About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮಹಾಘಟಬಂಧನ ಯಾವಾಗ ಮುರಿದುಬೀಳಲಿದೆ ಎಂಬುದೇ ಪ್ರಶ್ನೆ: ಪ್ರಧಾನಿ

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸಾಕಷ್ಟು ವಿಷಯಗಳ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸವಿಸ್ತಾರವಾಗಿ ವಿವರಿಸಿದ್ದಾರೆ.

ಮೋದಿ ಸಂದರ್ಶನದ ಆಯ್ದ ಕೆಲ ಮಾತುಗಳು

  1. ರಾಷ್ಟ್ರೀಯ ಪೌರತ್ವ ನೋಂದಣಿಯಿಂದಾಗಿ ನಾಗರಿಕ ಯುದ್ಧ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, “ಆತ್ಮ ವಿಶ್ವಾಸ ಕಳೆದುಕೊಂಡಿರುವ ಮಂ‌ದಿಗೆ ಜನಪ್ರಿಯತೆ ಕುಂದುವ ಭೀತಿ ಉಂಟಾಗಿದ್ದು ನಮ್ಮ ದೇಶದ ಸಂಸ್ಥೆಗಳ ಮೇಲೂ ವಿಶ್ವಾಸ ಕಳೆದುಕೊಂಡಿರುವ ಕಾರಣ ರಕ್ತಪಾತ, ದೇಶವನ್ನು ಹೋಳು ಮಾಡುವ ಕುರುತಂತೆ ಮಾತನಾಡುತ್ತಾರೆ. ದೇಶದ ನಾಡಿ ಮಿಡಿತದಿಂದ ಅವರು ಸಾಕಷ್ಟು ದೂರವಿದ್ದಾರೆ” ಎಂದಿದ್ದಾರೆ.
  2. ದೇಶದ ಯಾವ ಪ್ರಜೆಯೂ ದೇಶ ಬಿಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಅಗತ್ಯ ಪ್ರಕ್ರಿಯೆಯಂತೆ, ಎಲ್ಲ ಸಂಭವನೀಯ ಅವಕಾಶಗಳನ್ನು ಅವರಿಗೆ ನೀಡಿ, ಅವರ ಸಮಸ್ಯೆಗಳನ್ನು ಬಗೆಹರಿಸಲು ನೋಡಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ
  3. ಕಳೆದೊಂದು ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿಯಾಗಿದ್ದು, ಉದ್ಯೋಗ ಸೃಷ್ಟಿ ಕುರತಂತೆ ಹಬ್ಬಿಸಲಾಗುತ್ತಿರುವ ಸುಳ್ಳು ಪ್ರಚಾರಕ್ಕೆ ಅಂತ್ಯ ಬರಬೇಕು ಎಂದಿದ್ದಾರೆ.
  4. ಕಲ್ಲು ತೂರಾಟದ ಕುರಿತು ಮಾತನಾಡಿದ ಪ್ರಧಾನಿ, “ಕೇವಲ ಒಂದು ಘಟನೆಯೂ ದುರದಷ್ಟಕರ. ಪ್ರತಿಯೊಬ್ಬರೂ ರಾಜಕೀಯದಿಂದ ಆಚೆ ಬಂದು ದೇಶದಲ್ಲಿ ಶಾಂತಿ ನೆಲೆಸಲು ಕೈಜೋಡಿಸಬೇಕು. ಈ ಕುರಿತು ನಾನು ಹಾಗು ನನ್ನ ಪಕ್ಷ ಸ್ಪಷ್ಟವಾಗಿ ಹೇಳಿದ್ದೇವೆ” ಎಂದಿದ್ದಾರೆ.
  5. ಗಬ್ಬರ್‌ ಸಿಂಗ್ ಟ್ಯಾಕ್ಸ್ ಎಂದು ಜಿಎಸ್‌ಟಿಯನ್ನು ಲೇವಡಿ ಮಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕುರಿತು ಮಾತನಾಡಿದ ಮೋದಿ, “ಗುಜರಾತ್‌ ಚುನಾವಣೆ ಸಂದರ್ಭ ಜಿಎಸ್‌ಟಿ ವಿರುದ್ಧ ಅಪಪ್ರಚಾರ ಮಾಡಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಾಕಷ್ಟು ಪ್ರಯತ್ನಿಸಿದರು. ಆದರೂ ಜನರೇಕೆ ಅವರನ್ನು ನಿರಾಕರಿಸಿದರು?” ಎಂದು ಪ್ರಶ್ನಿಸಿದ್ದಾರೆ.
  6. ವಿಪಕ್ಷಗಳ ಒಗ್ಗಟ್ಟಿನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೋದಿ, “ಲೋಕಸಭೆಯಲ್ಲಿ ಅವಿಶ್ವಾಸ ಮತಯಾಚನೆ ಹಾಗು ರಾಜ್ಯ ಸಭಾ ಉಪ ಚೇರ್ಮನ್‌ ಆಯ್ಕೆಯ ಎರಡು ಪ್ರಹಸನಗಳು ನಿಮಗೆ ಈ ನಿಟ್ಟಿನಲ್ಲಿ ಉತ್ತರ ನೀಡುತ್ತವೆ” ಎಂದು ಹೇಳಿದ್ದಾರೆ.
  7. ಲೋಕಸಭೆಯಲ್ಲಿ ತಮ್ಮನ್ನು ದೀಢೀರ್‌ ಎಂದು ಅಪ್ಪಿಕೊಂಡ ರಾಹುಲ್ ಕುರಿತಂತೆ, “ರಾಹುಲ್‌ರ ಈ ನಡೆ ಅಪ್ರಬುದ್ಧವಾದದ್ದೋ ಇಲ್ಲವೋ ಎಂದು ತೀರ್ಮಾನ ಮಾಡುವುದು ನಿಮಗೇ ಬಿಟ್ಟಿದ್ದು. ಮತ್ತೊಮ್ಮೆ ವಿಡಿಯೋ ವೀಕ್ಷಿಸಿ ಕಣ್ಣು ಮಿಟುಕಿಸಿದ್ದನ್ನು ನೋಡಿದಲ್ಲಿ ನಿಮಗೆ ಉತ್ತರ ಸಿಗಲಿದೆ” ಎಂದು ಹೇಳಿದ್ದಾರೆ.
  8. “ಮಹಾಘಟಬಂಧನವು ಕುಟುಂಬ ರಾಜಕಾರಣಗಳ ಅಡ್ಡೆಯಾಗಿದ್ದು ಅಭಿವೃದ್ಧಿಯ ವಿಷಯದ ಆಧಾರ ಮೇಲೆ ಆಗುತ್ತಿಲ್ಲ. ಅವರೆಲ್ಲ ಚುನಾವಣೆಗೂ ಮುನ್ನ ಬೇರೆಯಾಗುವರೋ ಅಥವಾ ಬಳಿಕ ಆಗುವರೋ ಎಂಬುದೊಂದೇ ಪ್ರಶ್ನೆ ನಮ್ಮ ಮುಂದಿದೆ” ಎಂದು ಮೋದಿ ಹೇಳಿದ್ದಾರೆ.
  9. “ಮೀಸಲಾತಿ ಮುಂದುವರೆಯಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಮೀಸಲಾತಿ ಕುರಿತಂತೆ ಪ್ರಧಾನಿ ಹೇಳಿದ್ದಾರೆ.
  10. “ನೆರೆಹೊರೆ ದೇಶಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಲು ಬಯಸುತ್ತೇವೆ ಎಂದು ನಾನು ಸದಾ ಹೇಳುತ್ತಲೇ ಬಂದಿದ್ದೇನೆ. ಚುನಾವಣೆಯಲ್ಲಿ ಜಯಿಸಿದ ಇಮ್ರಾನ್ ಖಾನ್‌ಗೆ ಕರರೆ ಮಾಡಿ ಶುಭಾಶಯ ಕೋರಿದ್ದೇನೆ. ಭಯೋತ್ಪಾದನೆಯಿಂದ ಮುಕ್ತವಾದ ಸುರಕ್ಷಿತ, ಸುಭದ್ರ, ಸ್ಥಿರ ಹಾಗು ಸಮೃದ್ಧ ಪ್ರದೇಶದ ನಿರ್ಮಾಣಕ್ಕೆ ಪಾಕಿಸ್ತಾನ ಪ್ರಯತ್ನಿಸಲಿದೆ ಎಂದು ಆಶಿಸುತ್ತೇನೆ” ಎಂದು ಮೋದಿ ತಿಳಿಸಿದ್ದಾರೆ.
Tags

Related Articles

Leave a Reply

Your email address will not be published. Required fields are marked *

Language
Close