ಎಚ್ಚರಿಕೆಯ ಸಂದೇಶ

Posted In : ಸಂಪಾದಕೀಯ-1

ಕರಾವಳಿಯಲ್ಲಿ ಪಕ್ಷ ಬಲಪಡಿಸಲು ಸೂಚಿಸುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಆ ಭಾಗದಲ್ಲಿ ನಿರೀಕ್ಷಿತ ಸಂಘಟನೆ ಆಗು ತ್ತಿಲ್ಲ ಎಂಬುದನ್ನು  ಒಪ್ಪಿಕೊಂಡಂತಾಗಿದೆ. ಮಂಗಳೂರು, ಉಡುಪಿ ಭಾಗದಲ್ಲಿ ಕೈ ಬಲವರ್ಧನೆಗೆ ಸೂಚಿಸಿರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್ ವೇಣುಗೋಪಾಲ್ ಮೂಲಕ ಎಚ್ಚರಿಕೆಯ ಸಂದೇಶ ಗಳನ್ನು ರಾಜ್ಯ ನಾಯಕರಿಗೆ ರವಾನಿಸುತ್ತಿದೆ.

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಆಡಳಿತವಿರುವ ದೊಡ್ಡ ರಾಜ್ಯ ಕರ್ನಾಟಕವಾಗಿದ್ದು ಶತಾಯಗತಾಯ ಪುನಃ ಅಧಿಕಾರ ಪಡೆಯಲೇಬೇಕೆಂದು ಹೈಕಮಾಂಡ್ ನಿರ್ಧರಿಸಿದೆ. ಎಐಸಿಸಿ ಅಧ್ಯಕ್ಷರಾದ ನಂತರ ಕಾಂಗ್ರೆಸ್‌ಗೆ ಶಕ್ತಿ ನೀಡಲೆಂದೇ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಸಂಕಷ್ಟ ದಲ್ಲಿದ್ದಾಗಲೆಲ್ಲಾ ಪಕ್ಷದ ಕೈಹಿಡಿದಿರುವುದು ಕರ್ನಾಟಕ ಎಂಬುದನ್ನು ಮನಗಂಡಿರುವ ರಾಹುಲ್, ಇಲ್ಲಿಂದಲೇ ಚುನಾವಣಾ ರಣಕಹಳೆ ಊದಲು ಉತ್ಸುಕರಾಗಿದ್ದಾರೆ. ಅದಕ್ಕಾಗಿಯೇ ರಾಜ್ಯ ಕಾಂಗ್ರೆಸ್‌ ನಲ್ಲಿ ಯಾವುದೇ ಕಾರಣಕ್ಕೂ ಭಿನ್ನಾಭಿಪ್ರಾಯ ಸಹಿಸು ವುದಿಲ್ಲ ಎಂದು ವೇಣುಗೋಪಾಲ್ ಎಚ್ಚರಿಕೆ ನೀಡಿರುವುದು.

ಉತ್ತರ ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರಾವಳಿ ಭಾಗದಿಂದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಪ್ರವಾಸ ಹೊರ ಡಲು ಅಣಿಯಾಗುತ್ತಿದ್ದು ರೂಪುರೇಷೆ ತಯಾರಿಸಲಾಗುತ್ತಿದೆ. ಸರಕಾರಿ ಕಾರ್ಯಕ್ರಮಗಳ ನೆಪದಲ್ಲಿ ಈಗಾಗಲೇ ಪ್ರತಿ ಜಿಲ್ಲೆ ಯಲ್ಲೂ ಪ್ರವಾಸ ಕೈಗೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದು ಮತದಾರರ ಮನವೊಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಸಿದ್ದ ರಾಮಯ್ಯ 120, ಪರಮೇಶ್ವರ ಅವರಿಗೆ 104 ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಿದ್ದು ಮ್ಯಾಜಿಕ್ ಸಂಖ್ಯೆ 113 ತಲುಪಲು ಹೈಕಮಾಂಡ್ ಟಾರ್ಗೆಟ್ ನೀಡಿದೆ. ಪ್ರತಿಪಕ್ಷಗಳ ಆರೋಪಕ್ಕೆ ತಕ್ಕ ಉತ್ತರ ನೀಡುವುದರ ಜತೆಗೆ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ಮನವರಿಕೆ ಮಾಡಿಕೊಡುತ್ತಾ ವಿಶ್ವಾಸ ಗಳಿಸಲು ಕಾಂಗ್ರೆಸ್ ಮುಂದಾಗಿದೆ. ಇದು ಸಾಕಷ್ಟು ಕುತೂಹಲ ಕೆರಳಿಸಿದೆ.

ಸಿಬಲ್ ಸಲ್ಲದ ನಿಲುವು

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ವಿಚಾರಣೆಯನ್ನು 2019 ರ ಲೋಕಸಭಾ ಚುನಾವಣೆಗೆ ತಳುಕು ಹಾಕುವ ಮೂಲಕ ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷವನ್ನು ಪೇಚಿಗೆ ಸಿಲುಕಿಸಿದ್ದಾರೆ. ಕಾನೂನು ಪಂಡಿತನ ಈ ವಿತಂಡ ನಿಲುವು ಸದ್ಯ. ಗುಜರಾತಿನಲ್ಲಿ ಚುನಾವಣೆ ಎದುರಿಸುತ್ತಿರುವ ದೇಶದ ಪುರಾತನ ಪಕ್ಷಕ್ಕೆ ಇರುಸುಮುರಿಸು ಉಂಟುಮಾಡಿರುವುದು ಸುಳ್ಳಲ್ಲ. 25 ವರ್ಷಗಳ ಹಿಂದೆ ರಾಮಜನ್ಮಭೂಮಿ ಪ್ರದೇಶದಲ್ಲಿ ತಲೆ ಎತ್ತಿದ್ದ ಬಾಬ್ರಿ ಕಟ್ಟಡ ಧ್ವಂಸ ಆದಂದಿನಿಂದ ವಿವಾದದ ಪರಿಹಾರಕ್ಕೆ ಏನೆಲ್ಲ ಪ್ರಯತ್ನಗಳು ನಡೆದರೂ ಫಲ ನೀಡಿಲ್ಲ. ಈಗ ಕೊನೆಯ ಹಂತವಾಗಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಆದ್ಯತೆಯ ಮೇರೆಗೆ ತ್ವರಿತ ವಿಚಾರಣೆಗೆ ಕೈಗೆತ್ತಿಕೊಂಡಿರುವುದು ಶಾಶ್ವತ ಪರಿಹಾರದ ಆಶಾಭಾವನೆ ಹೆಚ್ಚಿಸಿದೆ.

ಪಿರ‍್ಯಾದುದಾರ ಸಂಘಟನೆಗಳೂ ಸೇರಿದಂತೆ ಇಡೀ ದೇಶದ ಜನತೆ ವಿವಾದದ ಶೀಘ್ರ ಇತ್ಯರ್ಥವನ್ನು ಎದಿರುನೋಡುತ್ತಿರುವಾಗ ಸಿಬಲರಂತಹ ಮೇಧಾವಿ 2019ರ ಮಹಾಚುನಾವಣೆ ಮುಗಿಯುವ ತನಕ ವಿಚಾರಣೆಯನ್ನು ಮುಂದೂಡುವಂತೆ ಕೇಳಿರುವುದು ಹಾಸ್ಯಾಸ್ಪದ ಮಾತ್ರವಲ್ಲದೇ ಅವಕಾಶವಾದಿ ರಾಜಕಾರಣದ ಪರಮಾವಧಿಯಾಗಿದೆ. ಓರ್ವ ವಕೀಲನಾಗಿ ಯಾರ ಪರ ಬೇಕಾ ದರೂ ವಕಾಲತ್ತು ವಹಿಸುವ ಮತ್ತು ತನಗರಿವಿನ ರೀತಿ ವಾದ ಮಂಡಿಸುವ ಹಕ್ಕು ಕಪಿಲ್ ಸಿಬಲ್ ಅವರಿಗಿದೆ ಎಂಬುದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಆದರೆ ದೇಶದ ಕಾನೂನು ಸಚಿವರಾಗಿದ್ದ ವ್ಯಕ್ತಿ ಈ ರೀತಿ ಒಂದು ರಾಜಕೀಯ ಪಕ್ಷದ ತುಮುಲ, ಆತಂಕಗಳನ್ನು ತನ್ನ ವಕಾಲತ್ತಿನ ಭಗವಾಗಿಸಿಕೊಳ್ಳುವುದು ಅಕ್ಷಮ್ಯ.

ಸಿಬಲ್ ಪಕ್ಷದ ಪರ ವಾದಿಸುತ್ತಿಲ್ಲ ಎಂದು ಕಾಂಗ್ರೆಸ್ ಎಷ್ಟೇ ಸಮಜಾಯಿಷಿ ನೀಡಿದರೂ ಇದು ಪಕ್ಷದ ಅಘೋಷಿತ ನಿಲುವಿ ನ ಪ್ರತಿಬಿಂಬದಂತೆ ಕಂಡರೆ ಅಚ್ಚರಿ ಏನಿಲ್ಲ. ಜನರ ಭಾವನೆಗಳನ್ನು ಒಳಗೊಂಡಿರುವ ಇತಹ ಸೂಕ್ಷ್ಮ ವಿಚಾರದಲ್ಲಿ ಸಿಬಲ್ ತಳೆದಿರುವ ನಿಲುವು ಸರ್ವಥಾ ಸಮರ್ಥನೀಯವಲ್ಲ.

Leave a Reply

Your email address will not be published. Required fields are marked *

thirteen + three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top