About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಅಜೇಯ ಭಾರತ, ಅಟಲ ಬಿಜೆಪಿ: ಮೋದಿ ಘೋಷ

ಮುಂಬರುವ ಲೋಕಸಭಾ ಚುನಾವಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಣಕಹಳೆ ಊದಿದ್ದು, “ಅಜೇಯ ಭಾರತ, ಅಟಲ ಬಿಜೆಪಿ” ಘೋಷವಾಕ್ಯ ಮೊಳಗಿಸಿದ್ದಾರೆ.

ಬಿಜೆಪಿ  ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, “48 ವರ್ಷಗಳ ಕಾಲ ಒಂದು ಕುಟುಂಬ ಮಾಡಿದ ಸಾಧನೆ ಹಾಗು ಪ್ರಸಕ್ತ ಸರಕಾರ ಕಳೆದ 48 ತಿಂಗಳಲ್ಲಿ ಮಾಡಿದ ಮಾಡಿದ ಸಾಧನೆಗಳನ್ನು ತುಲನೆ ಮಾಡಿ ನೊಡಬೇಕಿದೆ” ಎಂದು ಪ್ರಧಾನಿ ಹೇಳಿದ್ದಾಗಿ ತಿಳಿಸಿದ್ದಾರೆ.

“ಮಾಜಿ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿಗೆ ಪ್ರಧಾನಿ ಒಂದೇ ವಾಕ್ಯದಲ್ಲಿ ನುಡಿನಮನ ಸಲ್ಲಿಸಿ, ಅಜೇಯ ಭಾರತ, ಅಟಲ ಬಿಜೆಪಿ ಎನ್ನುವ ಮೂಲಕ ದೇಶವನ್ನು ಯಾರಿಂದಲೂ ಒಡೆಯಲು ಬಿಡಬಾರದು ಹಾಗು ಬಿಜೆಪಿಯ ಪ್ರತಿಯೊಬ್ಬರು ಪಕ್ಷದ ಸಿದ್ಧಾಂತಕ್ಕೆ ಕಟಿಬದ್ಧರಾಗಿರುತ್ತಾರೆ” ಎಂದು ಪ್ರಧಾನಿ ಘೋಷದ ಕುರಿತಂತೆ ಪ್ರಸಾದ್‌ ತಿಳಿಸಿದ್ದಾರೆ.

“ಈ ಮುನ್ನ ಕಣ್ಣಲ್ಲಿ ಕಣ್ಣಿಟ್ಟು ಒಬ್ಬರನ್ನೊಬ್ಬರು ನೋಡಲು ಹಿಂಜರಿಯುತ್ತಿದ್ದ ಮಂದಿಯೆಲ್ಲ ಇದೀಗ ಬಿಜೆಪಿ ವಿರುದ್ಧ ಮಃಆಘಟಬಂಧನ ಮಾಡಿಕೊಂಡು ಮುಂದೆ ಬರುತ್ತಿದ್ದಾರೆ. ಇದೇ ನಮ್ಮ ಅತಿ ದೊಡ್ಡ ಸಾಧನೆ. ಸರಕಾರವನ್ನು ಅಧಿಕಾರದ ಮೂಲವನ್ನಾಗಿ ನೋಡದೇ ಜನರಿಗೆ ಸಹಾಯ ಮಾಡುವ ಮಾಧ್ಯಮವನ್ನಾಗಿ ನೋಡಲು. ಮಾನವೀಯ ಮೌಲ್ಯಗಳುಳ್ಳ ಅಭಿವೃದ್ಧಿಗಾಗಿ ಸರಕಾರ ಕಟಿಬದ್ಧವಾಗಿದೆ” ಎಂದ ಪ್ರಧಾನಿ 2019ರ ಲೋಕಸಭಾ ಚುನಾವಣೆಗೆ ಜನತೆ ತಮ್ಮ ಸರಕಾರದ ಮೇಲೆ ಅಗಾಧ ನಂಬಿಕೆ ಇಟ್ಟಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close