About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಭಾರತ-ಇಂಗ್ಲೆಂಡ್‌ ಅಂತಿಮ ಟೆಸ್ಟ್‌: ಶತಕ, ಐದು ವಿಕೆಟ್​ ಪಡೆದವರಿಗೆ ಜಾಗರ್‌ರಿಂದ 18.64 ಲಕ್ಷ ಬಹುಮಾನ

ಓವೆಲ್​: ಇಂದಿನಿಂದ ಪ್ರವಾಸಿ ಭಾರತದ ವಿರುದ್ಧ ಆರಂಭಗೊಂಡಿರುವ ಕೊನೆ ಟೆಸ್ಟ್​​ ಪಂದ್ಯದಲ್ಲಿ ಶತಕ ಅಥವಾ ಐದು ವಿಕೆಟ್​ ಪಡೆದುಕೊಳ್ಳುವ ಆಟಗಾರರು £20,000 ಅಂದರೆ 18.64 ಲಕ್ಷ ರೂಪಾಯಿ ಹಣ ವೈಯಕ್ತಿಕ ಬಹುಮಾನವಾಗಿ ಪಡೆದುಕೊಳ್ಳಲಿದ್ದಾರೆ.

ರೋಲಿಂಗ್ ಸ್ಟೋನ್ಸ್ ಕಲಾವಿದ, ಮಿಕ್ ಜಾಗರ್ ಈ ಘೋಷಣೆ ಮಾಡಿದ್ದು, ಚಾನ್ಸ್​ ಟು ಶೈನ್​ ಎಂಬ ಶೀರ್ಷಿಕೆಯಡಿ ಅವರು ಆಟಗಾರರಿಗೆ ಈ ಬಹುಮಾನ ನೀಡಲು ಮುಂದಾಗಿದ್ದಾರೆ. ಇದೇ ವೇಳೆ ಪ್ರತಿವೊಂದು ಅರ್ಧಶತಕಗಳಿಸುವ ಆಟಗಾರರು ಹಾಗೂ ಮೂರು ವಿಕೆಟ್​ ಪಡೆದುಕೊಳ್ಳುವವರಿಗೆ 9 ಲಕ್ಷ ರೂಪಾಯಿ ನೀಡಲು ನಿರ್ಧರಿಸಿದೆ.

ಇಂದಿನಿಂದ ದಿ ಓವೆಲ್​ ಮೈದಾನದಲ್ಲಿ ಇಂಗ್ಲೆಂಡ್​-ಭಾರತ ತಂಡಗಳ ನಡುವೆ ಕೊನೆ ಟೆಸ್ಟ್​​ ಪಂದ್ಯ ಆರಂಭಗೊಂಡಿದ್ದು, ಟಾಸ್​ ಗೆದ್ದಿರುವ ಆಂಗ್ಲರ ಪಡೆ ಬ್ಯಾಟಿಂಗ್​ ಆಯ್ದುಕೊಂಡಿದೆ. ವಿವಿಧ ಕ್ರೀಡೆಗಳ ಅಭಿಮಾನಿಯಾಗಿರುವ ಜಾಗರ್ ತಮ್ಮ ಕೈಯಿಂದ ಆಗುವ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close