About Us Advertise with us Be a Reporter E-Paper

Breaking Newsದೇಶ
Trending

ಅಪ್ರಾಪ್ತೆ ಮೇಲೆ ಮನೆ ಕೆಲಸದವರಿಂದಲೇ ಅತ್ಯಾಚಾರ

ಮೀರತ್​: ಅಪ್ರಾಪ್ತೆ ಮೇಲೆ ಇಬ್ಬರು ಮನೆಕೆಲಸದವರು ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆ ಹಾಪುರ್​ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿಯ 10 ವರ್ಷದ ಸಹೋದರ ಈ ಪ್ರಕರಣದ ಏಕೈಕ ಸಾಕ್ಷಿಯಾಗಿದ್ದು, ಅವನ ಮೇಲೆಯೂ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮೊದಲಿಗೆ ದರೋಡೆಗೆ ಯತ್ನಿಸಿ ಬಾಲಕಿಯನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಸಂತ್ರಸ್ತೆಯ ಸೋದರ ಮಾಹಿತಿ ನೀಡಿರುವ ಪ್ರಕಾರ, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.  ಘಟನೆ ಸಂಬಂಧ ಪೊಲೀಸರು ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ.

ಆರೋಪಿಗಳಿಬ್ಬರೂ ಬಾಲಕಿ ಮನೆಯಲ್ಲಿ ಹಲವು ವರ್ಷಗಳಿಂದ ಕೆಲಸಕ್ಕೆ ಇದ್ದರು ಎಂದು ತಿಳಿದು ಬಂದಿದೆ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಆಕೆಯ ತಮ್ಮನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಇದನ್ನು ದರೋಡೆ ಪ್ರಕರಣ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಬಾಲಕಿಯ ಮೃತದೇಹ ಅರೆಬೆತ್ತಲೆ ಸ್ಥಿತಿಯಲ್ಲಿ ಗೋಡೌನ್‍ನಲ್ಲಿ ಪತ್ತೆಯಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close