About Us Advertise with us Be a Reporter E-Paper

Breaking Newsದೇಶಪ್ರಚಲಿತ

ನನ್ನ ಮೇಲಿನ ಆರೋಪ ರಾಜಕೀಯ ಪಿತೂರಿ: ರಾಹುಲ್ ಈಶ್ವರ್

ತಿರುವನಂತಪುರ: ತನ್ನ ಮೇಲೆ ಮಾಡಿರುವ ಮೀ ಟೂ ಆರೋಪವು ರಾಜಕೀಯ ಪಿತೂರಿ ಮತ್ತು ಸ್ತ್ರಿವಾದಿಗಳ ಸಂಚು ಎಂದು ಅಯ್ಯಪ್ಪ ಧರ್ಮ ಸೇನಾ ಮುಖ್ಯಸ್ಥ ರಾಹುಲ್ ಈಶ್ವರ್ ಹೇಳಿದ್ದಾರೆ.

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತೆರೆದಿಡುವ ಮೀ ಟೂ ಅಭಿಯಾನವನ್ನು ಗೌರವಿಸುತ್ತೇನೆ. ಆದರೆ ಇದನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಕೇಳಿ ಬಂದಿರುವ ಆರೋಪ ಸುಳ್ಳು. ಇದಕ್ಕೆ ಸಂಬಂಧಿಸಿದಂತೆ ನನ್ನ ಕುಟುಂಬದವರು ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ನನ್ನ ಮೇಲಿನ ಆರೋಪ 15 ವರ್ಷ ಹಿಂದೆ ನಡೆದದ್ದು. ಅವರಿಗೂ ಯಾವ ವರ್ಷ ನಡೆದಿದೆ ಎಂದು ಸರಿಯಾಗಿ ಗೊತ್ತಿಲ್ಲ. ಮುಂದೊಂದು ದಿನ ನಮ್ಮ ಮಗ, ತಂದೆ, ಸಹೋದರರ ವಿರುದ್ಧ ಇಂಥಾ ಆರೋಪಗಳು ಕೇಳಿ ಬರಬಹುದು ಎಂದು ಫೇಸ್‌ಬುಕ್ ಲೈವ್ ಮೂಲಕ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಈಶ್ವರ್ ಅವರು 18 ವರ್ಷದ ತಮ್ಮ ಸೇಹಿತೆಯ ಮೇಲೆಯೇ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ತಮ್ಮ ಫೇಸ್‌‌ಬುಕ್‌‌ ಖಾತೆಯಲ್ಲಿ ಬೆರೆದುಕೊಂಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close