About Us Advertise with us Be a Reporter E-Paper

Breaking NewsUncategorizedಪ್ರಚಲಿತರಾಜ್ಯ

ಹೆಬ್ಬಾಳ್ಕರ್ ನೀಚ ರಾಜಕಾರಣ ಮಾಡುತ್ತಿದ್ದಾರೆ: ರಮೇಶ ಜಾರಕಿಹೊಳಿ

minister ramesh jarakiholi lakshmi hebbalkar belagavi help

ಬೆಳಗಾವಿ: ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದು ನಾನು. ಅವರಿಂದ ಜಾರಕಿಹೊಳಿ ಕುಟುಂಬಕ್ಕೆ 90 ಕೋಟಿ ಹಣ ಸಾಲ ಪಡೆಯುವಷ್ಟು ಆ ಮಟ್ಟಕ್ಕೆ ನಾವು ಇಳಿದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ  ಪತ್ರಕರ್ತರೊಂದಿಗೆ ಮಾತನಾಡಿ, ಲಕ್ಷ್ಮೀ ಹೆಬ್ಬಾಳ್ಕರ 90 ಕೋಟಿ ರು. ನೀಡಿರುವ ಸುದ್ದಿ ಹರಿದಾಡುತ್ತಿರುವುದು ದಿಗಿಲು ಬಡಿದಿದೆ. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಿದ್ದು ನನ್ನ ಮನಸಿಗೆ ನೋವಾಗಿದೆ. ಸತ್ಯಾಸತ್ಯತೆ ಅರಿತು ಸುದ್ದಿ ಬಿತ್ತರಿಸಬೇಕಿತ್ತು. ಹೆಬ್ಬಾಳ್ಕರ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಮಟ್ಟಕ್ಕೆ ಅವರು ಇಳಿಯುತ್ತಾರೆ ಎಂದು ಊಹಿಸಿರಲಿಲ್ಲ. ಸತೀಶ ಜಾರಕಿಹೊಳಿ ಅವರೇ ಹೆಬ್ಬಾಳ್ಕರ್‌ಗೆ ಜಿಲ್ಲಾಧ್ಯಕ್ಷ ಮಾಡಿದರು. ಆಗ ಜಿಲ್ಲಾಧ್ಯಕ್ಷ ಮಾಡಲು ನಾನು ಒಪ್ಪಿರಲಿಲ್ಲ. ಆಕೆಗೆ ಜಾರಕಿಹೊಳಿ ಕುಟುಂಬದವರಿಗೆ ಅಷ್ಟೊಂದು ಹಣ ಸಾಲ ಕೊಡುತ್ತಾರೆಯೇ ಎಂದರು.

ಉಪಕಾರ ಮಾಡಿದ್ದು ಯಾರ ಮುಂದೆಯೂ ಹೇಳಬಾರದು. 2007-08 ರಲ್ಲಿ ಹೆಬ್ಬಾಳ್ಕರ್ ಗೆಗಾಡ್ ಪಾಧರ್ ಯಾರ ಇದ್ದರೋ ಗೋತ್ತಿಲ್ಲ. ಅವರ ತಂದೆಗೆ ಕ್ಯಾನ್ಸರ್ ಆದಾಗ ಹಣ ನೀಡಿದ್ದು ನಾನೇ. ಚನ್ನರಾಜ ಹಟ್ಟಿಹೊಳಿ ಹೈದ್ರಾಬಾದ್ ವಿವಿಯಿಂದ ಹಣ ಇಲ್ಲದೆ ಹೊರ ಹಾಕಿದ್ದರು. ಆಗ ಸಹಾಯ ಮಾಡಿದ್ದು ನಾನು. ಹೆಬ್ಬಾಳ್ಕರ್ ಪುತ್ರನ ಶೈಕ್ಷಣಿಕಕ್ಕೆ ಸಹಾಯಮಾಡಿದ್ದೇನೆ ಎಂದು ಹೇಳಿದರು.

ಖಾನಾಪುರ ತಮ್ಮ ಗಂಡನ ಮನೆಯ ದಾಳಿಯಾಗಬೇಕಿತ್ತು‌. ಅವಾಗಲೂ ನಾನು ಸಹಾಯ ಮಾಡಿದ್ದೆ. ಬೆಳಗಾವಿ ಜಿಲ್ಲೆಯಲ್ಲಿ ಬೊಮ್ಮಾಯಿ, ಉಮೇಶ ಕತ್ತಿ ರಾಜಕಾರಣದಲ್ಲಿ ಯಾರು ಇಷ್ಟೊಂದು ದ್ವೇಷದ ರಾಜಕಾರಣ ಮಾಡಿಲ್ಲ. ಹೆಬ್ಬಾಳ್ಕರ್ ಇಷ್ಟೊಂದು ನೀಚ ರಾಜಕಾರಣ ಮಾಡುತ್ತಿದ್ದಾರೆ. ಆ ಯಮ್ಮಾಗೆ ಕಾನೂನಿನ ಅರಿವಿಲ್ಲ. ಆಕೆ ಜಾರಕಿಹೊಳಿ ಕುಟುಂಬಕ್ಕೆ ಹಣ ನೀಡುವ ಅವಶ್ಯವಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯನ ಸರಕಾರದಲ್ಲಿ ಹೆಬ್ಬಾಳ್ಕರ್ ಗೆ ದೆಹಲಿ ತೋರಿಸಿದ್ದು ನಾನು. ನನಗ್ಯಾರು ಮಂತ್ರಿ ಮಾಡಿದ್ದಾರೆ ಎಂದು ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲರಿಗೆ ಕೇಳಿ. ಡಿಕೆಶಿವಕುಮಾರ ನನ್ನ ಗೆಳೆಯ ಅವನಿಗೆ ಆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡುವಂತೆ  ನಾನೇ ಸಹಾಯ ಮಾಡಿದ್ದೆ. ಹೈಕಮಾಂಡ್ ಬೆಳಗಾವಿ ರಾಜಕಾರಣವನ್ನು ಹದ್ದಬಸ್ತಿನಲ್ಲಿ ಇಡದಿದ್ದರೆ  ಜಾರಕಿಹೊಳಿ ಸಹೋದರರು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೈಕಮಾಂಡ್ ಗೆ ಎಚ್ಚರಿಕೆ‌ ರವಾನಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close