About Us Advertise with us Be a Reporter E-Paper

Breaking Newsದೇಶಪ್ರಚಲಿತ

ಮಾನಸಿಕ ಅಸ್ವಸ್ತಯ ಹೊಟ್ಟೆಯಲ್ಲಿ 1.5ಕೆ.ಜಿ. ವಸ್ತುಗಳು ಪತ್ತೆ

ಅಹಮದಾಬಾದ್: ಅಕ್ಯೂಫಾಗಿಯಾ ಎಂಬ ಅಪರೂಪದ ರೋಗದಿಂದ ಬಳಲುತ್ತಿದ್ದ ಮಾನಸಿಕ ಅಸ್ವಸ್ತ ಮಹಿಳೆಯೊಬ್ಬಳ ಹೊಟ್ಟೆಯಲ್ಲಿ ಮಂಗಳಸೂತ್ರ, ತಾಮ್ರದ ರಿಂಗ್,ಯು-ಪಿನ್, ನಟ್‌ಗಳು ಸೇರಿದಂತೆ ಸುಮಾರು 1.5ಕೆ.ಜಿ. ವಸ್ತುಗಳು ಪತ್ತೆಯಾಗಿವೆ.

ಅತೀವ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಾರಾಷ್ಟ್ರದ ಶಿರಡಿ ಮೂಲದ ಸಂಗೀತಾ ಎಂಬ ಮಹಿಳೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾನಸಿಕ ಅಸ್ವಸ್ಥರಾಗಿದ್ದ ಸಂಗೀತಾ ಬೀದಿ ಬೀದಿಗಳಲ್ಲಿ ಅಲೆದಾಡುತ್ತಿದ್ದರು. ನ್ಯಾಯಾಲಯದ ಆದೇಶದಂತೆ ಅವರನ್ನು ಮಾನಸಿಕ ಆರೋಗ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಇವರನ್ನು ಪರೀಕ್ಷೆಗೊಳಪಡಿಸಲಾಯಿತು. ಎಕ್ಸ್’ರೇ ತೆಗೆದು ಪರೀಕ್ಷಿಸಿದ ನಂತರ ವೈದ್ಯರಿಗೆ ಈಕೆಯ ಶ್ವಾಸಕೋಶದಿಂದ ಸೇಫ್ಟಿ ಪಿನ್‌ಗಳು ಹೊರ ಬಂದಿರುವುದು ಪತ್ತೆಯಾಗಿತ್ತು. ಮತ್ತೊಂದು ಪಿನ್ ಸಂಗೀತಾಳ ಹೊಟ್ಟೆ ಸೀಳಿತ್ತು. ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು.

ಸುಮಾರು ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ನಂತರೀಕೆಯ ಹೊಟ್ಟೆಯಿಂದ ಸುಮಾರು 1.5 ಕೆಜಿಯಷ್ಟು ಪಿನ್‌ಗಳು, ಮಂಗಳಸೂತ್ರ, ಹೇರ್‌ಪಿನ್ ಮತ್ತಿತರ ಲೋಹದ ವಸ್ತುಗಳನ್ನು ಹೊರ ತೆಗೆದಿದ್ದಾರೆ.

ಸಂಗೀತಾ ಅಕ್ಯೂಫಾಗಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಚೂಪಾದ ವಸ್ತುಗಳನ್ನ ತಿನ್ನುವುದು ರೋಗದ ಲಕ್ಷಣವಾಗಿದೆ. ಈ ರೋಗ ಸಾಮಾನ್ಯವಾಗಿ ಮಾನಸಿಕ ಅಸ್ವಸ್ತರಲ್ಲಿಯೇ ಹೆಚ್ಚು ಕಂಡು ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close