ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್ ನಾಯಕ

Posted In : ಕ್ರೀಡೆ

ದೆಹಲಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಏಪ್ರಿಲ್ 4 ರಿಂದ ಆರಂಭವಾಗಲಿರುವ 2018ರ ಕಾಮನ್‌ವೇಲ್ತ್ ಕ್ರೀಡಾ ಕೂಟಕ್ಕೆ ಭಾರತದ 18 ಆಟಗಾರರ ಹಾಕಿ ತಂಡ ಆಯ್ಕೆಯಾಗಿದ್ದು ತಂಡವನ್ನು ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ.

ಮಿಡ್ ಫಿಲ್ಡರ್ ಮನ್‌ಪ್ರೀತ್ ಸಿಂಗ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರೆ, ಚಿಂಗ್ಲೆನ್ಸನಾ ಸಿಂಗ್ ಕಂಗುಜಾಮ್ ಅವರು ಉಪ ನಾಯಕ ಸ್ಥಾನ ಅಲಂಕರಿಸಲಿದ್ದಾರೆ. 2017ರಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಭಾರತ ತಂಡದ ನಾಯಕರಾಗಿದ್ದು ಮತ್ತು ಭುವನೇಶ್ವರ್‌ನಲ್ಲಿ ನಡೆದ ಒಡಿಶಾ ಪುರುಷರ ವಿಶ್ವ ಹಾಕಿ ಲೀಗ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಟೂರ್ನಿಯಲ್ಲಿ ಭಾರತವು ಕಂಚಿನ ಪದಕಕ್ಕೆ  ಅನುಭವಿ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಅವರು ಕಠಿಣ ತರಬೇತಿ ಪಡೆದು ತಂಡಕ್ಕೆ ಹಿಂತಿರುಗಳಿದ್ದಾರೆ. 22 ವರ್ಷದ ಸೂರಜ್ ಕಾರ್ಕೆರಾ ಅವರು ತಂಡಕ್ಕೆ ಮರಳುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಅನುಭವಿ ಆಟಗಾರರಾದ ಎಸ್.ವಿ ಸುನೀಲ್, ಆಕಾಶ್‌ದೀಪ್ ಸಿಂಗ್, ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಯ, ಗುರ್ಜೀತ್ ಸಿಂಗ್ ಮತ್ತು ದಿಲ್ಪ್ರೀತ್ ಸಿಂಗ್ ತಂಡಕ್ಕೆ ಆಸರೆಯಾಗಲಿದ್ದಾರೆ.

‘ನಮ್ಮ ಪೂಲ್‌ನಲ್ಲಿ ಬಲಿಷ್ಠ ತಂಡಗಳಿಂದು ಮೊದಲಿಗೆ ಅವರನ್ನು ಸೋಲಿಸಿದರೆ ಮಾತ್ರ ಸೆಮಿ ಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಎಲ್ಲ ಆಟಗಾರರು ಕಠಿಣ ತರಬೇತಿಯೊಂದಿಗೆ ಅಂಗಳಕ್ಕೆ ಪ್ರವೇಶಿಸಿ ಎದುರಾಳಿಗಳನ್ನು ಸೋಲಿಸುವುದು ನಮ್ಮ ಗುರಿಯಾಗಿದೆ ನಾಯಕ ಮನ್‌ಪ್ರೀತ್ ಸಿಂಗ್ ತಿಳಿಸಿದರು.

Leave a Reply

Your email address will not be published. Required fields are marked *

four × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top