ಬಿಎಂಡಬ್ಲ್ಯೂ ಕಾರಿನೊಂದಿಗೇ ತಂದೆಯ ಸಮಾಧಿ ಮಾಡಿದ ಸುಪುತ್ರ!

Posted In : ವಿದೇಶ

ಮೃತದೇಹವನ್ನು ಶವಪೆಟ್ಟಿಗೆಯೊಂದಿಗೇ ಸಮಾಧಿ ಮಾಡುವುದನ್ನು ನೋಡಿದ್ದೇವೆ. ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ತಂದೆಯ ಮೃತದೇಹವನ್ನು ಲಕ್ಷಾಂತರ ರೂ ಬೆಲೆ ಬಾಳುವ ಕಾರಿನೊಂದಿಗೇ ಸಮಾಧಿ ಮಾಡಿದ್ದಾನೆ ಎಂದರೆ ನಂಬುತ್ತೀರಾ?

ಹೌದು, ನಂಬಲೇಬೇಕು. ನೈಜೀರಿಯಾದ ಅನಂಬ್ರಾ ರಾಜ್ಯದ ಇಹಿಯಾಲಾದಲ್ಲಿ ಅಜುಬುಕ್ ಎಂಬಾಥ ತನ್ನ ತಂದೆಯನ್ನು ಈ ರೀತಿ ಸಮಾಧಿ ಮಾಡಿದ್ದಾನೆ. ತಂದೆ ಬದುಕಿದ್ದಾಗ ಹೊಸ ಬಿಎಂಡಬ್ಲ್ಯೂ ಕಾರು ಕೊಡಿಸುವುದಾಗಿ ಅಜುಬುಕ್ ಮಾತು ನೀಡಿದ್ದನಂತೆ. ಆದರೆ ಅವರು ಬದುಕಿದ್ದಾಗ ತನ್ನ ಮಾತು ಈಡೇರಿಸಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ.

ಕೊನೆಗೆ ತಂದೆ ಸಾವನ್ನಪ್ಪಿದಾಗ ಅವರ ಕಡೆಯಾಸೆ ಎನ್ನುವಂತೆ ಅಂತಿಮ ಯಾತ್ರೆಗೆ ಮುನ್ನ ಸುಮಾರು 60 ಲಕ್ಷ ರೂ. ಬೆಲೆ ಬಾಳುವ ಬಿಎಂಡಬ್ಲ್ಯು ಕಾರನ್ನು ಖರೀದಿಸಿದ್ದು ಅದರ ಸಮೇತ ತಮ್ಮ ತಂದೆಯನ್ನು ಸಮಾಧಿ ಮಾಡಿದ್ದಾನೆ.

ಇಷ್ಟೇ ಅಲ್ಲದೆ ತಂದೆ ಕಾರಿನಲ್ಲೇ ಸ್ವರ್ಗಕ್ಕೆ ಹೋಗಲಿ ಎಂದು ಕಾರಿಗೆ ಸ್ಯಾಟಲೈಟ್ ನ್ಯಾವಿಗೇಷನ್ ಸಿಸ್ಟಮ್ ಸಹ ಅಳವಡಿಸಿದ್ದಾನೆ ಅಜುಬುಕ್. ಸುಮಾರು ಆರು ಅಡಿಗಳ ಆಳದ ಕಂದಕ ತೋಡಿ ಅದರಲ್ಲಿ ತಂದೆ ಶವವನ್ನು ಕಾರಿನ ಸಮೇತ ಮಣ್ಣು ಮಾಡಲಾಗಿದೆ.

ಇದಕ್ಕೇ ಹೇಳುವುದು ಲೋಕೋಭಿನ್ನರುಚಿಃ!

Leave a Reply

Your email address will not be published. Required fields are marked *

1 × three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top