About Us Advertise with us Be a Reporter E-Paper

ಗೆಜೆಟಿಯರ್

ಮಸ್ತಾನಮ್ಮ ಶತಾಯುಷಿ ಯುಟ್ಯೂಬ್ ತಾರೆ!

ಶಶಿಧರ ಹಾಲಾಡಿ

ನಿಜ, ಈ ಒಂದು ದಶಕದಲ್ಲಿ ಬದುಕನ್ನು ನಾವು ನೋಡುವ ರೀತಿ, ಗ್ರಹಿಸುವ ಪರಿ, ಸ್ಪಂದಿಸುವ ಪ್ರಕ್ರಿಯೆ ಸಂಪೂರ್ಣ ಬದಲಾಗಿದೆ. ಸಾಮಾಜಿಕ ಜಾಲತಾಣಗಳು, ಯುಟ್ಯೂಬ್‌ನಂತಹ ವಿಡಿಯೋ ಷೇರಿಂಗ್ ಸೈಟ್‌ಗಳು ಜಗತ್ತನ್ನು ಹಲವು ವಿಧದಲ್ಲಿ ಬದಲಿಸಿಬಿಟ್ಟಿವೆ. ಹೊಸ ವಿಚಾರಗಳನ್ನು ತಿಳಿದುೊಳ್ಳಲು, ಹೊಸ ಹೊಸ ಪ್ರಯೋಗಗಳನ್ನು ಜನರಿಗೆ ತಿಳಿಸಲು, ನಮ್ಮಲ್ಲಿರುವ ಪ್ರತಿಭೆಯನ್ನು ಪ್ರಕಟಿಸಲು, ಮಕ್ಕಳ ಅಭಿವ್ಯಕ್ತಿಗೆ ಉತ್ಕರ್ಷ ನೀಡಲು, ಭವಿಷ್ಯವನ್ನು ಬಿಂಬಿಸಲು, ಭೂತವನ್ನು ದಾಖಲಿಸಲು – ಹೊಸ ತಂತ್ರಜ್ಞಾನವು  ಮಾಡಿಕೊಟ್ಟರುವ ವಿಧಾನಗಳು ನೂರಾರು ಸಾವಿರಾರು. ಇದೇ ರೀತಿ ಕೆಟ್ಟದನ್ನು ಕಲಿಯಲು, ಸುಳ್ಳು ಸುದ್ದಿ ಹರಡಲು, ವಿದೇಶವೊಂದರ ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸಲು, ಮೋಸ ಮಾಡಲು, ಜನರಿಗೆ ಮಂಕುಬೂದಿ ಎರಚಲು ಸಹ ಅಂತರ್ಜಾಲದ ವಿವಿಧ ಸಾಧ್ಯತೆಗಳು ಯಶಸ್ವಿಯಾಗಿರುವುದನ್ನು ಕಾಣುತ್ತಿದ್ದೇವೆ. ಇಂತಹ ವಿದ್ಯಮಾನ ಹಿಂದೆಯೂ ಇತ್ತು, ಜ್ಞಾನವನ್ನು ಒಳ್ಳೆಯದಕ್ಕೂ ಬಳಸಬಹುದಿತ್ತು, ಕೆಟ್ಟದ್ದಕ್ಕೂ ಬಳಸಬಹುದಾಗಿತ್ತು, ಮುಖ್ಯ ವ್ಯತ್ಯಾಸವೆಂದರೆ ಇಂದಿನ ವೇಗ ಹಿಂದೆ ಇರಲಿಲ್ಲ; ಇಂದಿನ ಸವಲತ್ತು ಹಿಂದೆ ಇರಲಿಲ್ಲ; ಇಂದಿನ ಅಗ್ಗದ ಸ್ಮಾರ್ಟ್‌ಫೋನ್‌ಗಳು, ಅಗ್ಗದ  ಹಿಂದೆ ಇರಲಿಲ್ಲ. ಆದ್ದರಿಂದ, ಇಂದಿನ ಪ್ರಯೋಗ, ಪ್ರಯತ್ನಗಳ ಫಲಿತಾಂಶವು ತ್ವರಿತ, ತಕ್ಷಣ, ತೀವ್ರ ಮತ್ತು ಅಗಾಧ – ಅದು ಒಳ್ಳೆಯದಿರಲಿ, ಕೆಟ್ಟದಿರಲಿ. ಈ ಟ್ರೆಂಡ್ ಮುಂದುವರಿದಂತೆಲ್ಲಾ, ಮನುಷ್ಯನ ನಾಗರಿಕತೆ ಯಾವ ಮಟ್ಟವನ್ನು ತಲುಪೀತು? ಉತ್ತರ ಕೊಡಲು ತುಸು ಕಷ್ಟವೇ. ಈ ಕಾಲಘಟ್ಟದ ಸ್ಮಾರ್ಟ್‌ಫೋನ್ ಒದಗಿಸುತ್ತಿರುವ ಸಾಧ್ಯತೆಗಳು ಅಪರಿಮಿತ, ಅನೂಹ್ಯ. ಅದೇನೇ ಇರಲಿ, ಯುಟ್ಯೂಬ್‌ನಂತಹ ಮಾಧ್ಯಮವು ಯುವಕರಿಗೆ ಮಾತ್ರವೇ, ಅಥವಾ ವಯಸ್ಕರಿಗೆ ಸಹಾ ಈ ಲೋಕಕ್ಕೆ ಪ್ರವೇಶ ಉಂಟೆ?

106  ಮಸ್ತಾನಮ್ಮ

ಆಂಧ್ರಪ್ರದೇಶದ ತೆನಾಲಿಯ ಮಸ್ತಾನಮ್ಮ ಅಡುಗೆ ಮಾಡುವ ವೀಡಿಯೋಗಳನ್ನು ಅೆಷ್ಟು ಕೋಟಿ ಜನ ಯುಟ್ಯೂಬ್‌ನಲ್ಲಿ ನೋಡಿದ್ದಾರೋ, ಲೆಕ್ಕವೇ ಇಲ್ಲ! ಈ ಅಜ್ಜಿಯ ವಯಸ್ಸು 106 ವರ್ಷ. ಇವರ ಮೊಮ್ಮಗ ಲಕ್ಷ್ಮಣ ಮತ್ತು ಅವನ ಸಹೋದ್ಯೋಗಿ ನಗರಲ್ಲಿ ಗ್ರಾಫಿಕ್ ಡಿಸೈನಿಂಗ್‌ನಲ್ಲಿ ಪರಿಣಿತರು. ಜೊತೆಗೆ ಕಂಟ್ರಿ ಫುಡ್‌ಸ್ ಎಂಬ ಹೆಸರಿನಲ್ಲಿ ಅಡುಗೆಯ ಕುರಿತು ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಹಳ್ಳಿಯಲ್ಲಿದ್ದ ತನ್ನ ಅಜ್ಜಿಯನ್ನು ನೋಡಲು ಹೋದ ಲಕ್ಷ್ಮಣ, ಈ ವಯಸ್ಸಿನಲ್ಲೂ ಈಕೆ  ಮಾಡುವುದನ್ನು ಕಂಡು ಅಚ್ಚರಿ, ಬೆರಗು! ಮಸ್ತಾನಮ್ಮನ ವಯಸ್ಸಿನ ಕುರಿತು ಪ್ರಮಾಣ ಪತ್ರ ಲಭ್ಯವಿಲ್ಲ, ಆದರೂ, ಶತಾಯುಷಿಯಾಗಿದ್ದ ಈಕೆ ವೃದ್ಧೆಯ ಅಡುಗೆಯ ಶೈಲಿಯನ್ನು ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡ ಲಕ್ಷ್ಮಣ, ಇವರು ಹೊಲಗದ್ದೆಗಳ ಮಧ್ಯೆ ಕುಳಿತು ಅಡುಗೆ ಮಾಡುತ್ತಿದ್ದ ವಿಡಿಯೋವನ್ನು ಚಿತ್ರೀಕರಿಸಿದರು.

ನಂತರ ನಡೆದದ್ದು ಇತಿಹಾಸ. ಈ ಹಳ್ಳಿ ಹೆಂಗಸಿನ ಹಳ್ಳಿ ಕೈರುಚಿಯನ್ನು ಯುಟ್ಯೂಬ್ ಮೂಲಕ ಜಗತ್ತಿನಾದ್ಯಂತ ಅದೆಷ್ಟು ಜನ ನೋಡಿದರೋ ಲೆಕ್ಕಕ್ಕೇ ಸಿಗದು! ಇವತ್ತು ಇವರ ಫಾಲೋವರ್‌ಸ್  5 ಲಕ್ಷಕ್ಕೂ ಹೆಚ್ಚು. ಆಕೆ ಅನುಸರಿಸುತ್ತಿದ್ದ ಪಕ್ಕಾ ನಾಟಿ ಶೈಲಿ ಎಲ್ಲರಿಗೂ ಮುದ ಮುದ ನೀಡುತ್ತಿದೆ! ಹೊಲ ಗದ್ದೆಗಳ ಮಧ್ಯೆ ಕುಳಿತು, ಸರಳ ಪರಿಕರ, ಕಡಿಮೆ ಶ್ರಮದಿಂದ ಆಕೆ ತಯಾರಿಸುತ್ತಿದ್ದ ನಾನ್-ವೆಜ್ ಅಡುಗೆಗಳ ವಿಡಿಯೋಗಳು ಅದೆಷ್ಟೋ ಜನರನ್ನು ಅಚ್ಚರಿಗೆ ನೂಕಿದ್ದು ಸುಳ್ಳಲ್ಲ.

ಕಲ್ಲಂಗಡಿ ಚಿಕನ್!

ಈ ಒಂದು ವಿಧಾನದಲ್ಲಿ ಮಸ್ತಾನಮ್ಮ ಮಾಡಿದ ಅಡುಗೆಯನ್ನು ಜಗತ್ತಿನಾದ್ಯಂತ ಒಂದು ಕೋಟಿಗಿಂತಲೂ ಹೆಚ್ಚು ಜನ ನೋಡಿದ್ದಾರೆ! ನಿಜ, ಈ ಅಂಕಿಅಂಶವು ಯುಟ್ಯೂಬ್‌ನ ಶಕ್ತಿಯನ್ನು  ಬಿಂಬಿಸಿದರೆ, ಇಂತಹ ಪುರಾತನ ಅಡುಗೆ ಪದ್ಧತಿಯ ಸ್ವಾರಸ್ಯವನ್ನು ಇನ್ನೊಂದೆಡೆ ಬಿಂಬಿಸುತ್ತದೆ. ಮಾರ್ಚ್ 2017ರಲ್ಲಿ ಬಿಡುಗಡೆಯಾದ ಇದೊಂದು ವಿಡಿಯೋ ನಿಜಕ್ಕೂ ಚಮತ್ಕಾರ ಮಾಡಿದೆ. ಮಸ್ತಾನಮ್ಮ ಬಳಸುವುದು ಸೌದೆ ಒಲೆ. ಕಲ್ಲಂಗಡಿಯ ಒಳಭಾಗವನ್ನು ಪೂರ್ತಿಯಾಗಿ ಖಾಲಿ ಮಾಡಿ, ಅದನ್ನೇ ಒಂದು ಪಾತ್ರೆಯ ರೂಪದಲ್ಲಿ ಉಪಯೋಗಿಸುತ್ತಾಳೆ ಈ ಅಜ್ಜಿ! ಅದರೊಳಗೆ ಶುದ್ಧಪಡಿಸಿದ ಮಸಾಲೆ, ಚಿಕನ್ ಎಲ್ಲವನ್ನೂ ತುಂಬಿ, ಮೂರು ಕಲ್ಲಿನ ಸೌದೆ ಒಲೆಯ ಮೇಲೆ ಇಟ್ಟು ಬೇಯಿಸುತ್ತಾಳೆ. ಈ ವಿಶಿಷ್ಟ ಅಡುಗೆಯ ವೀಡಿಯೋ  ವಿಶಿಷ್ಟತೆಯಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡಿದೆ, ಮಸ್ತಾನಮ್ಮನನ್ನು ಯುಟ್ಯೂಬ್ ತಾರೆಯನ್ನಾಗಿಸಿದೆ. ಕಂಟ್ರಿ ಫುಡ್ ಮೂಲಕ ಡಿಸೆಂಬರ್ 2016ರಿಂದ ಆರಂಭಿಸಿ ಈಕೆಯ ಅಡುಗೆಯ ಸುಮಾರು 200 ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ.

ಜಗತ್ತಿನ ಅತ್ಯಂತ ಹಿರಿಯ ಯುಟ್ಯೂಬರ್

ಕಂಟ್ರಿ ಫುಡ್ ಚಾನೆಲ್ ಮೂಲಕ ಮಸ್ತಾನಮ್ಮ ಜಗತ್ತಿನ ಅತ್ಯಂತ ಹಿರಿಯ ಯುಟ್ಯೂಬರ್ (ಯುಟ್ಯೂಬ್‌ಗೆ ವಿಡಿಯೋ ಅಪ್‌ಲೋಡ್ ಮಾಡುವವರು) ಎಂದು ಹೆಸರು ಪಡೆದಿರುವ ವಿದ್ಯಮಾನ ಅಚ್ಚರಿ ತರುತ್ತದೆ! ಆಕೆಯ ಮೊಮ್ಮಗನ ಕಂಟ್ರಿ ಫುಡ್ ಅದಕ್ಕೂ ಮೊದಲು ಕೆಲವು  ರಿಸೆಪಿಗಳನ್ನು ಅಪ್‌ಲೋಡ್ ಮಾಡಿ ಚಾಲ್ತಿಯಲ್ಲಿದ್ದರೂ, ಮಸ್ತಾನಮ್ಮನ ಅಡುಗೆ ವಿಡಿಯೋ ಪ್ರಕಟಗೊಂಡ ನಂತರ ಜನಪ್ರಿಯತೆಯ ತುತ್ತತುದಿಗೇರಿತು. ಬಹುಷಃ ಇಂದಿನ ಯುವಜನರಿಗೆ ತಮ್ಮ ಮೂಲವನ್ನು, ಹಳ್ಳಿಯ ಬೇರುಗಳನ್ನು ನೆನಪಿಸಿದರೆ ಜಾಸ್ತಿ ಖುಷಿ ಇರಬಹುದು. ಮಸ್ತಾನಮ್ಮ ಹಳ್ಳಿಯ ಮೂಲೆಯಲ್ಲಿ ಕುಳಿತು, ಕಲ್ಲಂಗಡಿ ಹಣ್ಣಿನ ತಿರುಳನ್ನು ತೆಗೆದು, ಅದರ ಹೊರಭಾಗವನ್ನೇ ಪಾತ್ರೆಯನ್ನಾಗಿಸಿ ಒಲೆಯ ಮೇಲೆ ಇಟ್ಟು ರುಚಿಕರ ಅಡುಗೆ ಮಾಡುವ ವಿಧಾನವನ್ನು ಕಂಡು ಅವರಿಗೆಲ್ಲ ಬೆರಗು! ಕಲ್ಲಂಗಡಿ ಪಾತ್ರೆಯ ಅಡುಗೆಯ ವಿಡಿಯೋದ ಜೊತೆಯಲ್ಲೇ, ಸಾಂಪ್ರದಾಯಿಕ  ಆಕೆ ಮಾಡಿದ ಬೇರೆ ಬೇರೆ ಅಡುಗೆಯ ವಿಡಿಯೋಗಳು ಸಹ ಜನಪ್ರಿಯ. ತನ್ನ ಮೊಮ್ಮಗ ಮತ್ತು ಅವರ ಗೆಳೆಯರ ಸಹಾಯದಿಂದ, ಈಗಲೂ ಈ ಮಸ್ತಾನಮ್ಮ  ಅಡುಗೆಯ ವಿಡಿಯೋಗಳನ್ನು ಪ್ರತಿ ವಾರ ಬಿಡುಗಡೆ ಮಾಡುತ್ತಲೇ ಇದ್ದಾಳೆ, ಆ ಮೂಲಕ ಜಗತ್ತಿನ ಅತಿ ಹಿರಿಯ ಯುಟ್ಯೂಬ್ ತಾರೆಯಾಗಿ ಹೊರಹೊಮ್ಮಿದ್ದಾಳೆ.

Tags

Related Articles

Leave a Reply

Your email address will not be published. Required fields are marked *

Language
Close