ಮೇಘಾ ಅಲಿಯಾಸ್ ಮ್ಯಾಗಿ

Posted In : ಸಿನಿಮಾಸ್

‘ನನ್ನ ಸಿನಿ ಕೆರಿಯರ್‌ನಲ್ಲಿ ಫಸ್ಟ್ ಟೈಮ್ ಇಂಥದ್ದೊಂದು ಬೋಲ್ಡ್ ಕ್ಯಾರೆಕ್ಟರ್ ಮಾಡಿದ್ದೇನೆ. ಹುಡುಗರಿಗೆ ಯಾವುದರಲ್ಲೂ ಕಡಿಮೆ ಇಲ್ಲದಂತೆ, ಸ್ವತಂತ್ರವಾಗಿ ಇರಬೇಕೆಂಬ ಹಂಬಲದ ಹುಡುಗಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ’ 

-ಪ್ರಶಾಂತ್

ಸ್ಯಾಂಡಲ್‌ವುಡ್‌ನಲ್ಲಿ ಮ್ಯಾಗಿ ಮೋಡಿ ಮಾಡಲಿದೆ. ಹೌದು ಲವ್ ಥ್ರಿಲ್ಲರ್ ಕಥೆಯನ್ನು ಹೊತ್ತು ಬಂದಿ ರುವ ‘ಮೇಘಾ ಅಲಿಯಾಸ್ ಮ್ಯಾಗಿ’ ರಾಜ್ಯಾದ್ಯಂತ ತೆರೆಗೆ ಬಂದಿದೆ. ಪ್ರೀತಿಯಿಂದ ವಂಚಿತಳಾದ ಹುಡುಗಿಯ ಮನಸ್ಥಿತಿಯ ಕಥಾನಕವನ್ನು ಈ ಚಿತ್ರ ಹೊತ್ತು ತಂದಿದೆ.  ಭಾವನೆಗಳ ತೊಳಲಾಟ ಬೆಳ್ಳಿತೆರೆಯ ಮೇಲೆ ಗೋಚರವಾಗಲಿದೆ. ಯುವ ನಿರ್ದೇಶಕ ವಿಶಾಲ್ ಪುಟ್ಟಣ್ಣ ಕತೆ ಚಿತ್ರಕತೆ ಬರೆದು ತೆರೆಗೆ ತಂದಿದ್ದಾರೆ. ‘ಮ್ಯಾಗಿ ಅಲಿಯಾಸ್ ಮೇಘಾ’, ಶೀರ್ಷಿಕೆಯಲ್ಲೇ ವಿಭಿನ್ನತೆ ಹೊಂದಿರುವ ಈ ಚಿತ್ರದಲ್ಲಿ ಬಹುತೇಕ ನವ ಕಲಾವಿದರ ದಂಡೇ ಇದೆ.  ನಟ ತೇಜು ಗೌಡ ಹಾಗೂ ನಟಿ ನೀತು ಬಾಲ ಈ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿ ಯಶಸ್ವಿ ಆಗಿರುವ ನಟಿ ಸುಕೃತಾ, ಈ ಚಿತ್ರದಲ್ಲಿ ವಿಭಿನ್ನ  ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಎಲ್ಲಾ ಪ್ರೇಮ ಕಥೆಗಳಿಗಿಂತ ಇದು ವಿಶೇಷವಾಗಿದೆ ಎನ್ನುತ್ತಾರೆ ನಿರ್ದೇಶಕ ವಿಶಾಲ್ ಪುಟ್ಟಣ್ಣ.

ವಿಭಿನ್ನ ಗೆಟಪ್‌ನಲ್ಲಿ ಸುಕೃತಾ
ನಟಿ ಸುಕೃತಾ ವಾಗ್ಲೆ ‘ಕಿರಗೂರಿನ ಗಯ್ಯಾಳಿಗಳು’ ಸೇರಿದಂತೆ ಮತ್ತಿತರರ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ. ಎಂತಹ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ನಟಿಸುತ್ತಾರೆ.  ಈ ಚಿತ್ರದಲ್ಲಿ ಸುಕೃತಾ, ವಿಭಿನ್ನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅದೂ ಭಗ್ನ ಪ್ರೇಮಿಯಾಗಿ. ತನ್ನ ಪ್ರೀತಿಯನ್ನು ಪಡೆಯಲಾಗದ ನತದೃಷ್ಟೆಯಾಗಿ, ನಾಯಕನಿಗೆ ಕಾಟ ಕೊಡುವ  ಕಾಣಿಸಿಕೊಂಡಿ ದ್ದಾರೆ. ‘ನನ್ನ ಸಿನಿ ಕೆರಿಯರ್‌ನಲ್ಲಿ ಫಸ್‌ಟ್ ಟೈಮ್ ಇಂಥದ್ದೊಂದು ಬೋಲ್‌ಡ್ ಕ್ಯಾರೆಕ್ಟರ್ ಮಾಡಿದ್ದೇನೆ. ಹುಡುಗರಿಗೆ ಯಾವುದರಲ್ಲೂ ಕಡಿಮೆ ಇಲ್ಲದಂತೆ, ಸ್ವತಂತ್ರವಾಗಿ ಇರಬೇಕೆಂಬ ಹಂಬಲದ ಹುಡುಗಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ಸುಕೃತಾ, ತಮ್ಮ ಕ್ಯಾರೆಕ್ಟರ್‌ಗಾಗಿ ಸಾಕಷ್ಟು ಹೋಂ ವರ್ಕ್ ಮಾಡಿಕೊಳ್ಳಬೇಕಾಯಿತು. ಬಾಡಿ ಲಾಂಗ್ವೇಜ್, ಮ್ಯಾನರಿಸಂ ಎಲ್ಲದರಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಯಿತು. ಈ ಸಿನಿಮಾ ಅಭಿನಯ ದಲ್ಲಿ ಹೊಸ ಅನುಭವ ನೀಡಿದೆ ಎನ್ನುತ್ತಾರೆ.

ಸುಸಂಸ್ಕೃತ ಯುವಕ 
ಚಿತ್ರದ ನಾಯಕ ಸುಸಂಸ್ಕ್ರತ  ಜನಿಸಿದ ಯುವಕ. ಮನೆಯ ನೀತಿ ನಿಯಮಗಳನ್ನು ಎಂದು ಮೀರದ ಹುಡುಗ. ಕುಟುಂಬದ ಹಿರಿಯರ ಅಣತಿಯಂತೆ ಆತನ ನಡೆ ನುಡಿ. ಅಪ್ಪ ಅಮ್ಮನ ಆಸೆಯಂತೆ ಮನೆಯಲ್ಲಿ ನಿಶ್ವಿಯಿಸಿದ ಹುಡುಗಿಯೊಂದಿಗೆ ವಿವಾಹ. ಹೀಗೆ ನಡೆಯುವ ಸುಖ ಸಂಸಾರದಲ್ಲಿ ದಿಢೀರನೇ ಏಳುವ ಅಲೆ. ಆ ಬಳಿಕ ಏನಾಗುತ್ತದೆ. ಸಂಸಾರದಲ್ಲಿ ಬಿರುಗಾಳಿ ಎಬ್ಬಿಸುವವರು ಯಾರು? ಎದುರಾದ ಸಮಸ್ಯೆಯನ್ನು ನಾಯಕ ಹೇಗೆ ಪರಿಹರಿಸುತ್ತಾನೆ? ಎಂಬುದೇ ಚಿತ್ರದ ಇಂಟ್ರೆಸ್ಟಿಂಗ್ ಅಂಶ. ತಾನು ನಟನಾಗಬೇಕೆಂಬ ಬಯಕೆಯನ್ನ ತೇಜು ಗೌಡ,  ಚಿತ್ರದ ಮೂಲಕ ಈಡೇರಿಸಿಕೊಂಡಿದ್ದಾರೆ. ಮೊದಲ ಚಿತ್ರವಾದ್ದರಿಂದ ಸಾಮಾನ್ಯವಾಗಿಯೇ ಸಾಕಷ್ಟು ನಿರೀಕ್ಷೆ ಇದೆ. ನಿರ್ದೇಶಕರು ನನಗೆ ವಹಿಸಿದ ಪಾತ್ರವನ್ನು ನಿಭಾ ಯಿಸಿದ್ದಾನೆ. ಪ್ರೇಕ್ಷಕರು ನನ್ನನ್ನು ಮೆಚ್ಚಿಕೊಳ್ಳುತ್ತಾರೆ ಎನ್ನುವ ಆಶಾಭಾನ ನನ್ನಲ್ಲಿದೆ ಎನ್ನುತ್ತಾರೆ ತೇಜು.

ತನು ಪಾತ್ರದಲ್ಲಿ ನೀತು
ಮೊದಲೇ ಹೇಳಿದ ಹಾಗೆ ಹೊಸ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಅದರಲ್ಲಿ ಮಲಯಾಳಂ ಬೆಡಗಿ ನೀತುಬಾಲ ಕೂಡ ಒಬ್ಬರು. ಮಾಲಿವುಡ್‌ನಿಂದ ಬಂದ ನೀತು, ನಾಯಕಿಯಾಗಿ ನಟಿಸಿದ್ದಾರೆ. ಉತ್ತಮ ಮನೆತನದ ಮುಗ್ಧ ಹುಡುಗಿಯಾಗಿ  ಸಹಜವಾಗಿಯೇ ನೀತು ಅವರಿಗೂ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಗರಿಗೆದರಿದೆ. ಇವರ ಜೊತೆಗೆ ಕಿರಣ್ ಕುಮಾರ್, ಮಂಜು ಪಾವಗಡ, ಅಶ್ವಿನ್ ಕುಮಾರ್, ಮಹೇಶ್ ಗೌಡ, ನಟರಾಜ್, ತನುಷ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಜಿನಿಸ್ ಪೈಕ್ಕಟ್ಟು ಹಾಗೂ ಜಯಪ್ರಕಾಶ್ ಛಾಯಾಗ್ರಹಣ, ವಿನಯ್ ಕುಮಾರ್ ಕೂಗುರ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅತಿಶಯ ಜೈನ್ ಸಂಗೀತವಿದ್ದು, ಎಸ್.ಅರುಣ್ ಕುಮಾರ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ವಿನು  ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು, ರಘು ಪರಮೇಶ್ ಚಿತ್ರದ ದೃಶ್ಯಗಳಿಗೆ ಸಂಭಾಷಣೆ ಬರೆದಿದ್ದಾರೆ. ಬೆಂಗಳೂರು, ಕಳಸಾ ಹಾಗೂ ಕುಂದಾಪುರದ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

Leave a Reply

Your email address will not be published. Required fields are marked *

four × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top