About Us Advertise with us Be a Reporter E-Paper

ಅಂಕಣಗಳು

ಧ್ಯಾನವೆಂದರೆ ನಮ್ಮನ್ನು ರಕ್ಷಿಸುವ ಪಂಜರವಿದ್ದಂತೆ!

ಅದೊಂದು ಶಹರ. ಅದರ ನಡುವಿನಲ್ಲೊಂದು ದೊಡ್ಡ ಮ್ಯೂಸಿಯಂ.  ಸಾವಿರಾರು ಜನರು ಅಲ್ಲಿಗೆ ಭೇಟಿ ನೀಡುತ್ತಿದ್ದರು. ಆ ಮ್ಯೂಸಿಯಂನ ಮಧ್ಯೆ ಒಂದು ಸುಂದರವಾದ ಮಾರ್ಬಲ್ ಮೂರ್ತಿಯನ್ನು ನಿಲ್ಲಿಸಿದ್ದರು. ನೆಲಕ್ಕೂ ಮಾರ್ಬಲ್ ಟೈಲ್‌ಸ್ನ್ನು ಹಾಕಿದ್ದರು. ಆದರೆ ಬಂದ ಜನರು ಟೈಲ್ಸನ್ನು ಮೆಟ್ಟುತ್ತ, ಆ ಮೂರ್ತಿಯ ಅಂದ ಚಂದ ಹಾಡಿ ಹೊಗಳಿ ಹೋಗುತ್ತಿದ್ದರು. ಒಂದು ರಾತ್ರಿ ಟೈಲ್‌ಸ್ ಆ ಮೂರ್ತಿಯೊಂದಿಗೆ ಮಾತಿಗಿಳಿಯಿತು. ನಾನು ನೀನು ಇಬ್ಬರೂ ಒಂದೇ ಕಲ್ಲಿನ ಕ್ವಾರಿಯಿಂದ ಬಂದಿದ್ದೇವೆ. ನಮ್ಮಿಬ್ಬರನ್ನೂ ಒಂದೇ ಲಾರಿಯಲ್ಲಿ ಇಲ್ಲಿಗೆ ಸಾಗಿಸಿದ್ದಾರೆ. ಇಬ್ಬರನ್ನೂ ಒಂದೇ  ಕೆತ್ತಿದ್ದಾನೆ. ಇಬ್ಬರಿಗೂ ಒಂದೇ ಚಾಣ  ಹಾಗೂ ಸಲಕರಣೆ ಬಳಸಿದ್ದಾರೆ. ಆದರೆ ನನ್ನನ್ನು ಮಾತ್ರ ಜನರು ಮೆಟ್ಟಿ ನಡೆಯುವ ಟೈಲ್‌ಸ್ ಮಾಡಿದರು, ನಿನ್ನ ಮಾತ್ರ ಸುಂದರವಾದ ಮೂರ್ತಿಯನ್ನಾಗಿ ಮಾಡಿದರು. ಇದು ಅನ್ಯಾಯವಲ್ಲವೆ? ಎಂದಿತು.

ಅದಕ್ಕೆ ಮೂರ್ತಿ ಹೇಳಿತು, ನಮ್ಮಿಬ್ಬರನ್ನೂ ಮೂರ್ತಿಯಾಗಿಸಲು ಪ್ರಯತ್ನಿಸಿದಾಗ ನೀನು ವಿರೋಧ ವ್ಯಕ್ತಪಡಿಸಿದೆ. ಶಿಲ್ಪಿಯು ನಿನ್ನ ಕೆತ್ತಲು ಚಾಣ ಹಾಕಿದಾಗ ನೀನು ಚೂರಾಗೊಡಗಿದೆ ಎಂದಿತು. ಅಯ್ಯೋ ಆ ಮೆಶಿನ್‌ಗಳನ್ನು ನನ್ನ ಮೈಗೆ ಹಿಡಿದಾಗ ಎಷ್ಟು ನೋವಾಯಿತು ಗೊತ್ತಾ?  ಆಗಲ್ಲಪ್ಪ ನನ್ನಿಂದ ಎಂದಿತು. ಹೌದು, ನನಗೂ ನೋವಾಯಿತು. ಈ ಜಗತ್ತಿನಲ್ಲಿ ಏನಾದರೂ ಆಗಬೇಕೆಂದರೆ ನೋವು ತಿನ್ನಲೇಬೇಕು. ಬೆಲೆ ತೆರಲೇಬೇಕು. ಅವೆರಡಿಲ್ಲದೇ ಏನೂ ದಕ್ಕುವುದಿಲ್ಲ. ನೀನು ಅದಕ್ಕೆ ತಯಾರಾಗಲಿಲ್ಲ. ಅದಕ್ಕೇ ಟೈಲ್‌ಸ್ ಆದೆ ಎಂದಿತು.

ನೋವು, ಅವಮಾನ, ಸೈರಣೆಯಿಲ್ಲದೇ ಏನೂ ಆಗಲಾರೆವು. ಒಂದು ಬೇಕೆಂದರೆ ಇನ್ನೊಂದನ್ನು ಬಿಡಲೇಬೇಕೆಂಬುದು ಜಗದ ನಿಯಮ. ಪ್ರಶಂಸೆ ಬೇಕೆ? ಪರಿಶ್ರಮ ಪಡಿ. ಹೊಗಳಿಕೆ ಬೇಕೆ? ಹೆದರಿಕೆ ಬಿಡಿ. ಯಶಸ್ಸು ಬೇಕೆ? ಯತ್ನಪಡಿ. ಅದು ಬಿಟ್ಟು ಕಂಫರ್ಟ್  ಉಳಿಯುತ್ತೇನೆ ಎಂದರೆ ಬದುಕೂ ನಿಮ್ಮ ಸುದ್ದಿಗೆ ಬರುವುದಿಲ್ಲ. ನಿಮ್ಮನ್ನು ನಿಮ್ಮಷ್ಟಕ್ಕೇ ಬಿಟ್ಟು ಬಿಡುತ್ತದೆ.

ಒಬ್ಬ ಜೀವನದಲ್ಲಿ ಬಹಳ ಕುಗ್ಗಿದ್ದ.ಆತನ ಜೀವನದಲ್ಲಿ ಏನೂ ಸರಿಯಿರಲಿಲ್ಲ. ಕೆಲಸ ಕಳೆದುಕೊಂಡಿದ್ದ, ಸಂಗಾತಿ ಬಿಟ್ಟು ಹೋಗಿದ್ದಳು. ಮನಸಿನ ತುಂಬ ಅಸಹನೆ, ಅಸಮಾಧಾನ ತುಂಬಿಕೊಂಡಿತ್ತು. ನನ್ನ ಬಳಿ ಬಂದ ಆತ ‘ನನಗೇ ಯಾಕೆ ಹೀಗಾಯ್ತು’ ಎಂದು ಪದೇಪದೆ ಕೇಳುತ್ತಿದ್ದ. ಅಸಲಿಗೆ ಅವನ ಜೀವನ ಹಾಗಾಗಲು ಅವನು ಯಾವುದೇ ಥರದಲ್ಲೂ ಜವಾಬ್ದಾರನಾಗಿರಲಿಲ್ಲ. ಹಾಗೆ ನೋಡಿದಲ್ಲಿ  ಜೀವನದ ಎಷ್ಟೋ ಆಗುಹೋಗುಗಳಿಗೆ ನಾವು ಜವಾಬ್ದಾರರಾಗುವುದಿಲ್ಲ ಅಥವಾ  ಅದಕ್ಕೆ ಇನ್ನೊಬ್ಬರೂ ಜವಾಬ್ದಾರರಾಗುವುದಿಲ್ಲ. ಉದಾ-ನಿಮ್ಮ ತಲೆಯಲ್ಲೊಂದು ಟ್ಯೂಮರ್ ಆಗಿದೆ ಎಂದಿಟ್ಟುಕೊಳ್ಳಿ. ಅದೇನು ನೀವು ನಿಮ್ಮ ಕೈಯಾರೆ ಮಾಡಿಕೊಂಡಿರುವುದಿಲ್ಲ.  ಅಥವಾ ಅದನ್ನು ಇನ್ಯಾರೋ ಕೂಡ ಮಾಡಿರುವುದಿಲ್ಲ. ಆದರೆ ಒಟ್ಟಿನಲ್ಲಿ ನಿಮಗೆ ಕಷ್ಟವಾಗುತ್ತಿರುತ್ತದೆ. ಆಗೇನು ಮಾಡಬೇಕು? ಇನ್ನೊಂದು ಕಥೆ ಕೇಳಿ. ಒಮ್ಮೆ ಒಬ್ಬ ಪುಟ್ಟ ಹುಡುಗ ಓಡಿ ಬಂದು ಅಮ್ಮನ ಬಳಿ ಕೇಳಿದ. ‘ಅಮ್ಮಾ ನೀನೇನು ಮಾಡುತ್ತಿರುವೆ ಎಂದು. ಆಗ ಅಮ್ಮ ಬಟ್ಟೆಗೆ  ಹಾಕುತ್ತಿದ್ದಳು, ನಾನು ಬಟ್ಟೆಗಳ ಮೇಲೆ ಸುಂದರವಾದ ಚಿತ್ರ ಮಾಡುತ್ತಿದ್ದೇನೆ ಎಂದಳು. ಸುಂದರ ಚಿತ್ರವೇ? ಎಲ್ಲಿ? ನನಗಿದು ಕೇವಲ ಗಜಿಬಿಜಿ ಎನಿಸುತ್ತಿದೆ. ಕೆಂಪು, ನೀಲಿ, ಹಳದಿ ದಾರಗಳು ಎಲ್ಲೆಂದರಲ್ಲಿ ಹೊಲಿದಿಟ್ಟಿದ್ದೀಯ. ಇದರಲ್ಲಿ ಚಿತ್ರವೆಲ್ಲಿದೆ ಕೇಳಿದ. ಆಕೆ ನಕ್ಕು, ಪುಟ್ಟಾ ನೀನು ಈ ಚಿತ್ರವನ್ನು ನಿನ್ನ ಕಡೆಯಿಂದ ನೋಡುತ್ತಿರುವೆ. ಹಾಗಾಗಿ ಅದು ಹಾಗೆ ಕಾಣುತ್ತಿದೆ. ಈಗ ನನ್ನ ಕಡೆಯಿಂದ ನೋಡು ಎಂದಳು. ಹುಡುಗ ನೋಡಿದ, ಅದರಲ್ಲಿ ಸುಂದರವಾದ ಹಕ್ಕಿ ಹಾಗೂ ಹೂವಿನ  ಅರಳಿತ್ತು. ದಾರದಲ್ಲಿ ಮಾಡಿದ್ದರೂ ಜೀವ ಬಂದಷ್ಟು ನೈಜವಾಗಿತ್ತು.

ಜೀವನದ ಘಟನೆಗಳೂ ಹೀಗೆಯೇ. ಬದುಕಿನ ಏರಿಳಿತಗಳನ್ನು ನಾನು ನಮ್ಮ ಕಡೆಯಿಂದ ನೋಡಿದಾಗ ಅದು ಸರಿಯಿಲ್ಲವೆಂದೇ ಎನಿಸುತ್ತದೆ. ಆದರೆ ಅದನ್ನೇ ಬದುಕಿನ ದೃಷ್ಟಿಯಿಂದ, ಭಗವಂತನ ದೃಷ್ಟಿಯಿಂದ ನೋಡಿದರೆ ಅದಕ್ಕೆ ಅದರದ್ದೇಆದ ಸುಂದರ ಪ್ಲಾನ್ ಇರುವುದು ತೋರುತ್ತದೆ. ಎಲ್ಲ ಆಗುಹೋಗುಗಳಿಗೂ  ಅದರದ್ದೇ ಆದ ಉದ್ದೇಶವಿರುವುದು ತಿಳಿಯುತ್ತದೆ. ಆದ್ದರಿಂದ ನಮಗಿಷ್ಟವಿಲ್ಲದ ಯಾವುದೇ ಘಟನೆಗಳನ್ನೂ ಹತಾಶರಾಗಿ ನೋಡಬೇಡಿ. ಬದುಕು ಮುಗಿದು ಹೋಯಿತು ಎಂದುಕೊಳ್ಳಬೇಡಿ.  ಬದುಕಿನ ಪ್ರಕ್ರಿಯೆಯಾಗಿರುತ್ತದೆ  ಸುಮ್ಮನೇ ನಂಬಿ. ನಂಬುತ್ತ, ಒಪ್ಪುತ್ತಾ ಹೋದಂತೆ ಮನಸ್ಸಿಗೆ ಹದ ಬರುತ್ತದೆ. ಬದುಕು ಅದರಷ್ಟಕ್ಕೆ ಸರಿಯಾದ ಸಮಯದಲ್ಲಿ ತೆರೆದುಕೊಳ್ಳುತ್ತದೆ. ಸುಂದರವಾಗಿ ಅರಳುತ್ತದೆ.

ಆ ಊರಿನಲ್ಲಿ ಚೆನ್ನಾಗಿ ಕೆಲಸ ಮಾಡುವ ಮೇಸ್ತ್ರಿ ಇದ್ದ. ಆತ ತನ್ನ ಕೆಲಸದಲ್ಲಿ ನಿಪುಣ. ಒಂದು ಕಂಪನಿಗಾಗಿ ದುಡಿಯುತ್ತಿದ್ದ. ಎಷ್ಟು ವರ್ಷ ಕಳೆದರೂ ಜನ ಆತನೇ ತಮ್ಮ ಮನೆಗೆ ಅವನೇ ಮೇಸ್ತ್ರಿ ಆಗಲಿ ಎಂದು ಬಯಸುತ್ತಿದ್ದರು. ಆತ ಇದೇ ವೃತ್ತಿಯಲ್ಲಿ ಮುಂದುವರಿದ. ಕೆಲ ವರ್ಷಗಳ  ಆತನಿಗೆ ಅಷ್ಟು ಚುರುಕಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಸುಸ್ತು, ವಯಸ್ಸಾಗಿದೆ, ಇದು ನಿವೃತ್ತಿ ಹೊಂದುವ ಸಮಯ ಎಂದೆನಿಸಿತು. ಮನಸ್ಸು ಮಾಡಿ ಮಾಲೀಕನ ಬಳಿ ಬಂದು ‘ನನಗೆ ಇನ್ನು ಕೆಲಸ ಮಾಡಲಾಗುವುದಿಲ್ಲ. ನಿವೃತ್ತಿ ಹೊಂದಬೇಕೆಂದು ನಿರ್ಧರಿಸಿದ್ದೇನೆ’ ಎಂದ. ಅದಕ್ಕೆ ಮಾಲೀಕ ಹೇಳಿದ ‘ ಆಯ್ತು. ಆದರೆ ಕಡೆಯದಾಗಿ ಒಂದು ಮನೆಯ ಕೆಲಸ ಮಾಡಿಕೊಡು. ಅದು ನನಗೆ ಬಹಳ ಬೇಕಾದವರದ್ದು’ ಎಂದ. ಮೇಸ್ತ್ರಿ ಒಪ್ಪಿ ‘ಇದೇ ನನ್ನ ಕಡೇ ಕೆಲಸ’ ಎಂದು  ಆತನ ಬಳಿ ಸಾಕಷ್ಟು ದುಡ್ಡಿತ್ತು. ಆರಾಮಾಗಿ ಮನೆಯವರ ಜತೆ ಜೀವನ ಸಾಗಿಸಬಹುದಿತ್ತು. ಹಾಗಾಗಿ ಕೆಲಸದ ಕಡೆ ಯಾವ ಆಸಕ್ತಿಯೂ ಇರಲಿಲ್ಲ. ಇನ್ನೇನು ಮುಗಿಯಿತು ಎಂದೋ ಇದೇ ಕಡೇ ಕೆಲಸ ಎಂದೋ ನಿರಾಸಕ್ತಿ ತೋರಿದ. ಅಂತೆಯೇ ಮನೆ ಆರಂಭವಾಯ್ತು. ನಿರಾಸಕ್ತಿಯಿಂದ ಬೇಕಾಬಿಟ್ಟಿ ಕೆಲಸ ಮಾಡಿ ಮುಗಿಸಿದ. ಮಾಲೀಕನನ್ನು ಕರೆದು ಮನೆಯ ಬೀಗ ನೀಡಿ, ನನ್ನ ಕೆಲಸ ಆಯ್ತು ಎಂದ. ಮಾಲೀಕ ಮನೆ ನೋಡಿದ. ಆತ ಈವರೆಗೆ ಮಾಡಿಕೊಟ್ಟ ಎಲ್ಲ ಮನೆಗಿಂತ  ಕೆಟ್ಟದಾಗಿತ್ತು. ಏನೂ ಮಾತನಾಡದೇ ಮೇಸ್ತ್ರಿ ಬಳಿ ಬಂದು ಆ ಬೀಗವನ್ನು ಹಿಂದಿರುಗಿಸಿ ‘ಈ ಮನೆ ನಿನ್ನದು. ಇಷ್ಟು ವರ್ಷ ನಮ್ಮ ಕಂಪನಿಯಲ್ಲಿ ನಿಷ್ಠೆಯಿಂದ ದುಡಿದದ್ದಕ್ಕೆ ನಾವು ನಿನಗೆ ನೀಡಿದ ಉಡುಗೊರೆ’ ಎಂದರು. ಆತ ಮನಸ್ಸಿನಲ್ಲೇ ಅಂದುಕೊಂಡ‘ ಇದು ನನ್ನ ಮನೆ ಎಂದು ಗೊತ್ತಾಗಿದ್ದರೆ ಇನ್ನೂ ಚೆನ್ನಾಗಿಯೇ ಮಾಡುತ್ತಿದ್ದೆನಲ್ಲ!’

ಜೀವನ ಕೂಡ ನಮ್ಮದೇ ಮನೆ ಇದ್ದಂತೆ. ಅದನ್ನು ಹೇಗೆ ನಿರ್ಮಿಸಬೇಕು, ಎಷ್ಟು ಅಚ್ಚುಕಟ್ಟಾಗಿ ನಿರ್ಮಿಸಬೇಕು ಎಂಬುದು ನಿಮಗೇ ಬಿಟ್ಟಿದ್ದು. ಕೆಲಸದಲ್ಲಿ  ಬೇಡ. ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂದು ಕೆಲಸ ಮುಗಿದ ನಂತರ ಅಂದುಕೊಳ್ಳುವುದಕ್ಕಿಂತ, ಆದಷ್ಟು ಚೆನ್ನಾಗಿ ಕೆಲಸ ಮಾಡುವುದರಲ್ಲೇ ತೃಪ್ತಿ ಇದೆ.

 ಶ್ರೀಮಂತನೊಬ್ಬ ಟ್ರಾಫಿಕ್ ಸಿಗ್ನಲ್‌ನಿಂದಾಗಿ ಗಾಡಿ ನಿಲ್ಲಿಸಿದ. ಪಕ್ಕ ನೋಡುವಾಗ ಇಬ್ಬರು ಮಕ್ಕಳು ಹರಿದ ಬಟ್ಟೆಯಲ್ಲಿ ಕುಳಿತಿದ್ದರು. ಕಾರಿನಿಂದ ಕೆಳಗಿಳಿದು ಮಕ್ಕಳ ಕೈಯಲ್ಲಿ 10ರು. ಇಟ್ಟು ಹೋದ. ಸ್ವಲ್ಪ ಸಮಯದ ನಂತರ ‘ ನಾನೇಕೆ 10ರು. ಕೊಟ್ಟೆ? ಅದರಿಂದ ಮಕ್ಕಳ ಹೊಟ್ಟೆ ತುಂಬಲು ಸಾಧ್ಯವಾ? ಕಾಫಿ  ಬರುವುದಿಲ್ಲ ಎಂದು ಮತ್ತೆ ಅದೇ ರಸ್ತೆಗೆ ಹೋಗಿ ನೋಡಿದ. ಆ ಮಕ್ಕಳು ಅಲ್ಲಿಯೇ ಕುಳಿತಿದ್ದರು. ಅವರನ್ನು ಕರೆದು ನನ್ನ ಜತೆ ಬನ್ನಿ ಊಟ ಕೊಡಿಸುತ್ತೇನೆ ಎಂದ. ಮಕ್ಕಳು ಒಂದೂ ಮಾತನಾಡದೇ ಅವನ ಹಿಂಬಾಲಿಸಿದರು. ಹೋಟೆಲ್‌ನಲ್ಲಿ ಮಕ್ಕಳ ಅವಸ್ಥೆ ನೋಡಿ ಸೆಕ್ಯುರಿಟಿಯಾತ ಅವರನ್ನು ಒಳ ಬರಲೂ ಬಿಡಲಿಲ್ಲ. ಆದರೂ ಶ್ರೀಮಂತನ ಮುಖ ನೋಡಿ ಒಳಗೆ ಬಿಟ್ಟ. ಮಕ್ಕಳಿಗಾಗಿ ಊಟ ತರಿಸಿಕೊಟ್ಟ. ವೇಟರ್ ಯಾವಾಗ ಬರುತ್ತಾನೋ ಎಂಬಂತೆ ಮಕ್ಕಳು ಪದೇ ಪದೆ  ನೋಡುತ್ತಾ ಕುಳಿತಿದ್ದರು. ಊಟ ಬಂದ ತಕ್ಷಣ ಹಿಂದೆಂದೂ ಇಷ್ಟೊಂದು ಆಹಾರ ನೋಡಿಯೇ ಇಲ್ಲ ಎಂಬಂತೆ ಗಬಗಬನೆ ತಿಂದರು. ಎಷ್ಟು ತಿನ್ನುತ್ತಾರೋ ಅಷ್ಟು ತಿನ್ನಿಸಿ, ಬಟ್ಟೆ ಕೊಳ್ಳಲು ಹಣ ನೀಡಿ ಹೊರಟು ಹೋದ. ಆ ದಿನ ಅವನಿಗೆ ನಿದ್ದೆಯೇ ಬರಲಿಲ್ಲ. ಆ ಮಕ್ಕಳು ಎಲ್ಲಿ ಹೋದರು? ಅವರಿಗೆ ಮನೆ ಇದೆಯಾ? ನಾಳೆಯ ಊಟಕ್ಕೆ ಏನು ಮಾಡುತ್ತಾರೆ? ಭೂಮಿ ಮೇಲೆ ಇವರಂಥ ಇನ್ನೆಷ್ಟು ಮಕ್ಕಳಿರಬಹುದು ಎಂಬೆಲ್ಲ ಆಲೋಚನೆಗಳು ಬಂದವು. ಮಗನ ರೂಮಿನ  ಇಷ್ಟು ಸಮಯವಾದರೂ ಆಫ್ ಆಗಿಲ್ಲ ಎಂದು ಅವನ ತಾಯಿ ಬಂದಳು. ತಾಯಿ ಬಳಿ ಎಲ್ಲವನ್ನೂ ಹೇಳಿದ. ‘ ದೇವರು ಇಷ್ಟು ಕ್ರೂರಿ ಯಾಕಮ್ಮ? ಪಾಪ ಆ ಮಕ್ಕಳಿಗೆ ನಾಳಿನ ಊಟದ ಗತಿಯೇನು?’ ಎಂದ. ಅದಕ್ಕೆ ತಾಯಿ ‘ ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಈ ದಿನ ನೀನು ಸಹಾಯ ಮಾಡಿದ ಹಾಗೆ ನಾಳೆ ಇನ್ಯಾರಾದರೂ ಮಾಡುತ್ತಾರೆ’ ಎಂದರು. ಸಹಾಯ ಮಾಡುವ ಮನಸ್ಸು ಎಲ್ಲರಿಗೂ ಬರುವುದಿಲ್ಲ. ದೇವರು ಎಲ್ಲ ಕಡೆ  ಸಮಯ, ಎಲ್ಲರಿಗೂ ಸಹಾಯ ಮಾಡಲಾಗುವುದಿಲ್ಲ ಎಂದು ಈ ರೀತಿ ಮನಸ್ಸಿನ ಜನರನ್ನು ಭೂಲೋಕಕ್ಕೆ ಕಳಿಸಿರುತ್ತಾನೆ. ಅದರಲ್ಲೂ ಯಾರಾದರೂ ಹಸಿವು ಎಂದಾಗ ಸುಮ್ಮನಿರಲು ಹೇಗೆ ಸಾಧ್ಯ? ನಿಮ್ಮ ಕೈಲಾದಷ್ಟು ಸಹಾಯ ಮಾಡಿ, ಮುಂದೊಂದು ದಿನ ನೀವು ಅವರ ಸ್ಥಿತಿಗೆ ತಲುಪಿದಾಗ ನಿಮ್ಮಂಥವರೇ ಯಾರಾದರೂ ನಿಮಗೂ ಸಹಾಯ ಮಾಡಬಹುದು.

ನಿಮಗಿಂದು ರಮಣ ಮಹರ್ಷಿ ಗುರುಗಳ ಆಶ್ರಮದಲ್ಲಾದ ಒಂದು ಪುಟ್ಟ ಘಟನೆ ಹೇಳುತ್ತೇನೆ. ಮಹರ್ಷಿಗಳದ್ದು ಸುಂದರ ಆಶ್ರಮ. ಪ್ರತಿನಿತ್ಯವೂ ಧ್ಯಾನ,  ಸಾಂಗವಾಗಿ ನಡೆಯುತ್ತಿದ್ದವು. ಅಲ್ಲಿಗೆ ಅನೇಕಾನೇಕ ಭಕ್ತರು ಬರುತ್ತಿದ್ದರು. ಗುರುಗಳ ದರ್ಶನ,ಧ್ಯಾನಗಳಿಂದ ಸಮಾಧಾನ ಪಡೆಯುತ್ತಿದ್ದರು.

ಹೀಗೊಮ್ಮೆ, ಆಶ್ರಮದಲ್ಲಿ ಅದಾಗೇ ಸೇರಿದ್ದ ಬಾಲಶಿಷ್ಯನೊಬ್ಬ ಮಹರ್ಷಿಗಳ ಬಳಿ ಬಂದು, ಗುರುಗಳೇ ಪ್ರತಿದಿನವೂ ನಡೆಯುವ ಧ್ಯಾನ, ಪೂಜೆಗಳನ್ನು ನಾವೇಕೆ ಮಾಡಬೇಕು, ಅದರಿಂದಾಗುವ ಪ್ರಯೋಜನಗಳೇನು, ಧ್ಯಾನವನ್ನೇಕೆ ಚಿಕ್ಕ ವಯಸ್ಸಿನಲ್ಲೇ ಮಾಡಬೇಕು ಅಥವಾ ದೊಡ್ಡವರಾದ ನಂತರ ಮಾಡಬೇಕು ಎಂಬ ನನ್ನ ಈ ಎಲ್ಲ ಗೊಂದಲ ಪರಿಹರಿಸಿ ಎಂದು ಭಿನ್ನಹಿಸಿದ. ಆಗ ನಸುನಕ್ಕ ಮಹರ್ಷಿಗಳು, ‘ಮಗೂ, ಖಂಡಿತ ನಿನ್ನೆಲ್ಲ  ನಾನು ಸರಿಯಾದ ಸಮಯದಲ್ಲಿ ಉತ್ತರಿಸುತ್ತೇನೆ, ನೀನು ಅರಾಮವಾಗಿರು’ ಎಂದು ಬೀಳ್ಕೊಡುತ್ತಾರೆ.

ಇದಾದ ಕೆಲ ದಿನಗಳಲ್ಲಿ ಆಶ್ರಮದ ಮರವೊಂದರಲ್ಲಿ ಅಳಿಲೊಂದು ನಾಲ್ಕೈದು ಮರಿಗಳಿಗೆ ಜನ್ಮ ನೀಡುತ್ತದೆ. ಜೋರು ಮಳೆ,ಗಾಳಿಯಿದ್ದ ಕಾರಣ ಮಹರ್ಷಿಗಳು ಆ ಅಳಿಲು ಮತ್ತದರ ಮರಿಗಳನ್ನು ಜೋಪಾನವಾಗಿ ಎತ್ತಿ ತಂದು ಧ್ಯಾನ ಮಂದಿರದಲ್ಲಿದ್ದ ಒಂದು ಪಂಜರದೊಳಗೆ ಕೂಡಿಡುತ್ತಾರೆ. ಇದಾಗಿ ಮೂರ್ನಾಲ್ಕು ದಿನಗಳಲ್ಲಿ ಬಾಹ್ಯ ಜಗತ್ತಿನ ಅರಿವೇ ಇಲ್ಲದೇ ತಾಯಿ ಅಳಿಲು ಪಂಜರದ ಹೊರಗಿದ್ದಾಗ ಅಲ್ಲಿದ್ದ ಬೆಕ್ಕು ದಾಳಿ ಮಾಡುತ್ತದೆ.  ಏನೇ ಪ್ರಯತ್ನಿಸಿದರೂ ಕೊನೆಗದು ಬೆಕ್ಕಿಗೆ ಆಹಾರವಾಗುತ್ತದೆ. ಅನಾಥ ಮರಿಗಳ ಜವಾಬ್ದಾರಿ ಮಹರ್ಷಿಗಳ ಪಾಲಾಗುತ್ತದೆ. ಹೀಗೇ ದಿನಗಳು ಕಳೆದಂತೆ, ಅಳಿಲು ಮರಿಗೆಲ್ಲವೂ ಅಂಬೇಗಾಲಲ್ಲಿ ಪಂಜರದ ಸುತ್ತಮುತ್ತ ಓಡಾಡುವಾಗ ಅದೇ ಬೆಕ್ಕು ಅವುಗಳ ಮೇಲೆ ದಾಳಿ ಮಾಡಲು ಬರುತ್ತದೆ. ಕೂಡಲೇ ಎಚ್ಚೆತ್ತ ಮಹರ್ಷಿಗಳು ಅವುಗಳನ್ನು ಕೂಡಲೇ ಎತ್ತಿ ಪಂಜರದೊಳಗಿಟ್ಟು ಬೆಕ್ಕಿನಿಂದ ರಕ್ಷಿಸುತ್ತಾರೆ.

ಇದೆಲ್ಲವನ್ನೂ ಗಮನಿಸುತ್ತಿದ್ದ ಆ ಯುವ ಶಿಷ್ಯನನ್ನು ಮಹರ್ಷಿಗಳು ಕರೆಯುತ್ತಾರೆ. ಮಗೂ, ನೀನಂದು ಧ್ಯಾನದ ಪ್ರಯೋಜನವೇನು ಎಂದು ಕೇಳಿದ ಪ್ರಶ್ನೆಗೆ  ಕಂಡದ್ದೇ ಉತ್ತರ. ಮಾನವರೂ ಕೂಡ ಈ ಚಿಕ್ಕ ಅಳಿಲು ಮರಿಗಳಂತೆ. ಅಳಿಲ ಮರಿಗಳಿಗೆ ಅಪಾಯವೆಂದರೆ ಗೊತ್ತಿರಲಿಲ್ಲ, ಅವುಗಳ ತಾಯಿ ಅಪಾಯದ ಬಗ್ಗೆ ಅರಿಯದೇ ಬಲಿಯಾಯಿತು. ಬಾಹ್ಯ ಜಗತ್ತಿನ ನೋವುಗಳ ಬಗ್ಗೆ  ಅರಿವಿಲ್ಲದೇ ಅವುಗಳಿಗೆ ನಾವು ಬಲಿಯಾಗುತ್ತೇವೆ. ಧ್ಯಾನವೆಂಬುದು ಪಂಜರವಿದ್ದಂತೆ, ಅದು ನಮ್ಮನ್ನು ಬಾಹ್ಯ ನೋವುಗಳಿಂದ ರಕ್ಷಿಸುತ್ತದೆ. ಅಳಿಲಿಗಿಂತ ಬೆಕ್ಕು ಬಲಾಢ್ಯವಿರುವಾಗ ಅದರ ರಕ್ಷಣೆಗೆ ಪಂಜರವೇ ಸುಲಭವೆನಿಸಿತು. ಹಾಗೆಯೇ, ಜೀವನದ ಏರಿಳಿತಗಳ ಹೊಡೆತಕ್ಕೆ ಸಿಕ್ಕು ನಾವು ಝರ್ಜರಿರಾದಾಗ ಧ್ಯಾನವು ನಮಗೆ  ರಕ್ಷೆಯಾಗುತ್ತದೆ. ಹೀಗಾಗಿ ಎಳೆಯ ವಯಸ್ಸಿನಿಂದಲೇ ಧ್ಯಾನ ಮಾಡುವುದನ್ನು ಕಲಿತರೆ ನಮ್ಮ ಮನಸ್ಸಿನ ಆರೋಗ್ಯವನ್ನು ಜೋಪಾನವಾಗಿ  ಕಾಪಿಟ್ಟುಕೊಳ್ಳಬಹುದು.

Tags

Related Articles

Leave a Reply

Your email address will not be published. Required fields are marked *

Language
Close