About Us Advertise with us Be a Reporter E-Paper

ಅಂಕಣಗಳು

ಶತಕ ಪೂರೈಸಿದ ಮಿಲ್ಲರ್ ಸಮಿತಿಯ ಮೀಸಲಾತಿ ಶಿಫಾರಸುಗಳು!

- ಎಲ್.ಪಿ. ಕುಲಕರ್ಣಿ, ಅಧ್ಯಾಪಕರು

ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ದೇಶದ ಪ್ರಜೆಗಳಿಗೆಲ್ಲ ಸಮಾನ ಅವಕಾಶ ಹಾಗೂ ಸ್ಥಾನಮಾನಗಳು ಸಿಗಲಿ ಎಂಬ ಉದ್ದೇಶದಿಂದ ಮೀಸಲಾತಿ ಎಂಬ ಆಲೋಚನೆ ನಮ್ಮ ನಾಯಕರಲ್ಲಿ ಹುಟ್ಟಿಕೊಂಡಿತು. ಅದು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಕಾನೂನಿನ ಅಡಿಯಲ್ಲಿ ಪೋಷಣೆಗೊಳ್ಳುತ್ತಾ ಸಾಗಿಬರುತ್ತಿರುವುದು ನಿಜಕ್ಕೂ ಪ್ರಗತಿಯ ಸಂಕೇತ. ಸದ್ಯ ರಲ್ಲಿ ರಚನೆಯಾಗಿ 1919 ರಲ್ಲಿ ಬಹುಚರ್ಚಿತವಾಗಿದ್ದ ಮೀಸಲಾತಿಗೆ ಸಂಬಂಧಿಸಿದ ಮಿಲ್ಲರ್ ಸಮೀತಿಗೆ ಈಗ ತುಂಬು ನೂರು ವರ್ಷಗಳು. ಈ ಘಟ್ಟದಲ್ಲಿ ಮೀಸಲಾತಿಯ ಇದುವರೆಗೂ ಸಾಗಿಬಂದ ದಾರಿಯನ್ನು ಅವಲೋಕಿಸುವುದು ಕುತೂಹಲಕರ.

ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಭಾರತ ಸರಕಾರ ಮೀಸಲಾತಿ ಜಾರಿಗೊಳಿಸಿದೆ. ಅವರು ಇಂತಹ ಸೇವಾವಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಮಾಣದ ಪ್ರಾತಿನಿಧಿತ್ವ ಹೊಂದಿರುವುದಿಲ್ಲ ಎಂಬ ನೀಗಿಸಲು ಈ ಕೋಟಾ ಪದ್ದತಿಯನ್ನು ಜಾರಿಗೊಳಿಸಲಾಗಿದೆ. ಇದೇ ಸೂತ್ರದಡಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ಭಾರತದ ಸಂಸತ್ತಿನಲ್ಲೂ ಪ್ರತಿನಿಧಿತ್ವ ವಹಿಸಲು ಮೀಸಲು ನೀಡಿದೆ. ಕೇಂದ್ರ ಸರಕಾರವು ಉನ್ನತ ಶಿಕ್ಷಣ ಮತ್ತು ಇನ್ನಿತರ ಸೌಲಭ್ಯಕ್ಕಾಗಿ 27% ಮೀಸಲಾತಿ ನೀಡಿದೆ.ಆಯಾ ರಾಜ್ಯಗಳು ತಮಗೆ ಅನುಕೂಲಕರ ಪ್ರಮಾಣದಲ್ಲಿ ಕೊಟಾವನ್ನು ನಿಗದಿ ಮಾಡಿಕೊಳ್ಳಬಹುದು. ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಮೀಸಲಾತಿ ಪ್ರಮಾಣವು ಶೇ.50 ಕ್ಕಿಂತ ಹೆಚ್ಚಾಗಬಾರದು. ಆದರೆ ರಾಜಸ್ಥಾನದಂತಹ ರಾಜ್ಯಗಳಲ್ಲಿ ಇದು ರಷ್ಟಿದೆ, ಯಾಕೆಂದರೆ ಇದರಲ್ಲಿ 14% ಪ್ರಮಾಣವನ್ನು ಮುಂದವರಿದ ಜನಾಂಗದವರಿಗೂ ಕಲ್ಪಿಸಲಾಗಿದೆ.

ಸಾಮಾಜಿಕ ತಾರತಮ್ಯ ಅನುಭವಿಸುವ ಜನಾಂಗಗಳ ಹಕ್ಕು ರಕ್ಷಿಸುವುದೇ ಅಲ್ಲದೆ ಒಟ್ಟು ಜನಸಂಖ್ಯೆಯಲ್ಲಿ ಕಡಿಮೆ ಪ್ರಾತಿನಿಧ್ಯ ಕಂಡ ಸಮುದಾಯವನ್ನು ಸಾಮಾನ್ಯ ಸರಾಸರಿಯೊಂದಿಗೆ ಮೇಳೈಸುವುದೇ ಮೀಸಲಾತಿಯ ಪ್ರಮುಖ ಗುರಿ. ಕಡಿಮೆ ಪ್ರಾತಿನಿಧ್ಯ ಕಂಡು ಹಿಡಿಯಲು ಜಾತಿ ಅತ್ಯಂತ ಸೂಕ್ತ ಮಾನದಂಡವಾಗಿದೆ. ಇದೂ ಅಲ್ಲದೇ ಅತ್ಯಂತ ಕಡಿಮೆ ಪ್ರಾತಿನಿಧ್ಯ ಪಡೆದ ಇನ್ನೂ ಹಲವು ವರ್ಗಗಳಿವೆ. ಉದಾಹರಣೆಗೆ ಲಿಂಗ ತಾರತಮ್ಯ. ಏಕೆಂದರೆ ಮಹಿಳೆಯರ ಕಡಿಮೆಯೇ. ನಮ್ಮ ದೇಶದಲ್ಲಿ ಮೀಸಲಾತಿ ಅಳವಡಿಸಿಕೊಂಡ ಕಾಲಾನುಕ್ರಮಣಿಕೆ ಕೆಳ ಕಂಡಂತಿದೆ.

1882- ಹಂಟರ್ ಆಯೋಗ ನೇಮಕ: ಮಹಾತ್ಮಾ ಜ್ಯೋತಿರಾವ್ ಫುಲೆ ಅವರು ಉಚಿತ ಶಿಕ್ಷಣ ಮತ್ತು ಸರಕಾರಿ ಕೆಲಸಗಳಲ್ಲಿ ಅಗತ್ಯ ಮೀಸಲಾತಿ ನೀಡುವಂತೆ, ಅದು ಜಾತಿಗೆ ಸರಾಸರಿ/ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದರು. 1891ರಲ್ಲಿ ಸರಕಾರಿ ಕೆಲಸಗಳಲ್ಲಿ ಮೀಸಲಾತಿ ಬೇಕೆಂಬ ಬೇಡಿಕೆಯು ಆರಂಭದಲ್ಲೇ ಕೇಳಿ ಬಂತು. ಟ್ರ್ಯಾವಂಕೂರ್ ರಾಜಮನೆತನದ ಆಡಳಿತದಲ್ಲಿ ಸ್ಥಳೀಯರಲ್ಲದವರನ್ನು ಕೆಲಸಗಳಲ್ಲಿ ನೇಮಕ ಮಾಡಿಕೊಂಡು ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಲಾಯಿತೆಂದು ಹೋರಾಟ ನಂತರ 1901-ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ರಾಜ ಶಾಹು ಮಹಾರಾಜರ ಆಡಳಿತದಲ್ಲಿ ಮೀಸಲಾತಿಗಳನ್ನು ಜಾರಿಗೊಳಿಸಲಾಯಿತು. ಅದಾಗಲೇ ಬರೋಡಾ ಮತ್ತು ಮೈಸೂರು ಸಂಸ್ಥಾನಗಳಲ್ಲಿ ಮೀಸಲಾತಿ ಜಾರಿಯಲ್ಲಿತ್ತು.

ಮುಂದೆ 1908 ರ ಹೊತ್ತಿಗೆ ಹಲವಾರು ಜಾತಿಗಳು ಮತ್ತು ಸಮುದಾಯಗಳಿಗೆ ಕಡಿಮೆ ಪ್ರಾತಿನಿಧ್ಯಇದ್ದ ಕಾರಣ ಬ್ರಿಟಿಷ್ ಆಡಳಿತದಲ್ಲಿ ಇವುಗಳಿಗೆ ಮೀಸಲಾತಿ ಕಲ್ಪಿಸಲಾಯಿತು. 1909ರಲ್ಲಿ ‘ಗವರ್‌ನ್ರ್ಮೆಂಟ್ ಆಫ್ ಇಂಡಿಯಾ ಆಕ್‌ಟ್- 1909’ ಅನ್ವಯ ಭಾರತೀಯ ಸರಕಾರದ ಕಾನೂನಿನಲ್ಲಿ ಸವಲತ್ತುಗಳನ್ನು ಕಲ್ಪಿಸಲಾಯಿತು. ಅದರ ಹಿಂದೆಯೇ 1919ರಲ್ಲಿ ‘ಮೊಂಟ್ಯಾಗು-ಚೆಲ್‌ಮ್ಸ್ಫೊರ್ಡ್ ಅಂದರೆ ಚೆಲ್‌ಮ್ಸ್ ಫೊರ್ಡ್ ಅವರ ಸುಧಾರಣೆಗಳು ಜಾರಿಯಾದವು. 1919-ರಲ್ಲಿ ಗವರ್ನ್ ಮೆಂಟ್ ಆಫ್ ಇಂಡಿಯಾ ಆಕ್‌ಟ್ ಯಶಸ್ವಿಯಾಗಿ ಜಾರಿಗೆ ಬಂತು.

1921ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ , ಸರಕಾರಿ ಆದೇಶವೊಂದನ್ನು ಹೊರಡಿಸಿ ಬ್ರಾಹ್ಮಣೇತರರಿಗೆ ಶೇಕಡಾ 44, ಬ್ರಾಹ್ಮಣರಿಗೆ ಶೇಕಡಾ 16, ಶೇಕಡಾ 16 ಮುಸ್ಲಿಮ್ ರಿಗೆ, ಶೇಕಡಾ 16 ಆಂಗ್ಲೊಇಂಡಿಯನ್ಸ/ಕ್ರಿಶ್ಚಿಯನ್‌ರಿಗೆ ಮತ್ತು 8 ಶೇಕಡಾವನ್ನು ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಪ್ರಕಟಿಸಿತು. ಮುಂದೆ 1935ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂದು ‘ಪೂನಾ ಎನ್ನುವ ಒಪ್ಪಂದ ಮಾಡಿ ಕೆಳ ದರ್ಜೆಯ ಮತ್ತು ತುಳಿತಕ್ಕೊಳಗಾದವರಿಗಾಗಿ ಪ್ರತ್ಯೇಕ ಮತಕ್ಷೇತ್ರಗಳ ಹಂಚಿಕೆ ಬಗ್ಗೆ ಕಾರ್ಯಕ್ರಮ ಹಾಕಿಕೊಂಡಿತು. 1935ರಲ್ಲಿ ಇದು ಭಾರತ ಸರಕಾರದ ಕಾನೂನನ್ನು ಜಾರಿಗೊಳಿಸಿತು.

1942 ರಲ್ಲಿ ಬಿ.ಆರ್. ಅಂಬೇಡ್ಕರ್ ಅವರು ಅಖಿಲ ಭಾರತ ತುಳಿತಕ್ಕೊಳಗಾದ ವರ್ಗಗಳ ಒಕ್ಕೂಟವನ್ನು ರಚಿಸಿ ಪರಿಶಿಷ್ಟ ಜಾತಿಯವರ ಮುಂದುವರಿಯುವಿಕೆಗೆ ಒತ್ತು ನೀಡಿದರು. ಅವರೂ ಕೂಡಾ ಸರಕಾರಿ ಕೆಲಸ-ಸೇವೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವಂತೆ ಬೇಡಿಕೆಯೊಡ್ಡಿದರು. 1946ರಲ್ಲಿ ‘1946 ಕ್ಯಾಬಿನೆಟ್ ಮಿಶನ್ ಟು ತನ್ನ ನಿಯೋಗದಲ್ಲಿ ಆಯಾ ಜನಸಂಖ್ಯೆ ಅನುಪಾತಕ್ಕನುಗುಣವಾಗಿ ಪ್ರಾತಿನಿಧ್ಯ ನೀಡಲು ಆಗ್ರಹಿಸಿ ಹಲವಾರು ಶಿಫಾರಸ್ಸುಗಳನ್ನು ಮಾಡಿತು.

1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಡಾ.ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಭಾರತದ ಸಂವಿಧಾನವು ಧರ್ಮ, ಜನಾಂಗ, ಜಾತಿ, ಲಿಂಗ ಮತ್ತು ಜನನದ ಸ್ಥಳದ ಮೇಲೆ ತಾರತಮ್ಯ ಮಾಡುವುದನ್ನು ಖಡಾಖಂಡಿತವಾಗಿ ನಿರಾಕರಿಸಿತು. ಎಲ್ಲಾ ನಾಗರಿಕರಿಗೆ ಸಮಾನ ಅವಕಾಶ ಹಾಗೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಗಳಿಗಾಗಿ ನಿಯಮಾವಳಿಗಳನ್ನು ರಚಿಸಿತು.

ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ದೊರಕಿಸಲು 10 ವರ್ಷಗಳ ಕಾಲ ಪ್ರತ್ಯೇಕ ಮತಕ್ಷೇತ್ರಗಳನ್ನು ಹಂಚಿಕೆ ಮಾಡಿತು. ಪ್ರತಿ 10 ವರ್ಷಕ್ಕೊಮ್ಮೆ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಹಾಗೆಯೇ ಅದನ್ನು ವಿಸ್ತರಿಸಲಾಯಿತು.  26.01.1950, ಭಾರತ ಸಂವಿಧಾನ ಜಾರಿಯಾದ ಸುದಿನ. ಅದಾಗಿ ಶೀಘ್ರದಲ್ಲೇ 1953ರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಪ್ರಗತಿ ವೀಕ್ಷಣೆಗೆ ಕಾಲೇಕರ್ ಆಯೋಗವನ್ನು ನೇಮಿಸಲಾಯಿತು. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಬಗೆಗಿನ ಅದರ ಅಂಗೀಕರಿಸಲಾಯಿತು. ಆದರೆ ಇನ್ನಿತರ ಹಿಂದುಳಿದವರ ಆಇ ಶಿಫಾರಸುಗಳನ್ನು ತಿರಸ್ಕರಿಸಲಾಯಿತು.

1979ರಲ್ಲಿ ಮಂಡಲ್ ಆಯೋಗವನ್ನು ನೇಮಕ ಮಾಡಿದ್ದು ಮೀಸಲು ನೀತಿಯ ಮಹತ್ವದ ಘಟ್ಟಗಳಲ್ಲಿ ಒಂದು. ಈ ಆಯೋಗಕ್ಕೆ ಉಪ ಜಾತಿಗಳ ಬಗ್ಗೆ ಅಂದರೆ ಇನ್ನುಳಿದ ಹಿಂದುಳಿದ ವರ್ಗಗಳ (ಆಇ) ಬಗ್ಗೆ ನಿಖರ ಮಾಹಿತಿ ಕಲೆಹಾಕಲು ಸಾಧ್ಯವಾಗಲಿಲ್ಲ. ಅದು 1930ರ ಜನಗಣತಿಯ ಅಂಕಿಅಂಶಗಳನ್ನು ಅನುಸರಿಸಿ ಮತ್ತೆ 1,257 ಸಮುದಾಯಗಳನ್ನು ಪಟ್ಟಿ ಮಾಡಿ ಒಟ್ಟು ಆಇ ಜನಸಂಖ್ಯೆಯು 52% ರಷ್ಟಿದೆ ಎಂದು ಹೇಳಿತು. ಪ್ರಸಕ್ತ ಮೀಸಲಾತಿ ಪ್ರಮಾಣಗಳಿಗೆ ಬದಲಾವಣೆ ತರುವಂತೆ ಶಿಫಾರಸು ಮಾಡಿತು. ಅದನ್ನು 22% ರಿಂದ 49.5% ಗೆ ಹೆಚ್ಚಿಸುವಂತೆ ಸಲಹೆ ಮಾಡಿತು. ಹೀಗೆ ಇನ್ನಿತರ ಹಿಂದುಳಿದ ಜಾತಿಗಳ ಸಂಖ್ಯೆಯು 2297ಕ್ಕೇರಿತು. ಇದು ಮಂಡಲ್ ಆಯೋಗ ಸಿದ್ದಪಡಿಸಿದ ಪಟ್ಟಿಗಿಂತ 60% ರಷ್ಟು ಅಧಿಕವಾಗಿತ್ತು.

1990-ಮಂಡಲ್ ಆಯೋಗದ ಶಿಫಾರಸುಗಳನ್ನು ಅನುಸರಿಸಿ ಸರಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ವಿಶ್ವನಾಥ್ ಪ್ರತಾಪ ಸಿಂಗ್ ಅವರು ತಮ್ಮ ಅವಧಿಯಲ್ಲಿ ಅನುಷ್ಠಾನಗೊಳಿಸಿದಾಗ ವಿದ್ಯಾರ್ಥಿ ಸಂಘಟನೆಗಳು ದೇಶಾದ್ಯಂತ ಚಳವಳಿ ಹಮ್ಮಿಕೊಂಡವು. ರಾಜೀವ್ ಎಂಬ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಪ್ರಯತ್ನಿಸಿದರು. ಹಲವಾರು ವಿದ್ಯಾರ್ಥಿಗಳ ಇದನ್ನೇ ಅನುಕರಿಸಿದರು.

1991ರಲ್ಲಿ ಪಿ.ವಿ. ನರಸಿಂಹರಾವ್ ಸರಕಾರವು ಮುಂದುವರಿದ ಜಾತಿಗಳಲ್ಲಿನ ಬಡವರಿಗೆ 10% ರಷ್ಟು ಮೀಸಲಾತಿಯನ್ನು ಪ್ರಕಟಿಸಿತು. 1992-ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇಂದಿರಾ ಸಾಹನಿ ಪ್ರಕರಣದಲ್ಲಿ ಇನ್ನಿತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಎತ್ತಿಹಿಡಿಯಿತು. ಅದಲ್ಲದೇ ಮೀಸಲಾತಿಗಳು ಮತ್ತು ನ್ಯಾಯಾಂಗದ ವಿಧಿ-ವಿಧಾನಗಳನ್ನು ಗಮನಿಸಿ 1995- ಸಂಸತ್ತು 77 ನೆಯ ಸಾಂವಿಧಾನಿಕ ತಿದ್ದುಪಡಿಯನ್ನು ಆರ್ಟಿಕಲ್ 16(4) ನಿಯಾಮಾವಳಿಗೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಬಡ್ತಿಯಲ್ಲೂ ಮೀಸಲಾತಿ ಕಲ್ಪಿಸಿತು. ನಂತರ ಮುಂದಿನ 85ನೆಯ ತಿದ್ದುಪಡಿಯಲ್ಲಿ ತಾರ್ಕಿಕ ಸುಸಂಬಂಧಿತ ಹಿರಿತನದ ಬಡ್ತಿಗೆ ಅವಕಾಶ ನೀಡಲಾಯಿತು.

1998ರಲ್ಲಿ ಮೊದಲ ಬಾರಿಗೆ ಕೇಂದ್ರ ಸರಕಾರವು ದೊಡ್ಡ ಮಟ್ಟದಲ್ಲಿ ಸರ್ವೇಕ್ಷಣೆ ನಡೆಸಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯ ಬಗ್ಗೆ ವಿವಿಧ ಸಾಮಾಜಿಕ ಸಮುದಾಯಗಳನ್ನು ಪಟ್ಟಿ ಮಾಡಿತು. ಆದರೆ ರಾಷ್ಟ್ರೀಯ ಮಾದರಿ ಸರ್ವೇಕ್ಷಣೆಯು ಇದನ್ನು 32% ಎಂದು ತೋರಿಸಿದೆ. ಭಾರತದಲ್ಲಿನ ಆಇ ಗಳ ನಿಖರ ಬಗ್ಗೆ ವ್ಯಾಪಕ ಚರ್ಚೆ ಇನ್ನೂ ನಡೆಯುತ್ತಿದೆ. ಜನಗಣತಿ ಆಧಾರವು ರಾಜಕೀಯ ವಿಭಜನೆಗೆ ಕಾರಣವಾಗಿದೆ. ಇದು ದೊಡ್ಡ ಪ್ರಮಾಣದ ಸಂಖ್ಯೆಯಾಗಿದೆ ಎಂದು ಹೇಳಲಾಗಿದ್ದರೂ ಮಂಡಲ್ ಆಯೋಗ ಮತ್ತು ರಾಷ್ಟ್ರೀಯ ಮಾದರಿ ಸರ್ವೇಕ್ಷಣೆಯ ಅಂಕಿಅಂಶಗಳಿಗಿಂತ ಕೆಳಗಿದೆ. ಅಂಕಿಅಂಶಗಳನ್ನು ಸುಳ್ಳು ಸಂಖ್ಯಾ ಬಲದಿಂದ ಸಿದ್ದಪಡಿಸಲಾಗಿದೆ ಎಂದು ಮಂಡಲ್ ಆಯೋಗವನ್ನು ಟೀಕಿಸಲಾಯಿತು. ರಾಷ್ಟ್ರೀಯ ಸರ್ವೇಕ್ಷಣೆ ಪ್ರಕಾರ ಕೆಲವು ಪ್ರದೇಶಗಳಲ್ಲಿ ಆಇ ಯು ಮುಂದುವರಿದ ಜಾತಿಗಳ ಸಂಖ್ಯಾಬಲವನ್ನು ಮೀರಿಸುತ್ತದೆ. ಹೀಗಾಗಿ, 2005, ಆ.12ರಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಪೀಠ ಒಂದು ಪ್ರಕರಣದ ವಿಚಾರಣೆ ನಡೆಸಿ, ಮಹಾರಾಷ್ಟ್ರ ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತರಹಿತ-ಅನುದಾನರಹಿತ ವಿದ್ಯಾಸಂಸ್ಥೆಗಳಲ್ಲಿ ಮೀಸಲಾತಿ ನೀತಿಯನ್ನು ಅನುಷ್ಠಾನಗೊಳಿಸಬೇಕಾಗಿಲ್ಲ ಎಂದು ತೀರ್ಪಿತ್ತಿತ್ತು. ಇದರಲ್ಲಿ ವೃತ್ತಿಪರ ಕಾಲೇಜುಗಳೂ ಸೇರಿವೆ.
2005ರಲ್ಲಿ 93 ನೆಯ ಸಾಂವಿಧಾನಿಕ ತಿದ್ದುಪಡಿ ತಂದು ಇನ್ನಿತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿತಲ್ಲದೇ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಅದನ್ನು ಜಾರಿಗೊಳಿಸಬೇಕೆಂದು ಸೂಚಿಸಿತು. 2007ರಲ್ಲಿ ಸರ್ವೋಚ್ಚ ನ್ಯಾಯಾಲವು ಕೇಂದ್ರ ಸರಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿನ ಆಇ ಮೀಸಲಾತಿಗೆ ತಡೆ ನೀಡಿತು. 2008ರಲ್ಲಿ ಸರಕಾರದ ನಿಧಿ ಸಹಾಯದಿಂದ ನಡೆಯುತ್ತಿರುವ ಸಂಸ್ಥೆಗಳಲ್ಲಿ 27% ರಷ್ಟು ಆಇ ಮೀಸಲಾತಿ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಆದರೆ ಸ್ಪಷ್ಟವಾಗಿ ಕೆನೆ ಪದರನ್ನುಈ ಮೀಸಲಾತಿ ಪರಿಧಿಯಿಂದ ಹೊರಗಿಡಬೇಕೆಂದು ಸೂಚಿಸಿತು. ಕೆನೆ ಪದರನ್ನು ಗುರುತಿಸಲು ಹಲವಾರು ಮಾನದಂಡಗಳನ್ನು ಶಿಫಾರಸು ಮಾಡಲಾಯಿತು.

ಮಿಲ್ಲರ್ ಸಮಿತಿಯ ಇತಿಹಾಸ: ಮೀಸಲಾತಿ ಕುರಿತಂತೆ ಮಿಲ್ಲರ್ ಸಮಿತಿ ನೀಡಿದ ಶಿಫಾರಸುಗಳಿಗೆ ಈಗ ನೂರನೇ ವರ್ಷ. ಅಂದಿನ ಮೈಸೂರು ಸಂಸ್ಥಾನವು ಹಿಂದುಳಿದ ವರ್ಗಗಳವರ ಒತ್ತಡದ ಮೇರೆಗೆ 1918ರಲ್ಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ಆರು ಜನರ ಸಮಿತಿಯನ್ನು ನೇಮಿಸಿತ್ತು. ಸರಕಾರಿ ರಂಗದಲ್ಲಿ ಹಿಂದುಳಿದ ವರ್ಗಗಳ ಸಮರ್ಪಕ ಪ್ರಾತಿನಿಧ್ಯಕ್ಕೆ ಶಿಫಾರಸು, ಅದರ ಭಾಗವಾಗಿ ಮೀಸಲಾತಿ ನಿಗದಿಮಾಡುವುದು ಈ ಸಮಿತಿಗೆ ನೀಡಿದ ನಿಬಂಧನೆಗಳು. ಸಮಿತಿಯು 1919 ರಲ್ಲಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿತು. ಈ ಅವಧಿಯಲ್ಲಿ ಎಂ. ವಿಶ್ವೇಶ್ವರಯ್ಯನವರು ಮೈಸೂರು ದಿವಾನರಾಗಿದ್ದರು. ಮೀಸಲಾತಿಯ ಬಗ್ಗೆ ತಮ್ಮದೇ ಆದ ನಿಲುವು ಹೊಂದಿದ್ದರು. ಹಿಂದುಳಿದ ವರ್ಗದವರನ್ನು ಉತ್ತಮ ಶಿಕ್ಷಣದ ಮೂಲಕ ಹೆಚ್ಚು ಅರ್ಹರನ್ನಾಗಿ ಮಾಡಿ ಸರಕಾರಿ ಸೇವೆಗಳಲ್ಲಿ ನೇಮಿಸುವುದರಿಂದ ದಕ್ಷತೆ ಹೆಚ್ಚುತ್ತದೆ ಹಾಗೂ ಮಿತವಾದ ಮೀಸಲಾತಿಯ ಮೂಲಕ ಹಂತಹಂತವಾಗಿ ಇದನ್ನು ಸಾಧಿಸಿದರೆ ಇತರರಲ್ಲಿ ಅತೃಪ್ತಿ ಕಡಿಮೆ ಪ್ರಮಾಣದಲ್ಲುಳಿದು ಸಾಮರಸ್ಯ ಸಾಧನೆಯೂ ಆಗುತ್ತದೆ ಎಂಬುದು ಅವರ ಖಚಿತ ನಿಲುವಾಗಿತ್ತು.

1918 ರಲ್ಲಿ ರಚಿತವಾದ ಈ ಸಮಿತಿ 1919 ರಲ್ಲಿ ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಸರಕಾರಕ್ಕೆ ವರದಿ ಸಲ್ಲಿಸಿತು. ಲೆಸ್ಲಿ ಮಿಲ್ಲರ್ ಸಮಿತಿ ನೀಡಿದ ವರದಿಯಲ್ಲಿ ಮುಂದಿನ 7 ವರ್ಷಗಳಲ್ಲಿ ಸರಕಾರದ ಶೇ. 50 ರಷ್ಟು ಉನ್ನತ ಹುದ್ದೆಗಳು ಮತ್ತು ಮೂರನೆಯ ಭಾಗ ಕೆಳದರ್ಜೆಯ ಹುದ್ದೆಗಳು ಹಿಂದುಳಿದ ವರ್ಗಗಳಿಗೆ ಪ್ರಾಪ್ತವಾಗಬೇಕೆಂಬ ಅಂಶ ಅಡಕವಾಗಿತ್ತು. ಶಿಕ್ಷಣದಲ್ಲಿ ಪ್ರವೇಶ ಮೀಸಲಾತಿ ಮತ್ತು ವಿಶೇಷ ವಿದ್ಯಾರ್ಥಿವೇತನಗಳು ಈ ವರ್ಗಕ್ಕೆ ಲಭ್ಯವಾಗಬೇಕೆಂಬ ಸಲಹೆಗಳಿದ್ದವು.
ಪ್ರಸ್ತುತ ಕೇಂದ್ರ ಸರಕಾರ, ಸಮಾಜದಲ್ಲಿ ಮೇಲ್ವರ್ಗ,ಮೇಲ್ಜಾತಿ ಎಂದು ಕರೆಯಿಸಿಕೊಂಡವರಲ್ಲೂ ಕೆಲವರು ಆರ್ಥಿಕವಾಗಿ ಹಿಂದುಳಿದು, ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಂಥವರಿಗೂ ಸಹ ಸರಕಾರದ ವಿವಿಧ ರಂಗಗಳಲ್ಲಿ ಮೀಸಲಾತಿ ದೊರಕಲಿ ಎಂಬ ಸದುದ್ದೇಶದ ಶೇ.10 ಮೀಸಲಾತಿಯ ಬಿಲ್ ನ್ನು ಇತ್ತೀಚೆಗೆ ಲೋಕಸಭೆಯಲ್ಲಿ ಪಾಸ್ ಮಾಡಿ ಅದಕ್ಕೀಗ ಒಪ್ಪಿಗೆಯೂ ಸಿಕ್ಕು, ಬಹು ಚರ್ಚೆಯ ನಂತರ ಅಂಗೀಕಾರಗೊಳ್ಳಲು ಸಜ್ಜಾಗಿರುವುದು ದೇಶದ ಪ್ರಗತಿಯ ದೃಷ್ಟಿಯಿಂದ ಉತ್ತಮವಾಗಿದೆ.ದುದು.ಇದಕ್ಕೆ ಪರ-ವಿರೋಧಗಳೂ ಸಹ ವ್ಯಕ್ತವಾಗುತ್ತಿವೆ. ಅದೇನೇ ಇರಲಿ, ಕೆಳಮಟ್ಟಕ್ಕೆ ನೂಕಲ್ಪಟ್ಟ ಅಂದರೆ ಸಮಾಜದಲ್ಲಿ ಅವಜ್ಞೆಗೆ ಒಳಗಾದ ಎಲ್ಲರಿಗೂ ಸಾಮಾಜಿಕ, ಶೈಕ್ಷಣಿಕ ಸವಲತ್ತುಗಳು ಸಿಕ್ಕು ಅವರೆಲ್ಲ ಮುಖ್ಯವಾಹಿನಿಗೆ ಬಂದು ಘನತೆಯ ಜೀವನ ಸಾಗಿಸುವಂತಾಗಲಿ ಎಂಬುದೇ ಈ ಮೀಸಲಾತಿಯ ಗುರಿ ಮತ್ತು ಉದ್ದೇಶವಾಗಿತ್ತು ಎಂಬುದನ್ನು ಮರೆಯುವಂತಿಲ್ಲ.
==

Tags

Related Articles

Leave a Reply

Your email address will not be published. Required fields are marked *

Language
Close