About Us Advertise with us Be a Reporter E-Paper

ಸಿನಿಮಾಸ್

‘ಮಾಯಾವಿ’ಗೆ ಹೆಚ್ಚಿದ ನಿರೀಕ್ಷೆ!

‘ಮೇಲೊಬ್ಬ ಮಾಯಾವಿ’ 42 ದಿನಗಳ ಚಿತ್ರೀಕರಣ ಮುಗಿಸಿ, ಪೋಸ್‌ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಕರಾವಳಿ ಮೂಲದ ರಂಗ ಪ್ರತಿಭೆ ಬಿ.ನವೀನ್ ಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸತತ ಒಂದೂವರೆ ವರ್ಷಗಳಿಂದ ತನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ಸಂಚಾರಿ ವಿಜಯ್, ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೋಡಿಯಾಗಿ ಅನನ್ಯ ಶೆಟ್ಟಿ ಅಭಿನಯಿಸಿದ್ದಾರೆ. ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿರುವ ಚಕ್ರವರ್ತಿ ಚಂದ್ರಚೂಡ್ ಮುಖ್ಯ ಖಳನಾಯಕನ ಪಾತ್ರ ಮಾಡಿದ್ದಾರೆ. ಇವರೊಂದಿಗೆ ಸಾಕಷ್ಟು ವರ್ಷ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ನಟರ ದಂಡೇ ಇದೆ.

ಕೃಷ್ಣಮೂರ್ತಿ ಕವತ್ತಾರ್, ಎಮ್.ಕೆ.ಮಠ, ಬೆನಕ ನಂಜಪ್ಪ, ಕುಮಾರ್ ನವೀನ್, ಪವಿತ್ರಾ ಜಯರಾಮ್, ಮಾಸ್ಟರ್ ಲಕ್ಷ್ಮೀ ಅರ್ಪಣ್, ಎನ್.ಟಿ.ಬೋಳಾರ್, ವಿಟ್ಲ ಮಂಗೇಶ್‌ಭಟ್ ಮತ್ತು ಮುಖೇಶ್ ಇವರೆಲ್ಲಾ ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಎರಡು ದಶಕಗಳ ಕಾಲ ಸಂಕಲನಕಾರರಾಗಿ ಗಿರೀಶ್ ‘ಮಾಯಾವಿ’ಯ ಸಂಕಲನದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಕಟೀಲ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪುತ್ತೂರು ಭರತ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪುತ್ತೂರು ಭರತ್ ಅವರಿಗೆ ಸಹ ನಿರ್ಮಾಪಕರಾಗಿ ತನ್ವಿ ಅಮಿನ್ ಕೊಲ್ಯ ಸಾಥ್ ನೀಡಿದ್ದಾರೆ. ಸದ್ಯದಲ್ಲೇ ಆಡಿಯೋ ರಿಲೀಸ್‌ಗೆ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ.

‘‘ಸಣ್ಣವನಿದ್ದಾಗಲೇ ಸಿನಿಮಾ ಅನ್ನೋದು ನನ್ನ ಫ್ಯಾಶನ್. ಎಲ್ಲಾ ಭಾಷೆಯ ಸಿನಿಮಾವನ್ನು ನೋಡು ನೋಡುತ್ತಲೇ ಸಿನಿಮಾ ನಿರ್ಮಿಸುವ ಮನಸಾಯಿತು. ಒಂದು ಉತ್ತಮ ಕಂಟೆಂಟ್‌ಗಾಗಿ ಕಾಯುತ್ತಿದ್ದೆ. ನಿರ್ದೇಶಕರು ಹೇಳಿದ ನನ್ನ ಊರಿನದ್ದೇ ಆಗಿದ್ದರೂ ನನಗದರ ಅರಿವಿರಲ್ಲಿಲ್ಲ. ಯಾವಾಗ ನಿರ್ದೇಶಕರು ಸಂಪೂರ್ಣ ಕಥೆ ಹೇಳಿದರೋ ಇಷ್ಟ ಆಯ್ತು. ನನ್ನದೇ ಊರಿನ ಕಥೆಯನ್ನು ನಾವೇ ಹೇಳೋಣ ಎಂದು ನಿರ್ಮಾಣ ಆರಂಭಿಸಿದೆ.

ಇಲ್ಲಿ ಪುತ್ತೂರು, ಸುಳ್ಯ ಮತ್ತು ಮಾಡಾವು ಜನತೆಯನ್ನು ನಾನು ನೆನಪಿಸಿಕೊಳ್ಳಲೇಬೇಕು. ನನ್ನಂತಹ ಹೊಸ ನಿರ್ಮಾಪಕನಿಗೆ ಅವರು ಕೊಟ್ಟ ಸಹಕಾರ ಮರೆಯಲಾಗದ್ದು. ನನ್ನಿಂದ ಒಂದಷ್ಟು ಹೊಸ ಪ್ರತಿಭೆಗಳು ಬೆಳಕಿಗೆ ಬರಲಿ ಅನ್ನೋದು ನನ್ನ ಆಶಯ. ‘ಮೇಲೊಬ್ಬ ಮಾಯಾವಿ’ ನಂತರ ಹಲವು ಚಿತ್ರಗಳನ್ನು ಒಂದಷ್ಟು ಕ್ವಾಲಿಟಿ ಕಂಟೆಟ್ ಇರುವ ಚಿತ್ರಗಳನ್ನು, ನಿಜಕ್ಕೂ ಪ್ರತಿಭೆಯಿದ್ದು ಅವಕಾಶ ವಂಚಿತರಾಗಿರುವವರ ಜೊತೆಗೂಡಿ ನಿರ್ಮಿಸಬೇಕೆಂದಿರುವೆ ಎಂದಿನಂತೆ ನಿಮ್ಮ ಸಹಕಾರವಿರಲಿ.’’
-ಪುತ್ತೂರು ಭರತ್, ನಿರ್ಮಾಪಕ

‘‘ಮೊದಲ ಚಿತ್ರದಲ್ಲೇ ಸಂಕೀರ್ಣವಾದ ಕಥೆಯನ್ನು ಆರಿಸಿಕೊಂಡಿರುವುದು ನಿಜಕ್ಕೂ ದೊಡ್ಡ ಸವಾಲು. ‘ಮೇಲೊಬ್ಬ ಮಾಯಾವಿ’ ಬಡತನ ಮತ್ತು ಹಸಿವಿನ ಬಗ್ಗೆ ಹೇಳಲು ಹೊರಟಿರುವ ಚಿತ್ರ. ಈ ಕಥೆ ನನ್ನ ಬಾಲ್ಯದಿಂದಲೇ ಕಾಡುತ್ತಿತ್ತು. ಒಂದು ಮಾಫಿಯಾ ಹೇಗೆ ಜನರ ಬದುಕನ್ನು ನರಕ ಸದೃಶ ಮಾಡಬಹುದು ಮತ್ತು ಆ ಮಾಫಿಯಾವನ್ನು ಅಧಿಕಾರಶಾಹಿಗಳು ಹೇಗೆ ಜೀವಂತವಾಗಿಟ್ಟಿದ್ದಾರೆ ಅನ್ನುವುದನ್ನು ಹತ್ತಿರದಿಂದ ನೋಡಿದ್ದೇನೆ.. ನೋಡುತ್ತಲಿದ್ದೇನೆ. ಇದೇ ಕಥೆಯನ್ನು ಬೇಸ್ ಆಗಿಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ.’’
-ಬಿ.ನವೀನ್‌ಕೃಷ್ಣ, ನಿರ್ದೇಶಕ

Tags

Related Articles

Leave a Reply

Your email address will not be published. Required fields are marked *

Language
Close