About Us Advertise with us Be a Reporter E-Paper

Breaking Newsದೇಶಪ್ರಚಲಿತ

ಮೆಡಿಕಲ್ ಸೀಟ್‌ ಪಡೆದ ನಕ್ಸಲ್ ಪೀಡಿತ ಪ್ರದೇಶದ ಮೊದಲ ಯುವತಿ ಮಾಯಾ ಕಶ್ಯಪ್..!

ರಾಯ್‌ಪುರ್‌: ಶಿಕ್ಷಕರೇ ಇಲ್ಲದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ ಬುಡಕಟ್ಟು ಜನಾಂಗದ ಯುವತಿಯೊಬ್ಬಳು ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆದಿದ್ದು, ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾಳೆ.

ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯ ಶಾಲೆಗಳಿಗೆ ಶಿಕ್ಷಕರು ಹೋಗಲು ಹೆದರುತ್ತಾರೆ. ಹೀಗಿರುವಾಗ, ಯಾವುದೇ ತರಬೇತಿ ಪಡೆಯದೆ, ಪದವಿ ಪೂರ್ವ ಶಿಕ್ಷಣ ಮುಗಿಸಿದ ದೋರ್ನಪಾಲ್ ಮೂಲದ ಮಾಯಾ ಕಶ್ಯಪ್ ಈ ಸಾಧನೆ ಮಾಡಿದ ಯುವತಿ. ಆಕೆ ಅಂಬಿಕಾಪುರ ಮೆಡಿಕಲ್ ಕಾಲೇಜಿನಲ್ಲಿ ಪಡೆದಿದ್ದಾಳೆ. ನಕ್ಸಲ್ ಪೀಡಿತ ಪ್ರದೇಶಗಳಿಂದ ಮೆಡಿಕಲ್ ಸ್ಥಾನ ಪಡೆದ ಮೊದಲ ಬುಡಕಟ್ಟು ಮಹಿಳೆ ಎಂದೆನಿಸಿಕೊಂಡಿದ್ದಾಳೆ.

‘ಮೆಡಿಕಲ್ ಮಾಡಬೇಕು ಎಂಬುದು ನನ್ನ ಬಾಲ್ಯದ ಕನಸಾಗಿತ್ತು. ನನ್ನ ಸತತ ಪ್ರಯತ್ನ ಹಾಗೂ ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಈ ಹಂತ ತಲುಪಿದಕ್ಕೆ ನನಗೆ ಬಹಳ ಸಂತಸ ತಂದಿದೆ. ನನ್ನ ಸಾಧನೆಗೆ ಎಷ್ಟೇ ಕಷ್ಟಗಳು ಎದುರಾದರೂ ನನ್ನ ಗುರಿ ಸಾಧನೆಯೇ ನನಗೆ ಮುಖ್ಯ ಎಂದು ಹೇಳಿದರು.

ದೋರ್ನಪಾಲ್‌ನಲ್ಲಿ ಕೇವಲ 3,000 ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಬಹುತೇಕರು ಹಾಸ್ಟೆಲ್‌ಗಳಲ್ಲಿ ಇದ್ದುಕೊಂಡು ಓದುತ್ತಿದ್ದಾರೆ. ನಾನು ಓದಿದ ಶಾಲೆಯಲ್ಲಿ ಶಿಕ್ಷಕರು ಬರುವುದು ವಿರಳ. ಮೆಡಿಕಲ್ ನಂತರ ನನ್ನ ಪ್ರದೇಶದ ಜನರಿಗೆ ಸೇವೆ ಮಾಡಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾಳೆ.

9 ವರ್ಷದಲ್ಲಿದ್ದಾಗ ಮಾಯಾ ತನ್ನ ತಂದೆಯನ್ನು ಕಳೆದುಕೊಂಡಿದ್ದು, ತಾಯಿಯೇ ಆಸರೆ. ಒಂದು ಹೊತ್ತು ಊಟಕ್ಕೆ ಕಷ್ಟ ಇದ್ದು, ಈ ನಡುವೆ ಇಂತಹ ಸಾಧನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ. ನೀಟ್ ಪರೀಕ್ಷೆಯಲ್ಲಿ ಛತ್ತೀಸ್‌ಗಢಕ್ಕೆ 12,315 ರ‍್ಯಾಂಕ್‌ ಗಳಿಸಿದ್ದಾಳೆ.

Tags

Related Articles

Leave a Reply

Your email address will not be published. Required fields are marked *

Language
Close