ಮಿಷನ್ 150 ತಲುಪುವುದೇ ನಮ್ಮ ಗುರಿ

Posted In : ಸಂಗಮ, ಸಂಪುಟ

ಸಂದರ್ಶನ: ರತ್ನಾ ಎಸ್.ಗೌಡ

ವಿಧಾನಸಭಾ ಚುನಾವಣೆ ತಯಾರಿ ಚುರುಕಾಗಿ ನಡೆಯುತ್ತಿದೆ. ಬಿಜೆಪಿಯು ಕಳೆದ ಒಂದು ವರ್ಷದಿಂದಲೇ ತಯಾರಿ . ಯಾವುದೇ ಒಂದು ಪಕ್ಷ ಬಲಿಷ್ಠವಾಗ ಬೇಕಿದ್ದರೆ ಅದು ಬೂತ್‌ಮಟ್ಟದಿಂದ ಮಾತ್ರ ಸಾಧ್ಯ. ಹೀಗಾಗಿ ಬಿಜೆಪಿಯನ್ನು ಸಹ ಬೂತ್ ಮಟ್ಟ ದಿಂದಲೇ ಭದ್ರಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹಿರಿಯ ನಾಯಕ ಗೋವಿಂದ ಕಾರಜೋಳ ವಿಶ್ವವಾಣಿಗೆ ನೀಡಿದ ಹೇಳಿದ್ದಾರೆ.

ಚುನಾವಣಾ ತಯಾರಿ ಹೇಗೆ ಸಾಗಿದೆ?
ಈಗಾಗಲೇ ಫೆಬ್ರವರಿ ಮಧ್ಯಭಾಗದಲ್ಲಿದ್ದೇವೆ. ಇನ್ನು ಕೆಲವೇ ತಿಂಗಳಲ್ಲಿ ಚುನಾ ವಣೆ ಬರಲಿದೆ. ಚುನಾವಣೆ ಬಂದಾಗ ಮಾತ್ರ ಜನ ಗಳ ಹತ್ತಿರ ಹೋಗುವುದು ಬಿಜೆಪಿಯ ಗುಣವಲ್ಲ. ಬಿಜೆಪಿ ಒಂದು ವರ್ಷದಿಂದಲೇ ಚುನಾವಣಾ ತಯಾರಿ ನಡೆಸಿದೆ. ಜನರ ಸಮಸ್ಯೆಯನ್ನು ಮೊದಲಿನಿಂದ ಆಲಿಸುತ್ತ ಬರುವ ಕೆಲಸ ಮಾಡಿದ್ದೇವೆ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ನವ ಕರ್ನಾಟಕ ಪರಿವರ್ತನಾ ರ್ಯಾಲಿ ಯಶಸ್ವಿಯಾಗಿದೆ. ಅಲ್ಲದೆ, ಆಯಾ ಕ್ಷೇತ್ರಗಳಲ್ಲಿ ಮುಖಂಡರು ಕಾರ್ಯಕರ್ತ ರನ್ನು ಬೂಸ್ಟ್ ಮಾಡುವ ಕೆಲಸ ಮಾಡು ತ್ತಿದ್ದಾರೆ. ಸಮಾವೇಶ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಈಗಲೂ ಮಾಡು ತ್ತಿದ್ದೇವೆ. ನಮ್ಮ ಈ ಚುಟುವಟಿಕೆ ಗಮನಿ ಸಿರುವ ಜನರಿಗೂ ಸಹ ಬಿಜೆಪಿಯ ಮೇಲೆ ಒಲವು ಮೂಡಿದೆ. ಅದಕ್ಕಿಂತ ಹೆಚ್ಚಾಗಿ ರಾಜ್ಯ ಸರಕಾರದ ಮೇಲೆ ಜನರಿಗೆ ಬೇಸರ ವಿದ್ದು, ಈ ಸರಕಾರವನ್ನು ತೊಲಗಿಸಬೇಕು ಎಂದು ಪಣತೊಟ್ಟಿದ್ದಾರೆ.

ಅಮಿತ್ ಶಾ ಅವರು ನೀಡಿದ ಸೂತ್ರದಂತೆ ಚುನಾವಣಾ ಕೆಲಸ ನಡೆಯುತ್ತಿದೆಯಾ?
ನಮ್ಮ ರಾಷ್ಟ್ರೀಯ ಅಧ್ಯಕ್ಷರು ನೀಡಿರುವ ಸೂತ್ರ ಎಂದಿಗೂ ಸಾಧ್ಯವಿಲ್ಲ. ಚಾಣಕ್ಷ್ಯ ಎಂದು ಈಗಾಗಲೇ ಪ್ರಸಿದ್ಧರಾಗಿರುವ ಅವರು ಕರ್ನಾಟಕ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂದು ಪಕ್ಕಾ ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಮ್ಮ ರಾಷ್ಟ್ರದೊಂದಿಗೆ ಮುಂದುವರೆದ ರಾಷ್ಟ್ರಗಳು ಸ್ನೇಹದ ಹಸ್ತ ಚಾಚಿವೆ. ಇದಕ್ಕೆಲ್ಲಾ ಮೋದಿ ಅವರ ಶ್ರಮವೇ ಕಾರಣ. ಜನರಿಗೂ ಮೋದಿ ಅವರ ಮೇಲೆ ಅಪಾರ ಪ್ರೀತಿ, ಅಭಿಮಾನವಿದೆ. ರಾಜ್ಯದಲ್ಲೂ ಬಿಜೆಪಿ ಸರಕಾರ ಬಂದರೆ ಕೇಂದ್ರದಿಂದ ಸುಲಭವಾಗಿ ಅನುದಾನ ಸಾಧ್ಯವಾಗುತ್ತದೆ.

ಬಿಜೆಪಿಯವರು ಸ್ಲಂ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸಿಗರು ಆರೋಪಿಸುತ್ತಿದ್ದಾರಲ್ಲ?
ಸ್ಲಂ ರಾಜಕೀಯ ಮಾಡುತ್ತಿರುವುದು ಬಹುಶಃ ಕಾಂಗ್ರೆಸ್‌ನವರೇ ಇರಬೇಕು. ಏಕೆಂದರೆ ಕಳೆದ ನಾಲ್ಕುಮುಕ್ಕಾಲು ವರ್ಷದಿಂದ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಸ್ಲಂ ಜನರಿಗೆ ಸಣ್ಣ ಅನುಕೂಲವನ್ನೂ ಮಾಡಿಕೊಟ್ಟಿಲ್ಲ. ಈಗಲೂ ಸ್ಲಂ ನಿವಾಸಿಗಳು ಮೂಲ ಸೌಕರ್ಯವಿಲ್ಲದೇ ಬಳಲುತ್ತಿದ್ದಾರೆ. ಕುಡಿಯುವ ನೀರು, ವಿದ್ಯುತ್, ರಸ್ತೆ, ಮಕ್ಕಳಿಗೆ ಶಿಕ್ಷಣ, ಪೌಷ್ಟಿಕ ಆಹಾರ ಕೂಡ ಸ್ಲಂ ನಿವಾಸಿಗಳಿಗೆ ಸಿಗುತ್ತಿಲ್ಲ. ಇವರು ಸ್ವಂತ ಮನೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನಾವು ಅವರ ಕಷ್ಟ ಆಲಿಸುವ ಉದ್ದೇಶದಿಂದ ಕೊಳಗೇರಿ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದ್ದೇವೆಯೇ ಹೊರತು ರಾಜಕಾರಣ ಮಾಡಲು ಅಲ್ಲ. ಈ ಸರಕಾರ ಕೊಳಗೇರಿ ನಿವಾಸಿ ಗಳಿಗೆ ಯಾವ ಸೌಲಭ್ಯವೂ ನೀಡುವುದಿಲ್ಲ ಎಂಬುದು ನಮಗೂ ಗೊತ್ತಿದೆ. ಅದಕ್ಕಾಗಿ ನಾವುಗಳೇ ಕೊಳಗೇರಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಸರ್ವೆ ಮಾಡಿಸಿ, ವರದಿ ಸಿದ್ಧಪಡಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಅವರಿಗೆಲ್ಲ ಮೂಲಸೌಕರ್ಯ ನೀಡುವ ಕೆಲಸ ಮಾಡಲಾಗುತ್ತದೆ. ಚುನಾವಣಾ ಪ್ರಣಾಳಿಕೆಯಲ್ಲೂ ಈ ವಿಷಯ ಸೇರಿಸುವ ಚಿಂತನೆ ಇದೆ.

ಬಿಜೆಪಿಯ ಗುರಿಯಂತೆ ಮಿಷನ್ 150 ತಲುಪಲಿದ್ದೀರಾ?
ಬಿಜೆಪಿಯ ಗುರಿಯೇ ಮಿಷನ್ 150. ನಮ್ಮ ಅಧ್ಯಕ್ಷರು 150 ಟಾರ್ಗೆಟ್ ನೀಡಿದ್ದಾರೆ. ಅಷ್ಟು ಕ್ಷೇತ್ರಗಳನ್ನು ಗೆಲ್ಲುವ ಮಾರ್ಗವನ್ನೂ ತೋರಿಸಿಕೊಟ್ಟಿದ್ದಾರೆ. ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಈಗಾಗಲೇ ಇಡೀ ರಾಜ್ಯದ ಜನರನ್ನು ನಾವು ತಲುಪಿಯಾಗಿದೆ. ಈಗ ಮತ್ತೆ ಮನೆ ಮನೆಗೂ ಹೋಗುವ, ಮತ್ತೆ ರಾಜ್ಯದ ಜನರನ್ನು ಭೇಟಿ ಮಾಡುವ ಕೆಲಸ ಮಾಡುತ್ತಲೇ ಇರುತ್ತೇವೆ. 150ರ ಗುರಿ ತಲುಪುವ ಮೂಲಕ ನಮ್ಮ ಸರಕಾರವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲಿದ್ದೇವೆ.

ಬಿಜೆಪಿ ಹಿಂದೂ ಅಜೆಂಡಾ ಮೇಲೆ ಚುನಾವಣೆ ಎದುರಿಸುತ್ತಿದೆ ಎಂಬ ಮಾತಿದೆಯಲ್ಲ?
ನಾವು ಹಿಂದೂಗಳು. ಅದೇ ಅಜೆಂಡಾ ಇಟ್ಟುಕೊಂಡು ಚುನಾವಣೆಗೆ ಹೋಗಬೇಕಿಲ್ಲ. ನಮ್ಮ ಅಜೆಂಡಾ ಏನಿದ್ದರು ಅಭಿವೃದ್ಧಿ ಅಷ್ಟೆ. ಅಭಿವೃದ್ಧಿಯಲ್ಲಿ ಎಲ್ಲ ಧರ್ಮಗಳು ಬರಲಿವೆ. ಕಾಂಗ್ರೆಸ್‌ಗೆ ಬಿಜೆಪಿಯನ್ನು ತೆಗಳುವುದು ಬಿಟ್ಟರೆ ಬೇರೆ ಕೆಲಸವಿಲ್ಲ. ನಮ್ಮ ವಿರುದ್ಧ ಟೀಕೆ ಮಾಡಲು ಅವರಿಗೆ ಯಾವ ವಿಷಯವೂ ಸಿಗುತ್ತಿಲ್ಲ. ಅದಕ್ಕಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಇರುವುದು ಕೆಲವೇ ತಿಂಗಳು. ಅವರು ಮಾತನಾಡಿಕೊಳ್ಳಲಿ. ನಂತರ ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಮಾತನಾಡಲಿದೆ.

Leave a Reply

Your email address will not be published. Required fields are marked *

seventeen + 14 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top