About Us Advertise with us Be a Reporter E-Paper

Breaking Newsದೇಶಪ್ರಚಲಿತ

ಇಬ್ಬರ ಜಗಳ ಬಿಡಿಸಲು ಹೋಗಿ ಹೆಣವಾದ…!

ದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ಇಬ್ಬರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ವ್ಯಕ್ತಿಯನ್ನೇ ಇರಿದು ಹತ್ಯೆ ಮಾಡಿದ ಘಟನೆ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ನಡೆದಿದೆ.

ಲೊನಿಯಾದ ನಿವಾಸಿಯಾಗಿರುವ ವಾಸೀಂ ಮೃತ ದುರ್ದೈವಿ. ಹತ್ಯೆ ಮಾಡಿದವರು ಯಾರೆಂದು ಈವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಸಂಬಂಧಿಕ ಹಾಗೂ ಸಹೋದರನೊಂದಿಗೆ ವಾಸೀಂ ಆಟೋದಲ್ಲಿ ಹೋಗುತ್ತಿದ್ದ. ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಈ ವೇಳೆ ಸಹಾಯ ಕೇಳಿದ್ದಾರೆ. ಏನಾಯಿತು ಎಂದು ತಿಳಿಯಲು ವಾಸೀಂ ಆಟೋ ನಿಲ್ಲಿಸಿ ವಿಚಾರಿಸಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ವರುಣ್ ಎಂಬಾತ ಮೂತ್ರ ವಿಸರ್ಜನೆ ಮಾಡುತ್ತಿದ್ದ ಕಾರಣಕ್ಕೆ ವ್ಯಕ್ತಿಯೊಂದಿಗೆ ಜಗಳವಾಡುತ್ತಿರುವುದು ತಿಳಿದುಬಂದಿದೆ.

ಈ ವೇಳೆ ಇಬ್ಬರ ಜಗಳದಲ್ಲಿ ಮಧ್ಯೆ ಪ್ರವೇಶಿಸಿದ ವಾಸೀಂ, ಜಗಳ ಬಿಡಿಸಲು ಮುಂದಾಗಿದ್ದಾರೆ. ಇದರಿಂದ ಉದ್ರಿಕ್ತನಾದ ವ್ಯಕ್ತಿಯೊಬ್ಬ ವಾಸೀಂನನ್ನೇ ಇರಿದು ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. ಇರಿತಕ್ಕೊಳಗಾದ ವಾಸೀಂ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೋಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close