About Us Advertise with us Be a Reporter E-Paper

Breaking Newsಸಿನಿಮಾಸ್

‘ಗಾಂಧಿನಗರದ ಸಿದ್ಧಸೂತ್ರಗಳನ್ನ “ಮಟಾಶ್” ಮಾಡಿದ್ದೇವೆ’: ಅರವಿಂದ್

*ಸಚಿನ್ ಕೃಷ್ಣ

ಜನಸಾಮಾನ್ಯರು ಐನೂರು ಸಾವಿರ ರುಪಾಯಿ ನಿಷೇಧವಾದ ಗಳಿಗೆಯನ್ನು ಎಂದಿಗೂ ಮರೆಯಲಿಕ್ಕಿಲ್ಲ. ಅದೊಂದು ಸಾಹಸಾನುಭವ. ಅದನ್ನು ಮನರಂಜನಾತ್ಮಕವಾಗಿ ದೃಶ್ಯರೂಪಕ್ಕೆ ತರಲು ಅರವಿಂದ್ ಮುಂದಾಗಿದ್ದಾರೆ. ಈಗಾಗಲೇ ‘ಜುಗಾರಿ’, ‘ಲಾಸ್ಟ್ ಬಸ್’ ಚಿತ್ರಗಳನ್ನು ಮಾಡಿ ಸೈ ಎನ್ನಿಸಿಕೊಂಡಿರುವ ಅವರು, ‘ಮಟಾಶ್’ ಮೂಲಕ ಕಮ್ ಆಗಿದ್ದಾರೆ. ಅವರೊಂದಿಗಿನ ಮಾತುಕತೆ ‘ವಿಶ್ವವಾಣಿ ಸಿನಿಮಾಸ್’ನಲ್ಲಿ….

1. ‘ಮಟಾಶ್ ಉಳಿದೆಲ್ಲ ಚಿತ್ರಗಳಿಗಿಂತ ಹೇಗೆ ಭಿನ್ನ?
ಜನಸಾಮಾನ್ಯರು ತಮ್ಮ ಬದುಕಿನಲ್ಲಿ ತೀರ ಮರೆಯದ ಸಂಗತಿಗಳಲ್ಲಿ ಡಿಮಾನಿಟೈಸೇಶನ್ ಕೂಡ ಒಂದು. ಐನೂರು, ಸಾವಿರ ರುಪಾಯಿಗಳ ನಿಷೇಧದ ಸಂದರ್ಭದಲ್ಲಿ ಆದಂತಹ ಘಟನೆಗಳು, ಎದುರಾದ ಸಮಸ್ಯೆಗಳನ್ನು ಕಾಮಿಕಲ್ ಆಗಿ ತೋರಿಸುವ ಪ್ರಯತ್ನವನ್ನು ‘ಮಟಾಶ್’ನಲ್ಲಿ ಮಾಡಿದ್ದೇವೆ. ಜನರನ್ನು ಕೆಲ ಗಂಟೆಗಳು ಹಿಡಿದಿಟ್ಟುಕೊಳ್ಳುವಂತಹ ಎಲ್ಲ ಎಲಿಮೆಂಟ್‌ಗಳು ‘ಮಟಾಶ್’ನಲ್ಲಿದೆ. ಯಾವುದೇ ಸಿದ್ಧಸೂತ್ರಗಳನ್ನಿಟ್ಟುಕೊಳ್ಳದೇ ಸಾಮಾನ್ಯ ಕ್ಲೀಷೆಗಳನ್ನೆಲ್ಲ ಮುರಿದು, ಫ್ರೆಶ್ ಆಗಿ ಸಿನಿಮಾ ‘ಮಟಾಶ್’. ಇತ್ತೀಚಿಗೆ ಬರುವಂತಹ ಸಿನಿಮಾಗಳೆಲ್ಲ ಅದರದೇ ಆದ ಕಥೆಗಳನ್ನು ಹೊಂದಿರುತ್ತದೆ. ಆದರೆ ಒಂದೇ ತರನಾದ ಕಥೆಗಳನ್ನು ಹೇಗೆ ಹೇಳ್ತೀವಿ, ಯಾವ ರೀತಿ ಪ್ರೆಸೆಂಟ್ ಮಾಡುತ್ತೇವೆ ಅನ್ನೋದು ಪ್ರಮುಖವಾಗಿರುತ್ತದೆ. ಆ ನಿಟ್ಟಿನಲ್ಲಿ ‘ಮಟಾಶ್’ ಭಿನ್ನ.

2. ‘ಮಟಾಶ್’ ಟೈಟಲ್ ಜನರನ್ನು ಥಿಯೇಟರ್‌ಗೆ ಸೆಳೆಯುವ ತಂತ್ರವೇ?
ಸಾಮಾನ್ಯವಾಗಿ ‘ಮಟಾಶ್’ ಅನ್ನೋದು ಯುವ ಜನಾಂಗ ಬಳಕೆ ಮಾಡುವ ಸ್ಲಾಂಗ್. ಟೆಲಿವಿಷನ್, ನ್ಯೂಸ್‌ಗಳಲ್ಲಿಯೂ ಇದನ್ನು ಬಳಕೆ ಮಾಡುತ್ತಲೇ ಇರುತ್ತಾರೆ. ಅದೇ ಉದ್ದೇಶ ನಮ್ಮ ಅನುಗುಣವಾಗಿ ಜನಸಾಮಾನ್ಯರಿಗೆ ರಿಲೇಟ್ ಆಗುತ್ತದೆಯೆಂದು ‘ಮಟಾಶ್’ ಎಂದು ಟೈಟಲ್ ನೀಡಲಾಗಿದೆ. ಇದು ಜನರನ್ನು ಥಿಯೇಟರ್‌ಗೆ ಸೆಳೆಯುವ ತಂತ್ರ ಕೂಡ.

3. ‘ಮಟಾಶ್’ಗೆ ಸಂಗೀತ ಸಂಯೋಜನೆಯನ್ನು ನೀವೆ ಮಾಡಿದ್ದೀರಿ ಆ ಕುರಿತು…
ಹೌದು , ಉತ್ತರ ಕರ್ನಾಟಕದ ಶೈಲಿಯ ಹಾಡೊಂದಕ್ಕೆ ಪುನೀತ್ ರಾಜ್ ಕುಮಾರ್ ದನಿಯಾಗಿದ್ದಾರೆ. ವಿಜಯ್ ಪ್ರಕಾಶ್ ರೊಮ್ಯಾಂಟಿಕ್ ಕಾಮಿಡಿ ಹಾಡೊಂದನ್ನು ಹಾಡಿದ್ದಾರೆ. ಸಂಚಿತ್ ಹೆಗಡೆ ‘ಆಕಾಶಕ್ಕೆ ಏಣಿ ಹಾಕುವ’ ಅನ್ನೋ ಯುವಕರನ್ನು ಸೆಳೆಯುವ ಹಾಡೊಂದನ್ನು ಹಾಡಿದ್ದಾರೆ. ಜತೆಗೆ ಸಂಬಂಧಿಸಿದಂತೆ ಹಾಡೊಂದನ್ನು ಅಳವಡಿಸಲಾಗಿದೆ. ಒಟ್ಟಾರೆ ಮಟಾಶ್ ಹಾಡುಗಳನ್ನು ಜನ ಇಷ್ಟಪಡುತ್ತಾರೆ ಅನ್ನೋ ವಿಶ್ವಾಸ ಇದೆ.

4. ಸಿನಿಮಾಗಳ ಸೋಲಿಗೆ ಕಾರಣವೇನಿರಬಹುದು…
ಪ್ರಮುಖವಾಗಿ ಜನಸಾಮಾನ್ಯರು ಅವರ ಆರ್ಥಿಕ ಸ್ಥಿತಿಗತಿ ಗಮನಿಸಿದರೆ ರಿಲೀಸ್ ಆಗುವ ಚಿತ್ರಗಳನ್ನೆಲ್ಲ ನೋಡುವುದಕ್ಕೂ ಆಗುವುದಿಲ್ಲ. ಸಾಮಾನ್ಯ ವರ್ಗದವರು ತಿಂಗಳಿಗೆ ಒಂದೋ ಎರಡು ನೋಡುತ್ತಾರಷ್ಟೇ. ಬೇಸಿಕಲಿ ಸಿನಿಮಾಗಳು ಉತ್ತಮ ಕಂಟೆಂಟ್ ಹೊಂದಿರಬೇಕು. ಜನರಿಗೆ ರಿಲೇಟ್ ಆಗುವಂತಹ ಚಿತ್ರಗಳಿದ್ದರೆ ಜನ ಹೆಚ್ಚಾಗಿ ನೋಡುತ್ತಾರೆ. ಸೋಲುವ ಚಿತ್ರಗಳು ಕಥೆ ಕಟ್ಟಿಕೊಡುವುದರಲ್ಲಿ, ಪ್ರೆಸೆಂಟ್ ಎಡವಿ ಸೋಲಬಹುದು ಅಷ್ಟೇ.

ಡಬ್ಬಿಂಗ್ ಕುರಿತಾಗಿ…: ಅನೇಕ ಶೈಕ್ಷಣಿಕ ಕಾರ್ಯಕ್ರಮಗಳು, ಡಿಸ್ಕವರಿ ಚಾನೆಲ್‌ಗಳಲ್ಲಿನ ಕಾರ್ಯಕ್ರಮಗಳೆಲ್ಲ ಹೆಚ್ಚಾಗಿ ಇಂಗ್ಲಿಷ್ ಭಾಷೆಯಲ್ಲಿ ಮೂಡಿ ಬರುತ್ತಿದ್ದು, ಇಂಗ್ಲಿಷ್ ಭಾಷೆ ಅಭಿವೃದ್ಧಿಯಾಗುತ್ತಿದೆ. ಕನ್ನಡ ಭಾಷೆ ಬಳಕೆಯಾಗದೇ ಹಿಂದುಳಿಯುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಡಬ್ಬಿಂಗ್ ಅನ್ನೋದು ಅವಶ್ಯಕ. ಇನ್ನು ಸಿನಿಮಾ ವಿಚಾರಗಳಿಗೆ ಬಂದ್ರೆ ನಮ್ಮ ಕನ್ನಡ ಸಿನಿಮಾಗಳನ್ನು ಬೇರೆ ಭಾಷೆಗೆ ಡಬ್ಬಿಂಗ್ ಕಳುಹಿಸುವ ಮನಸ್ಥಿತಿ ನಮಗಿದ್ದರೆ, ಬೇರೆ ಭಾಷೆಗಳಿಂದ ಬರುವ ಚಿತ್ರಗಳನ್ನು ಸ್ವೀಕರಿಸಬೇಕು. ಅದಾಗೋದಿಲ್ಲ ಅಂದ್ರೆ ಚಿತ್ರಗಳನ್ನು ಬೇರೆ ಭಾಷೆಗೆ ಡಬ್ ಮಾಡಬಾರದು ಅಷ್ಟೇ.

ನವ ಪ್ರತಿಭೆಗಳಿಗೆ ಅರವಿಂದ್ ಸಲಹೆ: ತಾಂತ್ರಿಕತೆಗೆ ಸಂಬಂಧಿಸಿದ ವಿಚಾರಗಳನ್ನು ಹೆಚ್ಚು ಕಲಿಯುವುದಕ್ಕಿಂತ ಕಥೆಯನ್ನು ಹುಡುಕುವ ಸೆನ್ಸಿಟಿವಿಟಿ, ಸೆನ್ಸಿಬಿಲಿಟಿ ಇರಬೇಕು. ಜನರ ನಿರೀಕ್ಷೆ ಏನು, ಅವರು ಎಂತಹ ಕಥೆಗಳಿಗೆ ಸ್ಪಂದಿಸುತ್ತಾರೆ ಅನ್ನೋ ಪಲ್‌ಸ್ ಅರ್ಥೈಸಿಕೊಂಡಿರಬೇಕು. ಜತೆಗೆ ಅವುಗಳನ್ನೆಲ್ಲ ಹೇಗೆ ಪ್ರೆಸೆಂಟ್ ಮಾಡಬೇಕು ಅನ್ನೋದನ್ನು ಕಲಿತುಕೊಂಡಿರಬೇಕು.

Tags

Related Articles

Leave a Reply

Your email address will not be published. Required fields are marked *

Language
Close