About Us Advertise with us Be a Reporter E-Paper

Breaking Newsರಾಜ್ಯ
Trending

ಪತ್ನಿ ಪೀಡಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಹೆಂಡತಿ, ನಾದಿನಿ

ಬೆಂಗಳೂರು: ಪತ್ನಿ ಪೀಡಕನೊಬ್ಬನಿಗೆ ಹೆಂಡತಿ ಹಾಗೂ ನಾದಿನಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಪತಿಯಿಂದ ದೂರವಿದ್ದ ಪತ್ನಿಯನ್ನು ವಾಪಸ್ ಕರೆದುಕೊಂಡು ಬರಲು ಹೋದ ಗಂಡನಿಗೆ ಹೆಂಡತಿ ಹಾಗೂ ನಾದಿನಿ ಗೂಸಾ ಕೊಟ್ಟಿದ್ದಾರೆ. ಗಾಯಗೊಂಡ ಪತಿ ಪ್ರವೀಣ್ ಕುಮಾರ್  ನನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರವೀಣ್ ಕುಡಿದ ಮತ್ತಿನಲ್ಲಿ ಪತ್ನಿ ಸುಮತಿ ಮೇಲೆ ಹಲ್ಲೆ ನಡೆಸಿದ್ದಾನಂತೆ. ಇವರಿಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಸುಮತಿ ಬ್ಯಾಟರಾಯನಪುರ ಠಾಣೆಯಲ್ಲಿ  ಪ್ರವೀಣ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದರು. ಅದಾದ ನಂತರ ಆಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಆದರೆ ಪ್ರವೀಣ್ ವಾಪಸ್ ಬರುವಂತೆ ಪತ್ನಿಗೆ ಒತ್ತಾಯಿಸುತ್ತಿದ್ದನಂತೆ.

ಸೋಮವಾರ ಜಗಜೀವನ್ ರಾಮ್ ನಗರದಲ್ಲಿದ್ದ ತನ್ನ ಪತ್ನಿಯ ಮನೆಗೆ ತೆರಳಿದ್ದ ಪ್ರವೀಣ್, ವಾಪಸ್ ಮನೆಗೆ ಬರುವಂತೆ ಮನವಿ ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ನಾದಿನಿ ಕೆನ್ನೆಗೆ ಪ್ರವೀಣ್ ಬಾರಿಸಿದ್ದಾನೆ. ಇದರಿಂದ ಕೋಪಗೊಂಡ ಅಕ್ಕ-ತಂಗಿಯರು ಪ್ರವೀಣ್ ಮೆಲೆ ಖಾರದ ಪುಡಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಗಲಾಟೆ ಕಂಡ ಅಕ್ಕಪಕ್ಕದ ಮನೆಯವರು ಜಗಳ ಬಿಡಿಸಿ ಪ್ರವೀಣ್ ಕುಮಾರ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close