About Us Advertise with us Be a Reporter E-Paper

Breaking Newsದೇಶ

ಮರಾಠ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಯುವಕ ಆತ್ಮಹತ್ಯೆ

ಔರಂಗಾಬಾದ್: ಮರಾಠ ಸಮುದಾಯಕ್ಕೆ ಮೀಸಲಾತಿಗಾಗಿ ಒತ್ತಾಯಿಸಿ 26 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ.

ಕಿಶೋರ್‌ ಶಿವಾಜಿ ಹಾರ್ಡೆ ಮೃತ ದುರ್ದೈವಿ. ಗಲ್ಲೇ ಬೋರಗಾಂವ್‌ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಜೇಬಿನಲ್ಲಿ ಡೆಟ್‍ನೋಟ್ ಪತ್ತೆಯಾಗಿದ್ದು, ”ಸರಕಾರ ಮರಾಠ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡದಿರುವುದರಿಂದ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ಇದು ಆತ್ಮಹತ್ಯೆ ಅಲ್ಲ. ಇದು ಸರ್ಕಾರದಿಂದಾದ ನನ್ನ ‘ಹತ್ಯೆ’ ಎಂದು ಬರೆದಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸರಕಾರದ ವಿರುದ್ಧ ನಾಸಿಕ್ ಜಿಲ್ಲೆಯ ಯೆಯೋಲಾ ತೆಹ್ಸಿಲ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ನಿನ್ನೆಯಷ್ಟೇ ಅಹ್ಮದ್‍ನಗರ ಜಿಲ್ಲೆಯಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ 16 ವರ್ಷದ ಬಾಲಕಿಯೊಬ್ಬಳು ನೇಣಿಗೆ ಶರಣಾಗಿದ್ದಳು.

Tags

Related Articles

Leave a Reply

Your email address will not be published. Required fields are marked *

Language
Close