About Us Advertise with us Be a Reporter E-Paper

ವಿವಾಹ್

ಕಾಂಗ್ರೆಸ್‌ ಯುವ ನಾಯಕ ಮಿಥುನ್ ರೈ ನಿಶ್ಚಿತಾರ್ಥ

ಮಂಗಳೂರು: ಯುವ ಕಾಂಗ್ರೆಸ್ ಕಣ್ಮಣಿ ಮಿಥುನ್ ರೈ ದಾಂಪತ್ಯ ಜೀವನಕ್ಕೆ ಶೀಘ್ರದಲ್ಲಿಯೇ ಕಾಲಿರಿಸಲಿದ್ದಾರೆ.

ಮಂಗಳೂರಿನ ಶರಣ್ಯ ಶೆಟ್ಟಿ ಜತೆ ಭಾನುವಾರ ಮನೆಯಲ್ಲಿ ಹಿರಿಯರ ಸಮ್ಮುಖದಲ್ಲಿ ತಾಂಬೂಲ ವಿನಿಮಯ ನಡೆಯಿತು. ಕೇವಲ ಕುಟುಂಬದ 50 ಮಂದಿ ಮಾತ್ರ ಶುಭ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಶರಣ್ಯ ಶೆಟ್ಟಿ ಎಂಕಾಂ ಪದವೀಧರೆ ಮಧ್ಯಮ ಕುಟುಂಬದ ಹೆಣ್ಣುಮಗಳು. ಮಿಥುನ್ ರೈಗೆ ಅನೇಕ ಅಗರ್ಭ ಶ್ರೀಮಂತ ಮನೆತನದ ಸಂಬಂಧಗಳು ಬಂದಿದ್ದವು. ಆದರೆ ತನಗೆ ಒಪ್ಪುವ ಸುಶಿಕ್ಷಿತ ಹುಡುಗಿಯನ್ನೇ ವರಿಸಲು ನಿರ್ಧರಿಸಿದ್ದಾರೆ. ಇದು ಸಂಪೂರ್ಣ ಅರೇಂಜ್ ಮ್ಯಾರೇಜ್. ಮದುವೆ ಮಾರ್ಚ್ ನಲ್ಲಿ ನಡೆಯಲಿದೆ.

ಯುವ ನಾಯಕ: ಮೂಡುಬಿದರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಿಥುನ್ ರೈ ಯುವ ನಾಯಕ. ಟಿಕೆಟ್ ಕೈ ತಪ್ಪಿದ ಬಳಿಕ ದೆಹಲಿಯಿಂದ ಮಂಗಳೂರಿಗೆ ಬಂದಿಳಿದ ಮಿಥುನ್ ರೈಯನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ 5 ಸಾವಿರಕ್ಕೂ ಹೆಚ್ಚು  ಮಂದಿಗೆ ಆಗಮಿಸಿದ್ದು ಇತಿಹಾಸ.

ದೈವ ಭಕ್ತ: ದೀಪಾವಳಿ ಹಬ್ಬದಂದು ಗೋವುಗಳನ್ನು ಬಡ ಬಗ್ಗರಿಗೆ ದಾನ ಮಾಡುವ ಮಿಥುನ್ ರೈ ಅಪ್ಪಟ ದೈವ ಭಕ್ತ. ಇದರ ಜತೆಯಲ್ಲಿ ನಿಷ್ಠ ಕಾಂಗ್ರೆಸಿಗ. ಕಾಂಗ್ರೆಸ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಯುವ ನಾಯಕರ ಪಟ್ಟಿಯಲ್ಲಿ ಮಿಥುನ್ ರೈಗೆ ಅಗ್ರ ಸ್ಥಾನ.

Tags

Related Articles

Leave a Reply

Your email address will not be published. Required fields are marked *

Language
Close