About Us Advertise with us Be a Reporter E-Paper

ಗೆಜೆಟಿಯರ್

ಮಾರುತಿ ಸರ್ವಿಸ್ ಈಗ ರಾತ್ರಿಯಲ್ಲಿ….!

* ಬಡೆಕ್ಕಿಲ ಪ್ರದೀಪ್

ಮಾರುತಿ ನಮ್ಮ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರ್ ಬ್ರ್ಯಾಂಡ್ ‘ಮಾರುತಿ ಸುಝುಕಿ’ ಭಾರತದ ಅರ್ಧಕ್ಕೂ ಹೆಚ್ಚು ಭಾಗ ಕಾರ್‌ಗಳನ್ನು ಮಾರಾಟ ಮಾಡುತ್ತಾರೆ. ಆದರೆ ಅದಷ್ಟೇ ಅಲ್ಲದೆ ಅವರ ವಿಸ್ತಾರವಾದ ಸರ್ವಿಸ್ ಭರವಸೆ ಅವರನ್ನು ಇನ್ನಷ್ಟು ಬಲಶಾಲಿಯಾಗಿಸಿದೆ.

ಬೇರೆ ಕಂಪೆನಿಗಳ ಸರ್ವಿಸ್‌ಗೆ ಹೋಲಿಸಿದರೆ ಮಾರುತಿ ಅತ್ಯುತ್ತಮ ಅಲ್ಲಿ. ಸೇಲ್‌ಸ್ಗೆ ಸರಿಯಾದ ಸರ್ವಿಸ್ ಇಲ್ಲದಿದ್ದರೆ ಕಂಪೆನಿಗೆ ನಷ್ಟವೇ. ಆದರೆ, ತನ್ನ ಸರ್ವಿಸನ್ನೀಗ ಒಂದು ಲೆವೆಲ್ ಮೇಲೆ ಕೊಂಡೊಯ್ಯುತ್ತಿರುವ ಮಾರುತಿ ದೇಶದ 6 ನಗರಗಳಲ್ಲಿ ರಾತ್ರಿ ಸರ್ವಿಸ್ ಕೂಡ ಆರಂಭಿಸಿದೆ. ಅವುಗಳಲ್ಲಿ 2 ನಮ್ಮ ರಾಜ್ಯದ ನಗರಗಳೇ ಅನ್ನೋದು ಗಮನಿಸಬೇಕಾಗಿರುವ ಸಂಗತಿ.

ಬೆಂಗಳೂರು ಮತ್ತು ಮಂಗಳೂರಿನಲ್ಲಿ ಇನ್ನು ಮುಂದೆ ರಾತ್ರಿಯೂ ನಿಮ್ಮ ಮಾರುತಿ ಕಾರನ್ನು ಸರ್ವಿಸ್‌ಗೆ ನೀಡಬಹುದು. ಮುಂದೆ ಬೇರೆ ಬೇರೆ ನಗರಗಳಲ್ಲೂ ಈ ಸರ್ವಿಸ್ ಆರಂಭಿಸಲು ಯೋಜಿಸಿರುವ ಗುರುಗ್ರಾಮ್, ನೋಯ್ಡಾ, ಸಾಹಿಬಾಬಾದ್, ಭುವನೇಶ್ವರಗಳಲ್ಲೂ ಇದೀಗ ಈ ಸರ್ವಿಸ್ ಆರಂಭಿಸಿದೆ.

ಇದು ಒಂದು ದಿನವೂ ಬ್ರೇಕ್ ಇಲ್ಲದೇ ಕೆಲಸ ಮಾಡುವವರಿಗೆ ಸಹಕಾರಿ ಎನ್ನಲಾಗಿದೆ. ಕ್ಯಾಬ್ ಡ್ರೆûವರ್‌ಗಳು, ನಿತ್ಯವೂ ಕೆಲಸಕ್ಕೆ ಹೋಗುವ ಮಂದಿ, ಹೀಗೆ ಬೇರೆ ಬೇರೆ ರೂಪದಲ್ಲಿ ಸಹಾಯಕಾರಿಯಾಗಿದೆ ಎನ್ನುತ್ತಾರೆ ಮಾರುತಿ ಮಂದಿ.
ಈ ಹಿಂದೆ ಮಾರುತಿಯ ಬೆಂಗಳೂರು ಸರ್ವಿಸ್ ಸೆಂಟರ್ ಇದನ್ನು ಈ ಹಿಂದೆಯೂ ಮಾಡಿತ್ತೆನ್ನಲಾಗಿದೆ. ಆದರೆ ಅದು ಕೆಲವೊಮ್ಮೆ ಮಾತ್ರ ನಡೆಯುತ್ತಿದ್ದುದಾದ್ದರಿಂದ ಮತ್ತು ಈ ಬಾರಿ ಅಧಿಕೃತವಾಗಿ ಹೇಳಿಕೆ ನೀಡಿರುವುದರಿಂದ ಇದರ ಮೇಲೆ ನೀಡಿರುವ ಗಮನ ಬೇರೆಯೇ ರೀತಿಯಲ್ಲಿ ಇದ್ದಂತಿದೆ.

ಮಾರುತಿಗೆ ಹೋಲಿಸಿದರೆ ಫೋರ್ಡ್, ಮಹೀಂದ್ರಾ, ಟಾಟಾ ಇತ್ಯಾದಿ ಕಂಪೆನಿಗಳ ಸರ್ವಿಸ್ ಹಳ್ಳಿ ಹಾಗೂ ಪುಟ್ಟ ನಗರಗಳ ಮಂದಿಯನ್ನು ಆಕರ್ಷಿಸಿಲ್ಲ. ಕಾರಣ ಮಾರುತಿ ತಕ್ಷಣದಲ್ಲೇ ಅಥವಾ ಹತ್ತಿರದಲ್ಲೇ ಲಭ್ಯವಿದ್ದರೆ ಇನ್ನುಳಿದ ಕಾರ್‌ಗಳ ಸರ್ವಿಸ್ ಸುಲಭದಲ್ಲಿ ಲಭ್ಯವಿರುವುದಿಲ್ಲ. ಆದರೂ ಶೀಘ್ರ ಸರ್ವಿಸ್ ನೀಡುವ ಮೂಲಕ ಅಂಥವರನ್ನೂ ಆಕರ್ಷಿಸುವ ಪ್ರಯತ್ನಗಳು ನಡೆದಿವೆ.

ಸೆಲ್‌ಫ್ ಡ್ರೆûವಿಂಗ್ ಕಾರ್: ಅಮೆಜಾನ್ ಬಂಡವಾಳ
ತಾನು ಕೈ ಆಡಿಸದ ಲೋಕವಿಲ್ಲ ಎಂದು ಮೆರೆಯುತ್ತಿರುವ ಅಮೆಜಾನ್‌ನ ಜೆಫ್ ಬೆಝೋಸ್ ಇದೀಗ ಮತ್ತೆ ಅದನ್ನೇ ಮಾಡಿ ತೋರಿಸಿದ್ದಾರೆ. ಸ್ವಯಂ ಚಾಲಿತ ಕಾರ್‌ಗಳ ತಂತ್ರಜ್ಞಾನ ವೃದ್ಧಿಯ ದಿಶೆಯಲ್ಲಿ ಆ್ಯಪಲ್ ಹಾಗೂ ಗೂಗಲ್‌ನ ಆಲ್ಫಾಬೆಟ್ ಜತೆಗೆ ಇದೀಗ ಅಮೆಜಾನ್ ಕೂಡ ಸೇರಿಕೊಂಡಂತಾಗಿದೆ.

ಟೆಸ್ಲಾ ಹಾಗೂ ಗೂಗಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲ ಮಂದಿ ಸೇರಿ ಆರಂಭ ಮಾಡಿರುವ ಅರೋರಾ ಇನೊವೇಶನ್‌ನಲ್ಲಿ ಅಮೆಜಾನ್, ಸಿಕೋಯಾ ಸೇರಿದಂತೆ ಕಲ ದೊಡ್ಡ ಕಂಪೆನಿಗಳು 530 ಮಿಲಿಯನ್ ಹೂಡಿದ್ದಾರೆ. ಇದರಲ್ಲಿ ಅಮೆಜಾನ್ ಪಾಲು ಎಷ್ಟು ಎನ್ನುವ ಬಗ್ಗೆ ಮಾಹಿತಿ ಹೊರ ಹಾಕಿಲ್ಲ.

ಊಬರ್, ಟೆಸ್ಲಾ, ಗೂಗಲ್‌ನಂತಹ ಟೆಕ್ ದೈತ್ಯರ ಜೊತೆಗೆ ಕೆಲಸ ಮಾಡಿದ ತಂತ್ರಜ್ಞರು ಸೇರಿ ಆರಂಭಿಸಿರುವ ಅರೋರಾ ಇನೊವೇಶನ್ ಪ್ರಕಾರ ಅಮೆಜಾನ್‌ನ ವಿಶಿಷ್ಟ ಪರಿಣತಿ, ಸಾಮರ್ಥ್ಯ ಹಾಗೂ ದೃಷ್ಟಿಕೋನಗಳನ್ನು ಬಳಸಿ ನಮ್ಮ ಕನಸನ್ನು ನನಸಾಗಿಸಬಹುದು, ಹಾಗೂ ಈ ಬಂಡವಾಳ ಅವರ ತಂಡವನ್ನು ಮತ್ತು ವ್ಯವಸ್ಥೆಯನ್ನು ಶಕ್ತಿಶಾಲಿಯಾಗುವಂತೆ ಮಾಡಿದೆ.
ಒಂದೆಡೆ ಸ್ವಯಂ ಚಾಲಿತ ಕಾರ್‌ಗಳನ್ನು ಇನ್ನೇನು ಕೆಲವೇ ನೋಡಬಹುದು ಅನ್ನುವ ಹಂತದಲ್ಲಿರುವಾಗ ಈ ಟೆಕ್ ದೈತ್ಯರು ಬಂಡವಾಳ ಹೂಡುವುದು ಇದರ ನಿಟ್ಟಿನಲ್ಲಿ ಸಂಶೋಧನೆ ಕುರಿತು ಹೆಚ್ಚಿನ ಪುಷ್ಟಿ ನೀಡಲು ಸಹಾಯಕವಾಗುತ್ತದೆ.

ಫೆಬ್ರವರಿಯಲ್ಲೇ ಡಿಸ್ಕೌಂಟ್‌ಗಳ ಮಳೆ!
ಭಾರತದಲ್ಲಿ ಇಂದು ಸೇಲ್ ಆಗುತ್ತಿರುವ ಕೆಲವು ಕಾರ್‌ಗಳ ಮೇಲೆ ಅವುಗಳ ಕಂಪೆನಿಗಳು ಡಿಸ್ಕೌಂಟ್‌ಗಳನ್ನು ಗೋಷಿಸಿದೆ. ಹ್ಯೂಂಡೈಯ ಗ್ರ್ಯಾಂಡ್ ಐ10ನಿಂದ ಹಿಡಿದು ಮಾರುತಿಯ ಎಸ್ ಕ್ರಾಸ್‌ವರೆಗೆ ಬೇರೆ ಬೇರೆ ಮಾಡೆಲ್‌ಗಳು ಇದೀಗ ಆಕರ್ಷಕ ರಿಯಾಯಿತಿಯೊಂದಿಗೆ ಲಭ್ಯವಿವೆ.

ಎಕ್‌ಸ್ಚೇಂಜ್ ಬೋನಸ್‌ನಿಂದ ಹಿಡಿದು ಸ್ಪೆಷಲ್ ಡಿಸ್ಕೌಂಟ್‌ಗಳನ್ನೂ ನೀವು ಹೊಸ ಕಾರ್ ಕೊಳ್ಳಬೇಕು ಅಂದರೆ ನಿಮ್ಮ ಹಳೆ ಕಾರ್‌ಗೂ ಒಳ್ಳೆ ಬೆಲೆ ಸಿಗಲಿದೆ. ನೋಡೋಣ ಯಾವ್ಯಾವ ಕಾರ್‌ಗೆ ಅಂದಾಜು ಎಷ್ಟು ಕಡಿಮೆ ಬೆಲೆ ಇದೆ. ನೀವು ಎಷ್ಟು ಬೇಗ ನಿಮ್ಮ ನಿರ್ಧಾರ ಕೈಗೊಳ್ಳಬೇಕು ಅನ್ನೋದು ನಿಮ್ಮ ಆಯ್ಕೆ ಯಾವುದು ಮತ್ತು ನಿಮ್ಮ ಬಜೆಟ್ ಏನು ಎನ್ನುವುದರ ಮೇಲೆ ಅವಲಂಬಿಸಿದೆ.

ಹ್ಯೂಂಡೈಯ ಗ್ರ್ಯಾಂಡ್ ಐ10ನ ಮೇಲೆ ಪೆಟ್ರೋಲ್ ಮೇಲೆ 50 ಸಾವಿರ, ಡೀಸಲ್ ಮೇಲೆ 60 ಸಾವಿರ ಕ್ಯಾಶ್ ಅಲ್ಲದೇ 20 ಸಾವಿರ ಎಕ್‌ಸ್ಚೇಂಜ್ ಬೋನಸ್ ಸೇರಿ ಒಟ್ಟು 80 ಸಾವಿರದವರೆಗೆ ಕಡಿಮೆ ಬೆಲೆಗೆ ಸಿಗಲಿದೆ.

ಮಹೀಂದ್ರಾ ಕೆಯುವಿ100 ಮೇಲೆ 73 ಸಾವಿರದವರೆಗೆ ಡಿಸ್ಕೌಂಟ್ ಲಭ್ಯ. ಇದರಲ್ಲಿ 40 ಸಾವಿರ ಕ್ಯಾಶ್ ಡಿಸ್ಕೌಂಟ್, 29 ಸಾವಿರ ಎಕ್‌ಸ್ಚೇಂಜ್ ಬೋನಸ್ ಮತ್ತು 4 ಸಾವಿರ ಕಾರ್ಪರೇಟ್ ಡಿಸ್ಕೌಂಟ್ ಒಳಗೊಂಡಿದೆ. ಮೊನ್ನೆ ಮೊನ್ನೆ ಲಾಂಚ್ ಆದ ಟಿಯುವಿ 300ಪ್ಲಸ್ 70 ಸಾವಿರ ರೂಪಾಯಿ ಡಿಸ್ಕೌಂಟ್‌ನೊಂದಿಗೆ ಸಿಗಲಿದೆ.ಇದರಲ್ಲಿ 40 ಸಾವಿರ ಕ್ಯಾಶ್ ಡಿಸ್ಕೌಂಟ್, ಸಾವಿರ ಎಕ್‌ಸ್ಚೇಂಜ್ ಬೋನಸ್ ಹಾಗೂ 5 ಸಾವಿರ ಕಾರ್ಪರೇಟ್ ಡಿಸ್ಕೌಂಟ್‌ನ ಹೆಸರಿನಲ್ಲಿ ಲಭ್ಯವಾಗಲಿದೆ.

ಹ್ಯೂಂಡೈಯ ಎಕ್ಸೆಂಟ್‌ನ ಮೇಲೆ 85 ಸಾವಿರದವರೆಗೆ ಡಿಸ್ಕೌಂಟ್ ಲಭ್ಯವಿದೆ. ಇದು ಕೇವಲ ಕೆಲ ಮಾಡೆಲ್‌ಗಳ ಮೇಲೆ ಮಾತ್ರ ಇದ್ದು ಎಕ್‌ಸ್ಚೇಂಜ್ ಬೋನಸ್ ಎಂದೇ 45 ಸಾವಿರ ನೀಡಲಾಗುತ್ತಿದೆ. ಕ್ಯಾಶ್ ಡಿಸ್ಕೌಂಟ್ 40 ಸಾವಿರ ನಿಗದಿ ಮಾಡಿದೆ ಹ್ಯೂಂಡೈ. ಇನ್ನೇನು ನಿಲ್ಲುತ್ತದೆ ಎನ್ನಲಾಗುತ್ತಿರುವ ಫೋಕ್‌ಸ್ವ್ಯಾಗನ್ ಆಮಿಯೋ ಮೇಲೆ 65 ಸಾವಿರದವರೆಗೆ ಡಿಸ್ಕೌಂಟ್ ಸಿಗುತ್ತಿದೆ. ವೆಂಟೋದ ಮೇಲೆ ಲಕ್ಷದವರೆಗೆ ರಿಯಾಯಿತಿ ಸಿಗಲಿದೆ. ಮಾರುತಿ ಸುಝುಕಿ ಸಿಯಾಝ್‌ನ ಮೇಲೆ 85 ಸಾವಿರ ರೂಪಾಯಿ ಡಿಸ್ಕೌಂಟ್ ಲಭ್ಯವಾಗುತ್ತಿದೆ. ಎಸ್ ಕ್ರಾಸ್ ಮೇಲೆ ಕೂಡ ಮಾರುತಿ 85 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, ಇದರಲ್ಲಿ 60 ಸಾವಿರ ಕ್ಯಾಶ್‌ಬ್ಯಾಕ್ ಹಾಗೂ ಇನ್ನುಳಿದದ್ದು ಎಕ್‌ಸ್ಚೇಂಜ್ ಡಿಸ್ಕೌಂಟ್ ರೂಪದಲ್ಲಿ ನೀಡಲಾಗುತ್ತಿದೆ.

ರೆನೋ ಲಾಜಿ ಮೇಲೆ 1.55 ಲಕ್ಷ ಡಿಸ್ಕೌಂಟ್, ಕ್ಯಾಪ್ಟರ್ ಮೇಲೆ 1.25 ಲಕ್ಷ ಡಿಸ್ಕೌಂಟ್ ಲಭ್ಯವಿದ್ದು, ಸಮೀಪದ ಡೀಲರ್‌ಶಿಪ್‌ನಲ್ಲಿ ಇದರ ಕುರಿತು ಹೆಚ್ಚಿನ ಮಾಹಿತಿ ನಿಮ್ಮ ಆಯ್ಕೆಯ ಕಾರ್ ಮೇಲೆ ಹೆಚ್ಚಿನ ಮಾಹಿತಿಯನ್ನು ಕೂಡ ಪಡೆಯಿರಿ. ನಿಮ್ಮ ಆಯ್ಕೆ ಯಾವುದು ಅನ್ನೋದನ್ನು ನಮಗೆ ತಿಳಿಸಿ.

Tags

Related Articles

Leave a Reply

Your email address will not be published. Required fields are marked *

Language
Close