ಮ್ಯಾನ್‌ ಹೊಲ್ ದುರಂತಕ್ಕೆ ಪರಿಹಾರವೇನು? 

Posted In : ಸಂಗಮ, ಸಂಪುಟ

 -ಬಸವರಾಜ ಎನ್. ಬೋದೂರು

ಆಧುನಿಕ ಸಮಾಜದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಯಂತ್ರಜ್ಞಾನ ಕ್ಷೇತ್ರದಲ್ಲಿ ಏನೆಲ್ಲಾ ಸಾಧನೆ ಮಾಡಿರುವ ನಮ್ಮ ದೇಶದಲ್ಲಿ ಇಂದಿಗೂ  ಅಮಾನವೀಯ ಮಲ ಹೊರುವ ಪದ್ಧತಿ ಮಾತ್ರ ಕೊನೆಯಾಗದೇ ಜೀವಂತ ಉಳಿದುಕೊಂಡಿದೆ. ಭಾನುವಾರ ಬೆಂಗಳೂರಿನಲ್ಲಿ ಎಚ್‌ಎಸ್‌ಆರ್ ಲೇಔಟ್ ಸಮೀಪದ ಬಂಡೇಪಾಳ್ಯದ ಎನ್‌ಡಿ ಸಫೆಲ್ ಅಪಾರ್ಟ್‌ಮೆಂಟ್‌ನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಶುಚಿಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ದುರ್ಮರಣಕ್ಕೀಡಾದ ಘಟನೆಯೇ ಇದಕ್ಕೆ ಜೀವಂತ ಸಾಕ್ಷಿ. ಯಾಂತ್ರಿಕ ಯುಗದಲ್ಲಿ ಇಂಥ ಅಮಾನುಷ ಪದ್ಧತಿ ಜೀವಂತ ಇದೆ ಎಂದರೆ, ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸಬೇಕಾಗಿದೆ. ಬದಲಾವಣೆ ಬಯಸುತ್ತಿರುವ ದೇಶದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾದ ಜಾಡ್ಯಗಳು ಇಂದಿಗೂ ಇವೆ. ಇವುಗಳಲ್ಲಿ ತೀರಾ ಅವಮಾನಕರವಾಗಿದ್ದು ಮಲಹೊರುವ ಪದ್ಧತಿ. ಈ ಪದ್ಧತಿಗೆ ದೇಶಾದ್ಯಂತ ನಿಷೇಧವಿದ್ದರೂ ನಗರ ಪ್ರದೇಶಗಳಲ್ಲಿ ಇವು ಇನ್ನೂ ಇವೆ.

 

ಸರಕಾರಿ ಆಸ್ಪತ್ರೆ, ಬಸ್‌ನಿಲ್ದಾಣ, ಕಚೇರಿಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಮಲ ಹೊರುವ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವುದು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ  ಸುದ್ದಿಯಾಗಿದೆ. ಈ ಪದ್ಧತಿ ಆಚರಣೆ  ಕಾನೂನು ಬಾಹಿರವಾಗಿದ್ದರೂ, ದುಡ್ಡಿದ್ದವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ತಪ್ಪಿತಸ್ಥರಿಗೆ ಅಧಿಕಾರಿಗಳು ಮೃದು ಧೋರಣೆ ತೋರುವುದರಿಂದ ಕಡಿವಾಣ ಮರೀಚಿಕೆಯಾಗಿದೆ. ಕಾನೂನು ವ್ಯವಸ್ಥೆ ಸಡಿಲಗೊಂಡಿರುವುದರಿಂದಲೇ ಈ ಪದ್ಧತಿ ದೇಶವ್ಯಾಪಿ ಹರಡಿದೆ. 2011ರ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಮತ್ತು ಜಾತಿಗಣತಿ ಪ್ರಕಾರ ಪದ್ಧತಿ ಆಚರಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 15,375 ಜಾಡ ಮಾಲಿಗಳಿದ್ದು 4ನೇ ಸ್ಥಾನ ಪಡೆದಿದೆ.

23,093 ಜಾಡಮಾಲಿಗಳನ್ನು ಹೊಂದಿರುವ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದಿದೆ. ಉತ್ತರ  ದ್ವೀತಿಯ ಸ್ಥಾನ ಪಡೆದು 17,619 ಜಾಡಮಾಲಿಗಳನ್ನು ಹೊಂದಿದೆ. 17,332 ಜಾಡಮಾಲಿಗಳನ್ನು ಹೊಂದಿರುವ ತ್ರಿಪುರ ರಾಜ್ಯ ತೃತೀಯ ಸ್ಥಾನ ಪಡೆದಿದೆ. ದೇಶದಲ್ಲಿ ಒಟ್ಟು ಮಲ ಹೊರುವ ಕಾರ್ಮಿಕರ ಸಂಖ್ಯೆ-18.06 ಲಕ್ಷ ದಾಟಿದೆ ಎನ್ನುವ ವರದಿಯೊಂದನ್ನು ಓದಿದಾಗ ದಿಗ್ಭ್ರಮೆಯಾಗುತ್ತದೆ. ಆದರೆ ರಾಜ್ಯ ಸರಕಾರ ಇತ್ತೀಚೆಗೆ 2013 ರಲ್ಲಿ ನಡೆಸಿದ ಸಮೀಕ್ಷಾ ವರದಿಯಲ್ಲಿ ಮಲ ಹೊರುವ ಕಾರ್ಮಿಕರ ಸಂಖ್ಯೆ 2011ರಲ್ಲಿ 15.375 ರಷ್ಟಿತ್ತು. ಈಗ 427ಕ್ಕೆ ಇಳಿದಿದೆ. ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿ  ಇಲ್ಲವೆಂದು ರಾಜ್ಯ ಸರಕಾರ ಸರ್ವೊಚ್ಛ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಒದಗಿಸಿದೆ.ಧಿಡೀರ್ ಕುಸಿತ ಕಂಡಿದ್ದು ಹೇಗೆ? 2016ರಲ್ಲಿ ರಾಜ್ಯ ಸರಕಾರ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಿ, ಪಂಚಾಯತ್ ಅಭಿವೃದ್ಧಿ ಇಲಾಖೆ ಅಧಿಕಾರಿಗಳು(ಪಿಡಿಒ) ಗಳಿಗೆ ಸಮೀಕ್ಷೆಯ ಜವಾಬ್ದಾರಿ ವಹಿಸಲಾಗಿತ್ತು.

ಪಿಡಿಒಗಳು ಮಲ ಹೊರುವ ಕಾರ್ಮಿಕರು ಇದ್ದಾರೆಂದು ವರದಿ ಒಪ್ಪಿಸಿದರೆ ಎಲ್ಲಿ ತಮ್ಮ ಹುದ್ದೆಗೆ ಕುತ್ತು ಬರುತ್ತದೋ ಎಂಬ ಭಯದಿಂದ ವಾಸ್ತವವಾಗಿ ಗ್ರಾಮಗಳಲ್ಲಿ ಗಣತಿ  ಪಂಚಾಯಿತಿಯಲ್ಲಿಯೇ ಕುಳಿತು ತಮ್ಮ ವ್ಯಾಪ್ತಿಯಲ್ಲಿ ಮಲ ಹೊರುವ ಕಾರ್ಮಿಕರೇ ಇಲ್ಲ ಎಂಬ ಸುಳ್ಳು ವರದಿಯನ್ನು ಸರಕಾರಕ್ಕೆ ನೀಡಿರುವುದರಿಂದ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ, ವಾಸ್ತವವಾಗಿ ಮಲಹೊರುವ ಕಾರ್ಮಿಕರು ಈಗಲೂ 2011ರ ಗಣತಿಯ ಪ್ರಕಾರವೇ ಇದ್ದಾರೆ. ಇದರ ಕುರಿತು ಸರಕಾರ ಗಮನ ಹರಿಸಬೇಕಿದೆ.ದುರಂತಕ್ಕಿಡಾದವರ ಸಂಖ್ಯೆ2008 ರಿಂದ 2018-3 ಜನವರಿಯವರೆಗೆ  ಒಟ್ಟು 54 ಕಾರ್ಮಿಕರು ಮೃತಪಟ್ಟಿದ್ದಾರೆ. ಆದರೆ, ಸಫಾಯಿ ಕರ್ಮಚಾರಿ ಆಯೋಗದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 10  66 ಕಾರ್ಮಿಕರು ಮ್ಯಾನ್‌ಹೊಲ್‌ಗೆ ಇಳಿದು ಮೃತಪಟ್ಟಿದ್ದಾರೆ ಎಂದು ವರದಿ ನೀಡಿದೆ.ಮ್ಯಾನ್‌ಹೋಲ್‌ನಲ್ಲಿ ಏನಿದೆ?ಮ್ಯಾನ್‌ಹೋಲ್‌ನಲ್ಲಿ ಮಿಥೇನ್(ಸಿಹೆಚ್4), ಕಾರ್ಬನ್ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲಗಳು ಇರುತ್ತವೆ.

ಇದರಲ್ಲಿ ಕಾರ್ಬನ್ ಮೊನಾಕ್ಸೈಡ್ ಅತ್ಯಂತ ವಿಷಕಾರಿಯಾಗಿರುವುದರಿಂದ ಒಳಗೆ ಇಳಿದಾಗ ಉಸಿರಾಟದ ಮೂಲಕ ದೇಹವನ್ನು ಸೇರಿದ ಕೇವಲ 15 ಸೆಕೆಂಡ್‌ಗಳಲ್ಲಿ ಜೀವ ಹೋಗುತ್ತದೆ. ಈ ವಿಷಕಾರಿ ಅನಿಲಗಳು ಸಂಪೂರ್ಣವಾಗಿ ಹೊರಬರಬೇಕಾದರೆ ಕನಿಷ್ಠ 21 ದಿನಗಳು ಬೇಕಾಗುತ್ತದೆ.ನಿಯಮ ಏನು ಹೇಳುತ್ತದೆ?ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಒಳಚರಂಡಿ  ಕೈಪಿಡಿ ಕರಡು 2012ರ ನಿಯಮ ಹೇಳುವಂತೆ ಮ್ಯಾನ್ ಹೋಲ್‌ಗೆ ಕಾರ್ಮಿಕ ಇಳಿಯಲೇ ಬೇಕಾದಂತಹ ಪರಿಸ್ಥಿತಿ ಉಂಟಾದಾಗ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿರುತ್ತದೆ. ಒಬ್ಬ ಹಿರಿಯ ಅಧಿಕಾರಿ ಹಾಗೂ ಇಬ್ಬರು ಸಹಾಯಕರು ಸ್ಥಳದಲ್ಲಿ ಇರಲೇ ಬೇಕು. ಮ್ಯಾನ್ ಹೋಲ್‌ಗೆ ಇಳಿದ ಕಾರ್ಮಿಕನ ಆಮ್ಲಜನಕ ಪೂರೈಕೆಯ ಬಗ್ಗೆ ಅವರು ಸುರಕ್ಷಾ ಕ್ರಮದ ಮೇಲ್ವಿಚಾರಣೆ ನೋಡಿಕೊಳ್ಳಬೇಕಾಗುತ್ತದೆ.

ಕಾರ್ಮಿಕ ಮಾಸ್‌ಕ್ ಧರಿಸಿ, ಮೈಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು, ರಬ್ಬರ್ ಹ್ಯಾಂಡ್ ಗ್ಲೌಸ್, ಬೂಟುಗಳನ್ನು  ಮ್ಯಾನ್ ಹೋಲ್‌ಗೆ ಇಳಿಯಬೇಕಾಗುತ್ತದೆ. ಅವರಲ್ಲಿ ಟು ವೇ ವೈರ್‌ಲೆಸ್ ಇರಬೇಕಾಗುತ್ತದೆ. ಪ್ರತಿ ಮೂರು ನಿಮಿಷಕ್ಕೊಮ್ಮೆ ಅಲ್ಲಿರುವ ಸಹಾಯಕ ಅನಿಲವನ್ನು ಪರೀಕ್ಷಿಸುತ್ತಾ ಇರಬೇಕಾಗುತ್ತದೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಆಮ್ಲಜನಕ ಸಿಲಿಂಡರ್ ಇರುವುದು ಕಡ್ಡಾಯವಾಗಿರುತ್ತದೆ. ಆದರೆ ಬೆಂಗಳೂರಿನ ಬಂಡೇಪಾಳ್ಯದ ಎನ್‌ಡಿ ಸಫೆಲ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ತ್ಯಾಜ್ಯ ಸಂಗ್ರಹ ಘಟಕ ದುರಂತದಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಯಾವುದೇ ನಿಯಮವನ್ನು ಪಾಲಿಸದೆ ಅವರಿಗೆ ಎಣ್ಣೆ ಹೊಡೆಸಿ ಮೃತ್ಯು ಕೊಪಕ್ಕೆ ತಳ್ಳಲಾಗುತ್ತದೆ.ಕಾನೂನು ಅನುಷ್ಠಾನವಾದದ್ದು? ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಅಧಿಕಾರ ಪಡೆದಾಗ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ಬಿ.ಬಸವಲಿಂಗಪ್ಪನವರು ಪೌರಾಡಳಿತ ಸಚಿವರಾಗಿದ್ದರು.

ಆಗ ತಲೆಯ ಮೇಲೆ ಮಲ ಹೊರುವ ಅನಿಷ್ಠ ಪದ್ಧತಿ ರದ್ದು ಮಾಡಲು ಶತಾಯುಗತಾಯ ರಾಜ್ಯ ಸರಕಾರವನ್ನು ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಆದರೆ, ಅದು ಜಾರಿಗೆ ಬಂದದ್ದು 1993ರಲ್ಲಿ ಪಿ.ವಿ. ನರಸಿಂಹರಾವ್‌ರವರು ಪ್ರಧಾನಿಯಾದಾಗ. ಆದರೆ,ಆ ಕಾನೂನು ಇಂದು ಇಡೀ ದೇಶದಾದ್ಯಂತ ಎಷ್ಟರ ಮಟ್ಟಿಗೆ ಅನುಷ್ಠಾನ ಆಗಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಶಿಕ್ಷೆ ಏನು? ದಿ  ಆಫ್ ಎಂಪ್ಲಾಯಿಮೆಂಟ್ ಆಫ್ ಮ್ಯಾನ್ಯುಯಲ್ ಸ್ಕೆವೇಂಜರ್‌ಸ್ ಅಂಡ್ ದೇರ್ ರಿಹಿಬಿಲಿಟೇಷನ್ ನಿಯಮಗಳು 2013ರ ಅಡಿಯಲ್ಲಿ ಪ್ರಕರಣ ದಾಖಲಾದರೆ, ತಪ್ಪಿತಸ್ಥರಿಗೆ ಜಾಮೀನು ರಹಿತ 6 ತಿಂಗಳ ಜೈಲು ಹಾಗೂ 2 ಲಕ್ಷ ರು. ದಂಡ ವಿಧಿಸಲಾಗುತ್ತದೆ. ಆದರೆ, ಪೊಲೀಸರು ಕಾಯಿದೆ ಅನ್ವಯ ಪ್ರಕರಣಗಳನ್ನು ದಾಖಲಿಸುವ ಬದಲಿಗೆ ನಿರ್ಲಕ್ಷ್ಯವೆಂದು ಪ್ರಕರಣ ದಾಖಲಿಸುತ್ತಿರುವುದರಿಂದ ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ತಪ್ಪುತ್ತದೆ.

ಸರಕಾರ ಮಾಡಬೇಕಾದದ್ದೇನು? ಮಲ ಎತ್ತಲು ಆಧುನಿಕ ವೈಜ್ಞಾನಿಕ ನಿಯಮ ಕಂಡುಕೊಳ್ಳಬೇಕು.ಸ್ವಚ್ಛತೆ ಕಾಪಾಡುವಲ್ಲಿ ಯಂತ್ರೋಪಕರಣಗಳ  ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಕಾನೂನನ್ನು ಬಿಗಿಗೊಳಿಸಬೇಕು. ಮಲ ಹೊರುವವರನ್ನು ನೇಮಕ ಮಾಡಿಕೊಳ್ಳುವ ಮಾಲಿಕರಿಗೆ ಜೈಲು ಶಿಕ್ಷೆ ವಿಧಿಸಬೇಕು. ಮಲ ಹೊರುವ ಕಾರ್ಮಿಕ ಸಮುದಾಯಕ್ಕೆ ಸರಕಾರದಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಏರ್ಪಾಡಾಗಬೇಕು. ಇವುಗಳ ಜತೆಗೆ ಜಾಡಮಾಲಿಗಳ ಸಂಖ್ಯೆ ಪಟ್ಟಿಮಾಡಿ ಪುನರ್ವಸತಿ ಕಲ್ಪಿಸಿಕೊಡುವುದಕ್ಕೆ ಸರಕಾರಗಳು ಮುಂದಾಗಬೇಕಿದೆ. ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ವ್ಯವಸ್ಥೆಯೂ ಸರಕಾರ ಮಾಡಬೇಕಿದೆ. ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಬೇಕು.  ಗುಂಡಿ ಸ್ವಚ್ಛತೆಗೆ ಬೇಕಿರುವ ಯಂತ್ರಗಳು ಜನರು ದೂರು ಕೊಟ್ಟ ತಕ್ಷಣ ಕಳುಹಿಸಿಕೊಡುವಂತಾಗಬೇಕಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯಂತ್ರಗಳನ್ನು ಸರಕಾರ ಖರೀದಿಸಬೇಕಿದೆ.

ಮಲ ಹೊರುವ ಕಾರ್ಮಿಕರೆ ಇಲ್ಲ ಎಂದು ಸರಕಾರಕ್ಕೆ ಅವೈಜ್ಞಾನಿಕ ವರದಿ ಸಲ್ಲಿಸಿ ಸರಕಾರದ ದಿಕ್ಕು ತಪ್ಪಿಸಿರುವ ಮತ್ತು ಕಾರ್ಮಿಕರಿಗೆ ಪುನರ್ವಸತಿ ಸಿಗದಂತೆ ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸಂದರ್ಭಕ್ಕೆ ತಕ್ಕ ಹಾಗೆ ಜಾಣಕುರುಡು, ಜಾಣ ಕಿವುಡು ಹಾಗೂ ಮೊಸಳೆ ಕಣ್ಣೀರು ಸುರಿಸುವ ಸರಕಾರಗಳು ಮತ್ತು ರಾಜಕಾರಣಿಗಳು  ಕಾರ್ಮಿಕರ ನೆರವಿಗೂ ಹಾಗೂ ಅವರ ಉಳಿವಿಗೆ ಪಣ ತೊಡಬೇಕಾಗಿದೆ.ನಾವು ಮಾಡಬೇಕಾದದ್ದೇನು?ಮಲಗುಂಡಿ ತುಂಬಿದಾಗ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೆ ಸ್ವಚ್ಛತಾ ಯಂತ್ರ ಕಳುಹಿಸಲು ತುಂಬಾ ದಿನಗಳಾಗುತ್ತದೆ ಎಂದು ಭಾವಿಸಿ ಕಾರ್ಮಿಕರನ್ನು ಕರೆತಂದು ಗುಂಡಿಗಿಳಿಸಿದರೆ ತಕ್ಷಣವೇ ಸ್ವಚ್ಛ ಮಾಡುತ್ತಾರೆಂದು ಅವರನ್ನು ಮ್ಯಾನ್ ಹೋಲ್‌ಗೆ ಇಳಿಸುವುದನ್ನು ನಿಲ್ಲಿಸಬೇಕು. ಮಲಗುಂಡಿ ತುಂಬುವ ನಾಲ್ಕೈದು ದಿನ ಮುನ್ನವೇ ಸಂಬಂಧಿಸಿದ ಇಲಾಖೆಗೆ ದೂರು ಕೊಡಬೇಕು ಹಾಗೂ ಅವರು ಸರಿಯಾದ ಸಮಯಕ್ಕೆ ಯಂತ್ರವನ್ನು ಕಳುಹಿಸಿ ಕೊಡುತ್ತಾರೆ.

ಗುಂಡಿ ಸ್ವಚ್ಛಗೊಳಿಸುವುದರಿಂದ ಯಾವ ಜೀವ ಹಾನಿಯೂ ಆಗುವುದಿಲ್ಲ.   ಒಂದು ವೇಳೆ ಎಲ್ಲಿಯಾದರೂ ಯಾರಾದರೂ ಕಾನೂನು ಬಾಹಿರವಾಗಿ ಕಾರ್ಮಿಕರನ್ನು ಗುಂಡಿಗೆ ಇಳಿಸಿದ್ದು ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಪೋನ್ ಮಾಡಿ ವಿಷಯ ತಿಳಿಸಿ, ಪತ್ರಕರ್ತರಿಗೂ ಹೇಳಿ ಹಾಗೂ ನಿಮ್ಮ ಬಳಿ ಸ್ಮಾರ್ಟ್‌ಪೋನ್ ಇದ್ದರೆ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಇಂತಹ ಊರಿನಲ್ಲಿ, ಇಂತಹ ಕಾಲೋನಿಯಲ್ಲಿ ಮಲಗುಂಡಿಗೆ ಕಾರ್ಮಿಕನನ್ನು ಇಳಿಸಿದ್ದಾರೆಂದು ವಿಡಿಯೊ ವೈರಲ್ ಮಾಡಿದರೆ ಅಧಿಕಾರಿಗಳು, ಗುತ್ತಿಗೆದಾರರು ಹೆದರುತ್ತಾರೆ. ಮತ್ತೊಮ್ಮೆ  ಕೆಲಸಕ್ಕೆ ಕೈ ಹಾಕದೆ ಇರಬಹುದು. ಇತ್ತ ಕಾರ್ಮಿಕನೂ ಆ ಕೆಲಸ ಬಿಟ್ಟು ಬೇರೆ ಉದ್ಯೋಗ ನೋಡಿಕೊಳ್ಳಬಹುದು.

One thought on “ಮ್ಯಾನ್‌ ಹೊಲ್ ದುರಂತಕ್ಕೆ ಪರಿಹಾರವೇನು? 

  1. MAN HOLE DALLI ILIYUVAVARELLA VIDIO TEGESIKOLLUVADAKKE SUDDI MADIKOLLUVADAKKE!!
    2 alli iliyuvavarella suddi needalu pagara tegedukondu studioge hogaru adare sarayi seeseyondigina gelatana avaraddu!!

Leave a Reply

Your email address will not be published. Required fields are marked *

nine − 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Tuesday, 24.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ನವಮಿ, ಮಂಗಳವಾರ, ನಿತ್ಯನಕ್ಷತ್ರ-ಆಶ್ಲೇಷ, ಯೋಗ-ಗಂಡ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 24.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ನವಮಿ, ಮಂಗಳವಾರ, ನಿತ್ಯನಕ್ಷತ್ರ-ಆಶ್ಲೇಷ, ಯೋಗ-ಗಂಡ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top