About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಶಿರೂರು ಸ್ವಾಮಿಗಳ ಮೇಲಿತ್ತಾ ದೈವದ ಶಾಪ?

ಉಡುಪಿ: ನಿನ್ನೆ ವಿಧಿವಶರಾದ ಉಡುಪಯ ಶಿರೂರು ಮಠದ ಸ್ವಾಮಿಯ ಸಾವಿಗೆ ಕೊಡಮಣಿತ್ತಾಯ ದೈವದ ಶಾಪ ಕಾರಣ ಎಂದು ಸ್ಥಳಿಯರು ವ್ಯಾಖ್ಯಾನಿಸಿದ್ದರು. ಈ ವರ್ಷ ಜನವರಿಯಲ್ಲಿ ಪಡುಬಿದ್ರಿಯ ಬಾಲು ಪೂಜಾರಿ ಮನೆತನದಲ್ಲಿ ನಡೆದಿದ್ದ ಧರ್ಮ ನೇಮೋತ್ಸವದಲ್ಲಿ ಭಾಗವಹಿಸಿದ್ದ ಸ್ವಾಮಿಗಳು ದೈವದೊಂದಿಗೆ ವರ್ತಿಸಿದ ರೀತಿಯಿಂದ ದೈವಕ್ಕೆ ನೋವಾಗಿದ್ದು, ಇದೂ ಕೂಡ ಸ್ವಾಮಿಗಳ ಸಾವಿಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ನೇಮೋತ್ಸವ ಸಂದರ್ಭ ಕೊಡಮಣಿತ್ತಾಯ ದೈವ ವೇಷಧಾರಿಗೆ, ‘ನಾನೇ ಎಲ್ಲ, ನೀನು ಅಲ್ಲ’ ಭಾವನೆಯನ್ನು ಕೈಸನ್ನೆ ಮೂಲಕ   ಸ್ವಾಮೀಜಿ ತೋರಿಸಿದ್ದರು. ಇದಕ್ಕೆ ಪ್ರತಿಯಾಗಿಇದರಿಂದಾಗಿ ಕೊಡಮಣಿತ್ತಾಯ ದೈವ ‘ನೀನು ಅಲ್ಲ, ನಾನು’ ಅನ್ನೋ ಸೂಚನೆ ನೀಡಿತ್ತು. ಅಲ್ಲದೇ ಇದರ ಪರಿಣಾಮ ಮುಂದೆ ತೊಂದರೆ ಎದುರಿಸಬೇಕಾದೀತು ಎಂದು ಸೂಚಿಸಿತ್ತು ಎಂದು ಉಡುಪಿಯಲ್ಲಿ ಪಡುಬಿದ್ರಿಯ ಕೊಡಮಣಿತ್ತಾಯ ದೈವಸ್ಥಾನದ ಅರ್ಚಕ ಕೇಶವ ಪೂಜಾರಿ ಹೇಳಿದ್ದಾರೆ.
ಧರ್ಮನೇಮೋತ್ಸವದಲ್ಲಿ ಭಾಗವಹಿಸಿದ್ದ ಸ್ವಾಮೀಜಿ ದೈವ ಸನ್ಮಾನಿಸುವ ಸಂದರ್ಭ ದೈವ ಪಾತ್ರಧಾರಿಯ  ಮನನೋಯಿಸಿದ್ದರು. ಇದರಿಂದ ಭಕ್ತರು ಹಾಗೂ ಕುಟುಂಬಿಕರು ಅಸಮಾಧಾನಗೊಂಡಿದ್ದರು. ಸ್ವಾಮೀಜಿ ಯಾಕೆ ಹೀಗೆ ಮಾಡಿದರು ಅನ್ನೋ ಸಂಶಯ ವ್ಯಕ್ತಪಡಿಸಿದ್ದೆವು ಎಂದು ಅವರು ಹೇಳಿದ್ದಾರೆ.
Tags

Related Articles

Leave a Reply

Your email address will not be published. Required fields are marked *

Language
Close