About Us Advertise with us Be a Reporter E-Paper

Breaking Newsವಿದೇಶ
Trending

ಲಂಡನ್ ಸಂಸತ್ ಬಳಿ ತಪ್ಪಿದ ಭಾರಿ ಅನಾಹುತ..!

ಲಂಡನ್: ಬ್ಯಾರಿಕೇಡ್‍ಗಳನ್ನು ತಳ್ಳಿ ಏಕಾಏಕಿ ಕಾರು ಚಲಾಯಿಸಿ, ಹಲವು ಮಂದಿ ಪಾದಚಾರಿಗಳು ಗಾಯಗೊಂಡಿರುವ ಘಟನೆ ಬ್ರಿಟನ್ ಪಾರ್ಲಿಮೆಂಟ್ ಬಳಿ ನಡೆದಿದೆ.

ಚಾಲಕನೊಬ್ಬ ಅಡ್ಡಾದಿಡ್ಡಿ ಕಾರು ನುಗ್ಗಿಸಿದ್ದರಿಂದ ಅನಾಹುತ ಸಂಭವಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಕಾರು ಡ್ರೈವರ್ ನನ್ನು ಬಂಧಿಸಿದ್ದಾರೆ. ಇನ್ನು ‘ಇದು ಭಯೋತ್ಪಾದನಾ ಕೃತ್ಯ ಎಂದು ಹೇಳಲಾಗುವುದಿಲ್ಲ. ಚಾಲಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.

2017ರ ಮಾರ್ಚ್‍ನಲ್ಲಿ ಲಂಡನ್‍ನ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ಬಳಿ ಈ ರೀತಿಯಲ್ಲೇ ಭಯೋತ್ಪಾದನಾ ದಾಳಿ ನಡೆದಿತ್ತು. ಹೀಗಾಗಿ ಲಂಡನ್ ಪಾರ್ಲಿಮೆಂಟ್ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close