About Us Advertise with us Be a Reporter E-Paper

Breaking NewsUncategorizedದೇಶಪ್ರಚಲಿತ

ನಕ್ಸಲ್ ಅಟ್ಟಹಾಸ: ಸ್ಫೋಟದಲ್ಲಿ ಓರ್ವ ಯೋಧ, ಮೂವರು ನಾಗರಿಕರು ಸಾವು

ಛತ್ತೀಸ್ ಗಢ್: ಸುಧಾರಿತ ಸ್ಫೋಟಕ ಬಳಸಿ ನಕ್ಸಲೀಯರು ನಡೆಸಿದ ದಾಳಿಯಲ್ಲಿ ಮೂವರು ನಾಗರಿಕರು, ಒಬ್ಬರು ಸಿಐಎಸ್ ಎಫ್(ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ನ ಯೋಧ ಮತ್ತು ಮೂವರು ನಾಗರಿಕರು ಮೃತಪಟ್ಟಿರುವ ಘಟನೆ ದಾಂತೇವಾಡದಲ್ಲಿ ಗುರುವಾರ ನಡೆದಿದೆ.

ಪಿಟಿಐ ವರದಿ ಪ್ರಕಾರ, ದಾಂತೇವಾಡದಲ್ಲಿ ವಾಹನ ಗುರಿಯಾಗಿರಿಸಿಕೊಂಡು ನಕ್ಸಲೀಯರು ನಡೆಸಿದ ಸ್ಫೋಟದಲ್ಲಿ ಒಬ್ಬರು ಯೋಧರು, ಬಸ್ ಚಾಲಕ, ಕಂಡಕ್ಟರ್ ಹಾಗೂ ಕ್ಲೀನರ್ ಸಾವನ್ನಪ್ಪಿರುವುದಾಗಿ ವಿವರಿಸಿದೆ. ಘಟನೆಯಲ್ಲಿ ಇಬ್ಬರು ಸಿಐಎಸ್ಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಂತೇವಾಡ ಜಿಲ್ಲೆಯ ಗುಡ್ಡಗಾಡು ಪ್ರದೇಶವಾದ ಬಾಚೇಲಿ ಎಂಬಲ್ಲಿ ಸ್ಫೋಟ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಸಿಐಎಸ್ ಎಫ್ ಯೋಧರು ದಿನನಿತ್ಯದ ಅಡುಗೆ ಸಾಮಾನು ಖರೀದಿಸಿಕೊಂಡು ಬಸ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ನವೆಂಬರ್ 12 ಮತ್ತು 20ರಂದು ಒಟ್ಟು ಎರಡು ಹಂತದಲ್ಲಿ ಛತ್ತೀಸ್ ಗಢ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ವೇಳೆ ನಕ್ಸಲೀಯರ ಅಟ್ಟಹಾಸ ಮತ್ತೆ ಮುಂದುವರಿದಂತಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close