About Us Advertise with us Be a Reporter E-Paper

ಅಂಕಣಗಳು

ಮಮತಾ ಅಶ್ವಮೇಧ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಲ್ಲಿ ಪ್ರಭುತ್ವದತ್ತ ತಮ್ಮ ಚಿತ್ತ ಹರಿಸಿರುವಂತಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಣಕಹಳೆ ಮೊಳಗಲು ಪ್ರತಿಪಕ್ಷಗಳ ಧ್ರುವವಾಗಲು ಮಮತಾ ಬ್ಯಾನರ್ಜಿ ಪಣ ತೊಟ್ಟಂತಿದೆ. ಇದೇ ಮಹತ್ವಾಕಾಂಕ್ಷೆಯೊಂದಿಗೆ ಮಮತಾ ಸದ್ಯ ರಾಜಧಾನಿ ದಿಲ್ಲಿ ಪ್ರವಾಸದಲ್ಲಿದ್ದಾರೆ. ಪ್ರಧಾನಿ  ನಿಷ್ಠರನ್ನು ಹೊರತುಪಡಿಸಿ ರಾಜಕೀಯ ಕ್ಷಿತಿಜದ ಎಲ್ಲ ಬಲ್ಲ, ಬಲ್ಲದ ನಾಯಕರನ್ನು ಮಮತಾ ಭೇಟಿಯಾಗುತ್ತಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ತಾವು ಕೋಲ್ಕತಾದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದು, ಅದಕ್ಕೆ ಪ್ರತಿಪಕ್ಷಗಳ ಎಲ್ಲ ಧುರೀಣರನ್ನು ಆಹ್ವಾನಿಸುವುದು ತಮ್ಮ ಉದ್ದೇಶ ಎಂದು ಮಮತಾ ಹೇಳಿಕೊಂಡಿದ್ದರೂ, ಇದು ಮೋದಿ ವಿರೋಧಿ ಕೂಟ ರಚನೆಯ ಪ್ರಯತ್ನದ ಭಾಗ ಎಂಬುದು ಗುಟ್ಟಿನ ವಿಷಯವೇನಲ್ಲ. ಎರಡು ಸಂಸದರನ್ನು ಹೊಂದಿರುವ ಜಾತ್ಯತೀತ ಜನತಾದಳದ ದೇವೇಗೌಡರಿಂದ ಹಿಡಿದು 48 ಸೀಟು ಗೆದ್ದಿರುವ ದೇಶದ  ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಮುಖಂಡರವರೆಗೆ ಮಮತಾ ಯಾರನ್ನೂ ಬಿಡದೆ ಭೇಟಿ ಮಾಡುತ್ತಿದ್ದಾರೆ. ಮಮತಾರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ದೀದಿ ದಿಲ್ಲಿಯತ್ತ ಕಣ್ಣು ನೆಟ್ಟಿದ್ದಾರೆ. ಬಿಜೆಪಿ ಹಾಗೂ ಆರೆಸ್ಸೆಸ್ ಮೂಲದವರನ್ನು ಹೊರತುಪಡಿಸಿ ಬೇರೆ ಯಾರನ್ನಾದರೂ ಪ್ರಧಾನಿ ಹುದ್ದೆಗೆ ಬೆಂಬಲಿಸಲು ತನಗೆ ಅಭ್ಯಂತರ ಇಲ್ಲ ಎಂದು ಕಾಂಗ್ರೆಸ್ ಹೇಳಿದ ಮೇಲೆ ಮಮತಾ ಪ್ರತಿಪಕ್ಷ ಕೂಟದ ಧ್ರುವವಾಗಿ ಹೊಮ್ಮಿದ್ದಾರೆ. ಚುನಾವಣೆ ವರ್ಷಾಂತ್ಯಕ್ಕೆ ಆಗಬಹುದು ಇಲ್ಲ ನಿಗದಿತ ವೇಳೆಗೇ ಆಗಬಹುದು. ಆದರೆ ಮೋದಿ  ಪಾಂಚಜನ್ಯ ಊದುವವರು ಯಾರು ಎಂಬುದರ ಲೆಕ್ಕಾಚಾರಗಳು ಅದಾಗಲೇ ಆರಂಭವಾಗಿದೆ ಎನ್ನುವುದಕ್ಕೆ ಮಮತಾ ದಿಲ್ಲಿ ಭೇಟಿಯೇ ಉದಾಹರಣೆಯಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close