥಾನಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಮುದ್ರದೊಳಗೆ ಮುಳುಗಿದರೂ,ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಏಕೈಕ ದೇವಸ್ಥಾನವಿದು. ಈ ದೇವಸ್ಥಾನದ ವಿಶೇಷವೆಂದರೆ ಇದರೊಳಗೇ ಎರಡು ದೇವಸ್ಥಾನಗಳಿದ್ದು ಒಂದು ಪೂರ್ವಕ್ಕೆ ಮುಖಮಾಡಿದ್ದರೆ ಮತ್ತೊಂದು ಮುಖ ಮಾಡಿದಂತಿದೆ.

ದೇವಳದೊಳಗೆ ಗರ್ಭಗೃಹ, ಅರ್ಧಮಂಟಪ ಮುಂತಾದ ವಿಭಾಗಗಳಿದ್ದು ಶಿವಲಿಂಗ ಸೇರಿದಂತೆ ಶಯನವಿಷ್ಣು, ಶಿವಪಾರ್ವತಿ, ಸಿಂಹವಾಹಿನಿ ದುರ್ಗೆ ಹಾಗೂ ಕೃಷ್ಣನ ವಿಗ್ರಹಗಳನ್ನು ಕಾಣಬಹು ದಾಗಿದೆ. ದೇವಸ್ಥಾನಗಳಿಗೆ ರಕ್ಷಣೆಗೆಂಬಂತೆ ಹೊರಾವರಣದ ಸುತ್ತ ಎರಡು ಸುತ್ತಿನ ತಡೆಗೋಡೆ ನಿರ್ಮಿಸಲಾಗಿದ್ದು ಅವುಗಳ ಮೇಲ್ಭಾಗ ದಲ್ಲಿ ಬೃಹತ್ ನಂದಿಯ ವಿಗ್ರಹಗಳನ್ನು ಸಾಲಾಗಿ ಕೂರಿಸಲಾಗಿದೆ. ಕಳೆದ ಸುನಾಮಿ ಅಪ್ಪಳಿಸಿದ ನಂತರದಲ್ಲಿ ಸಮುದ್ರದೊಳಗೆ ಮುಳು ಗಿದ್ದ ದೇವಸ್ಥಾನವೊಂದು ಗೋಚರಿಸತೊಡಗಿದ್ದು ಏಳು ಗೋಪುರ ಗಳ ಮಾತಿಗೆ ಪುಷ್ಟಿ ನೀಡುವಂತಿದೆ.

ಪಂಚ ರಥಗಳು

6ನೇ ಶತಮಾನದ ಮಧ್ಯಭಾಗದಲ್ಲಿ, ಒಂದನೇ ನರಸಿಂಹವರ್ಮನ ಕಾಲದಲ್ಲಿ ರಚನೆಯಾದ, ಒಂದೇ ಬಂಡೆಯನ್ನೇ ಕೊರೆದು, ಕೇವಲ ಹೊರಮೈ ಮಾತ್ರವಲ್ಲದೆ ಒಳಗಿನ ಆವರಣವನ್ನೂ ಕಲಾಕೃತಿಗಳಿಂದ ಸಮೃದ್ಧಗೊಳಿಸಿ ನಿರ್ಮಿಸಲಾದ, ರಥಗಳನ್ನು ಹೋಲುವ ಅಪೂರ್ಣ ಕೆತ್ತನೆಯ ಅದ್ಭುತ ಏಕಶಿಲಾ ದೇವಸ್ಥಾನಗಳಿವು. ಪಂಚ ಪಾಂಡವರ ಹಾಗೂ ದ್ರೌಪದಿಯ ಪ್ರತೀಕವಾಗಿ ಐದು ದೇವಸ್ಥಾನ ಗಳನ್ನು ನಿರ್ಮಿಸಲಾಗಿದ್ದು ಒಂದೊಂದೂ ವಿಶಿಷ್ಟವಾದ ರಚನೆ ಹಾಗೂ ಆಕಾರಗಳನ್ನು ಹೊಂದಿದ್ದು ಪ್ರತಿಯೊಂದು ದೇವಸ್ಥಾನವೂ ಪ್ರತ್ಯೇಕ ದೇವತೆಗಳ ವಿಗ್ರಹಗಳನ್ನು ಹೊಂದಿದೆ.

ಐದೂ ಅತ್ಯಂತ ಎತ್ತರದ ದೇವಸ್ಥಾನವಾಗಿದ್ದು, ಮೂರಂತಸ್ತಿನ ಪುಷ್ಪಕ ವಿಮಾನದ ಆಕಾರದಲ್ಲಿ ನಿರ್ಮಿಸಿ ಅರ್ಧ ನಾರೀಶ್ವರನನ್ನು ಪ್ರತಿಷ್ಟಾಪಿಸಲಾಗಿರೋ ಧರ್ಮರಾಯ ರಥ. ಹೆಸರಿಗೆ ತಕ್ಕಂತೆ ಅತ್ಯಂತ ಉದ್ದ ಹಾಗೂ ಅಗಾಧವಾದ ದೇವಸ್ಥಾನ ವಾಗಿದ್ದು ಅನಂತಶಯನ ವಿಷ್ಣುವಿನ ವಿಗ್ರಹವನ್ನು ಹೊಂದಿರುವ ಭೀಮ ರಥ.ಐದು ರಥಗಳಲ್ಲಿ ಅತ್ಯಂತ ಸುಂದರವಾದ, ಅಪ್ಸರೆ ಯರ ಕೆತ್ತನೆಗಳಿಂದ ಸಮೃದ್ಧವಾಗಿರುವ ಹಾಗೂ ಸಂಪೂರ್ಣ ಗೊಂಡಿರುವ ಏಕೈಕ ದೇವಸ್ಥಾನವೆನ್ನಬಹುದಾದ, ಪರಮಶಿವನನ್ನು ಪ್ರತಿಷ್ಟಾಪಿಸಲಾಗಿರುವ ಅರ್ಜುನ ರಥ. ನಾಲ್ಕು ರಥಗಳ ಸಾಲಿ ನಿಂದ ಪ್ರತ್ಯೇಕವಾಗಿ ರಚನೆಯಾಗಿರುವ, ಮತ್ತು ಆತನ ಆನೆಯ ಪ್ರತಿಮೆಗಳನ್ನು ಹೊಂದಿರುವ ನಕುಲ ಸಹದೇವ ರಥ. ರಥ ಸಮುಚ್ಛಯದಲ್ಲಿಯೇ ಅತ್ಯಂತ ಕಿರಿಯದಾದ, ಪುಟ್ಟ ಗುಡಿಸಿಲಿನಂತೆ ಕಾಣುವ ದೇವಸ್ಥಾನವಾಗಿರೋ, ಮಹಿಷಾಸುರನ ತಲೆಯ ಮೇಲೆ ನಿಂತಿರುವ ದುರ್ಗೆಯ ವಿಗ್ರಹವಿರುವ ದ್ರೌಪದಿ ರಥಗಳು ಮಾತ್ರವಲ್ಲದೆ ಆನೆ ಸಿಂಹ ನಂದಿ ಮುಂತಾದ ಬೃಹತ್ ಏಕಶಿಲಾ ವಿಗ್ರಹಗಳನ್ನೂ ಕಾಣಬಹುದಾಗಿದೆ.

ಗುಹಾ ಸಮುಚ್ಛಯ

ಶಿಲಾಯುಗದೊಳಗೆ ನಡೆದು ಹೋಗುತ್ತಿರುವಂತೆ ಭಾಸವಾಗುವ, ವಿಸ್ತಾರವಾಗಿ ಹರಡಿಕೊಂಡಿರುವ ಬಂಡೆಗಳನ್ನು ಕೊರೆದು ಕೆತ್ತಲ್ಪಟ್ಟಿ ರುವ ಏಕಶಿಲಾ ಗುಹಾ ದೇವಸ್ಥಾನಗಳ ಕೆಲ ವೊಂದು ಪೂರ್ಣಗೊಂಡಿದ್ದು ಬಹುತೇಕ ಅಪೂರ್ಣವಾಗಿಯೇ ಉಳಿದಿವೆ. ಇನ್ನುಳಿದಂತೆ ಕೆಲವೊಂದು ಕಡೆ ಇನ್ನೂ ಪ್ರಾರಂಭಿಸಿರೋ ಸೂಚನೆಗಳನ್ನಷ್ಟೇ ಕಾಣಬಹುದಾಗಿದೆ. ಪ್ರಾರಂಭದಲ್ಲಿಯೇ ಎದು ರಾಗುವ ಗಂಗಾವತರಣ ಅಥವಾ ಅರ್ಜುನನ ಪ್ರಾಯಶ್ಚಿತ್ತವೆಂಬ, ದೈತ್ಯಾಕಾರದ ಬಂಡೆಯ ಮೇಲೆ ಚಿತ್ರಿಸಲಾಗಿರುವ ಕೆತ್ತನೆಗಳು ಜಗತ್ತಿನ ಬೃಹತ್ ಏಕಶಿಲಾ ಕೆತ್ತನೆಗಳಲ್ಲೊಂದಾಗಿದೆ. ಮಹಾಭಾರ ತದ ಚಿತ್ರಣದ ಜತೆಜತೆಗೇ ಗಂಗೆಯನ್ನು ಸ್ವರ್ಗದಿಂದ ಭೂಮಿಗೆ ಕರೆತಂದ ಕಥಾನಕದ ದೃಶ್ಯವನ್ನು ಸುಂದರವಾಗಿ ಕೆತ್ತನೆಯಲ್ಲಿ ಸೆರೆ ಹಿಡಿಯಲಾಗಿದೆ. ಅದಕ್ಕೆ ತಾಗಿಕೊಂಡಂತೆ ಗುಹಾ ಮಂಟಪ ಹಾಗೂ ಕೃಷ್ಣ ಒಳಾಂಗಣದಲ್ಲಿ ಬಂಡೆ ಯನ್ನು ಇಪ್ಪತ್ತು ಅಡಿಗಳಷ್ಟು ಕೊರೆದು ಮಾಡಲಾಗಿರುವ ಹಾಲ್ ಹಾಗೂ ಅದಕ್ಕೆ ಆಧಾರವಾಗಿ ಕಂಬಗಳಂತಹ ಭಾಗಗಳನ್ನು ಸಹ ಅದೇ ಬಂಡೆ ಯಿಂದಲೇ ಕೊರೆದು ನಿರ್ಮಿಸಲಾಗಿರೋದು ಆಶ್ಚರ್ಯವೇ ಸರಿ. ಇವಿಷ್ಟೇ ಅಲ್ಲದೆ ಏಕಶಿಲಾ ಗಣೇಶ ಮಂಟಪ, ಧರ್ಮರಾಜ ಸಿಂಹಾ ಸನ, ದ್ರೌಪದಿ ಸ್ನಾನದ ತೊಟ್ಟಿ, ರಾಜಗೋಪುರ, ವರಾಹ ಗುಹೆ ತ್ರಿಮೂರ್ತಿ ಮಂದಿರ, ಹುಲಿ ಗುಹೆ, ಓಳಕನ್ನೇಶ್ವರ ದೇವಸ್ಥಾನ, ವರಾಹ ಗುಹೆ, ಮಹಿಷಾಸುರ ಮರ್ಧಿನಿ ಗುಹೆ, ಆನೆಗಳ ಗುಂಪಿನ ಗುಹೆ ಗುಹಾ ದೇವಾಲಯಗಳನ್ನು ವೀಕ್ಷಿಸಬಹುದಾಗಿದೆ.

ಕೃಷ್ಣನ ಬೆಣ್ಣೆಯುಂಡೆ

ಸುಮಾರು ಇಪ್ಪತ್ತು ಅಡಿ ಸುತ್ತಳತೆಯ,ಇನ್ನೂರೈವತ್ತು ಟನ್ ತೂಕದ ಈ ಕಲ್ಲು,ಬೃಹತ್ ಬಂಡೆಯೊಂದರ ಅಂಚಿನಲ್ಲಿ ಯಾವುದೇ ಆಧಾರವಿಲ್ಲದೆ ಓರೆಯಾಗಿ, ಇನ್ನೇನು ಮುಟ್ಟಿದರೂ ಬಿದ್ದು ಬಿಡ ಬಹುದೆಂದು ಭಾಸವಾಗುವ, ಅದೇ ಸ್ಥಿತಿಯಲ್ಲಿ ಸಾವಿರಾರು ವರ್ಷ ಗಳಿಂದ ಮಿಸುಕಾಡದಂತೆ ನಿಂತಿರುವ ಈ ಬಂಡೆಯ ದೃಶ್ಯ ವಿಸ್ಮಯಗೊಳಿಸುತ್ತದೆ.

ಮೊಸಳೆ ಉದ್ಯಾನವನ

1973 ರಲ್ಲಿ ನಿರ್ಮಾಣವಾದ, ಏಷ್ಯಾ ಖಂಡದಲ್ಲಿಯೇ ಪ್ರಥಮ ಮೊಸಳೆಗಳ ಸಂತಾನೋತ್ಪತ್ತಿ ಕೇಂದ್ರ ಹಾಗೂ ಅತೀ ದೊಡ್ಡ ಮೊಸಳೆಗಳ ಅಭಯಾರಣ್ಯವೆಂಬ ಖ್ಯಾತಿಯ ಉದ್ಯಾನವನವಿದು. ಅಳಿವಿನಂಚಿನಲ್ಲಿರುವ ಪ್ರಬೇಧಗಳೂ ಸೇರಿ ದಂತೆ ಹದಿನಾಲ್ಕು ಜಾತಿಯ ಸುಮಾರು 5000ಕ್ಕೂ ಅಧಿಕ ಮೊಸಳೆ ಗಳು, ಹತ್ತಕ್ಕೂ ಹೆಚ್ಚು ಬಗೆಯ ಆಮೆಗಳು, ಮೂರು ವಿಧದ ಹಾವು ಗಳೂ ಸೇರಿದಂತೆ ಹಲವಾರು ಪ್ರಾಣಿ ಪಕ್ಷಿ ಪ್ರಭೇದಗಳನ್ನು ಇಲ್ಲಿ ನೋಡಬಹುದಾಗಿದೆ.

ಮಹಾಬಲಿಪುರಂ ಬೀಚ್, ಕೋವಲಂ ಬೀಚ್, ಹೆರಿಟೇಜ್ ಮ್ಯೂಸಿಯಂ, ಇಂಡಿಯಾ ಸೀ ಶೆಲ್ ಮ್ಯೂಸಿಯಂ, ಲೈಟ್ ಹೌಸ್, ಆಲಂಪರೈ ಕೋಟೆ, ಪೆರುಮಾಳ್ ದೇವಸ್ಥಾನ, ತಿರು ಮಲೈ, ಮಹಿಷಾಸುರ ಬಂಡೆ ಇತ್ಯಾದಿ.

ಸಮೀಪದ ವಿಮಾನ ನಿಲ್ದಾಣ

ಚೆನ್ನೈ (60km)

ಸಮೀಪದ ರೈಲ್ವೇ ನಿಲ್ದಾಣ

ಚೆಂಗಲಪಟ್ಟು (29km)

ಸಮೀಪದ ನಗರಗಳು

ಕಾಂಚೀಪುರಂ(69km)

ಪಾಂಡೀಚ್ಛೇರಿ (95km)

ಚೆನ್ನೈ (57km).

ಪ್ರವಾಸೋದ್ಯಮ ಇಲಾಖೆಯು ನಡೆಸುವ ಉತ್ತಮ ದರ್ಜೆಯ ಹೋಟೆಲ್ ಸೇರಿದಂತೆ ಹಲವಾರು ರೆಸಾರ್ಟ್‌ಗಳು ದೇವಸ್ಥಾನದ ಸಮೀಪದಲ್ಲಿವೆ. ಬೀಚ್ ಹೌಸುಗಳೂ ದಿನದ ದರದಲ್ಲಿ ಬಾಡಿಗೆಗೆ ಲಭ್ಯವಿದೆ.

Tags

Related Articles

Leave a Reply

Your email address will not be published. Required fields are marked *

Language
Close