About Us Advertise with us Be a Reporter E-Paper

Breaking Newsದೇಶಪ್ರಚಲಿತ

ಮೋದಿ ಹೇಳಿಕೆಗೆ ದಾಖಲೆಗಳ ಮೂಲಕವೇ ತಿರುಗೇಟು ನೀಡಿದ ಕಾಂಗ್ರೆಸ್‌‌

ದೆಹಲಿ: ಪಂಜಾಬ್ ಸರಕಾರದಿಂದ ಒಬ್ಬೇ ಒಬ್ಬ ರೈತನ ಸಾಲವೂ ಮನ್ನಾ ಆಗಿಲ್ಲ ಎಂಬ ಮೋದಿ ಹೇಳಿಕೆಗೆ ಕಾಂಗ್ರೆಸ್ ಸಂಸತ್‌ನಲ್ಲಿ ದಾಖಲೆಗಳ ಮೂಲಕವೇ ಉತ್ತರ ನೀಡಿದೆ.

ಸಾಲಮನ್ನಾದ ಫಲಾನುಭವಿಗಳಾಗಿರುವ 4,14,285 ರೈತರ ದಾಖಲೆಗಳ ಗಂಟನ್ನೇ ಸಂಸತ್‌ಗೆ ತಂದ ಕಾಂಗ್ರೆಸ್ ಸಂಸದ ಸುನೀಲ್ ಜಾಖರ್ ಅವುಗಳನ್ನು ಪ್ರದರ್ಶಿಸುವ ಮೂಲಕ ಮೋದಿ ಅವರ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.

ಇತ್ತೀಚೆಗೆ ಧರ್ಮಶಾಲದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಪಂಜಾಬ್ ಸರಕಾರ ರೈತರ ಸಾಲಮನ್ನಾ ಘೋಷಿಸಿದೆಯಾದರೂ, ಒಬ್ಬೇ ಒಬ್ಬ ರೈತನ ಸಾಲವೂ ಮನ್ನಾ ಆಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close