About Us Advertise with us Be a Reporter E-Paper

Breaking Newsದೇಶಪ್ರಚಲಿತ

ನಿರ್ದೇಶಕ ಹಿರಾನಿ ವಿರುದ್ಧ ಮೀ ಟೂ ಆರೋಪ

ದೆಹಲಿ: ಮುನ್ನಾಭಾಯಿ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯಿ, 3 ಈಡಿಯಟ್‌ಸ್, ಪಿಕೆ, ಸಂಜು ಮೊದಲಾದ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿ ವಿರುದ್ಧ ಮೀ ಟೂ ಆರೋಪ ಕೇಳಿ ಬಂದಿದೆ.

ಸಂಜು ಸಿನಿಮಾಗಾಗಿ ಹಿರಾನಿ ಜತೆಯಲ್ಲಿ ಕೆಲಸ ಮಾಡಿದ್ದ ಮಹಿಳೆಯೊಬ್ಬರು ಈ ಆರೋಪ ಮಾಡಿದ್ದು, 2018ರ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ದೂರಿದ್ದಾರೆ. ಆದರೆ ಈ ಮಹಿಳೆಯ ಹೆಸರು ಬಹಿರಂಗಗೊಂಡಿಲ್ಲ. ತಮಗೆ ಹಿರಾನಿ ಲೈಂಗಿಕ ಕಿರುಕುಳ ನೀಡಿರುವ ಕುರಿತು ನಿರ್ಮಾಪಕ ವಿಧು ವಿನೋದ್ ಚೋಪ್ರಾ, ಸಿನಿಮಾ ವಿಮರ್ಶಕ ಅನುಪಮ್ ಚೋಪ್ರಾ, ಚಿತ್ರಕತೆ ಬರಹಗಾರ ಅಭಿಜಾತ್ ಜೋಷಿ ಮತ್ತು ವಿನೋದ್ ಚೋಪ್ರಾ ಸಹೋದರಿಗೆ ಇ-ಮೇಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

2018ರ ಏಪ್ರಿಲ್ 9ರಂದು ಮೊದಲ ಬಾರಿ ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ವರ್ತನೆ ತಪ್ಪು ಎಂದು ನೇರವಾಗಿ ತಿಳಿಸಿದ್ದೆನಾದರೂ ಅವರು ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ ಎಂದು ದೂರಿದ್ದಾರೆ. ಹಿರಾನಿ ಅವರ ವಕೀಲ ಆನಂದ್ ದೇಸಾಯಿ ಪ್ರತಿಕ್ರಿಯಿಸಿ, ಇದೊಂದು ಸುಳ್ಳು ಆರೋಪವಾಗಿದ್ದು ದುರುದ್ದೇಶದಿಂದ ಕೂಡಿದೆ ಎಂದಿದ್ದಾರೆ. ಈ ಮೀ ಟೂ ಆರೋಪ ಮಾಡಿರುವ ಮಹಿಳೆಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close